ಪುಟ:ಶ್ರೀಮತಿ ಪರಿಣಯಂ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮತೀಪರಿಣಯಂ ನಿಜವಾಗಿಯೂ ಇವನಿಗೆ ವಿವಾಹಾಪೇಕ್ಷೆಯು ಹುಟ್ಟಿರುವುದೋ ತಿಳಿಯಲಿಲ್ಲ! ಈಗ ನಾನು ಯಾವ ಉತ್ತರವನ್ನು ಹೇಳಲಿ ! " (ಎಂದು ಯೋಚಿಸುತ್ತ ನಿಲ್ಲುವಳು.) ಪಕ್ವತಂ-ಮಹಾರಾಜ್‌ ! ಏನನ್ನು ಯೋಚಿಸುತ್ತಿರುವೆ ? ನಿನ್ನ ಅಭಿಪ್ರಾ ಯವೇನು ಹೇಳು ! ದೇವಾಂಗನೆಯರನ್ನೂ ಕಣ್ಣೆತ್ತಿ ನೋಡದ ನನಗೆ, ನಿನ್ನ ಮಗಳೊಡನೆ ಗ್ರಹಧರವನ್ನು ನಡೆಸಬೇಕೆಂಬ ಆಸೆ ಹುಟ್ಟಿದುದು ನಿನ್ನ ಭಾಗ್ಯವೆಂದೇ ತಿಳಿ ! ಅಂತಹ ನಾನು ಕನ್ಯಾ ರಿಯಾಗಿ ನಿನ್ನನ್ನು ಯಾಚಿಸುತ್ತಿರುವಾಗ, ನೀನು ಎಷ್ಟೋ ಸಂತೋಷಪಡಬೇಕಾದ ಸಂದರ್ಭದಲ್ಲಿ ಚಿಂತಿಸುತ್ತಿರುವೆಯಲ್ಲಾ! ರಾಣಿ (ಸ್ವಗತಂ) ಇವರ ಅಭಿಪ್ರಾಯವೇನೆಂದು ತಿಳಿಯುವುದಕ್ಕಿಲ್ಲ: ಹೇ ಗಾದರೂ ಆಗಲಿ! ಅರ್ಥಿಗಳಾಗಿ ಬಂದ ಮಹರ್ಷಿಗಳನ್ನು ತಿರಸ್ಕ ರಿಸಿ ಅವರ ಕೋಪಕ್ಕೆ ಗುರಿಯಾಗಬಾರದು, (ಪ್ರಕಾಶಂ) ಮ ನೀಂದ್ರಾ ! ಇದರಲ್ಲಿ ಚಿಂತಿಸಬೇಕಾದುದೇನಿದೆ? ಪರಮಭಾಗವ ತೋತ್ತಮರಾದ ನೀವು ನನ್ನ ಮಗಳನ್ನು ಬಯಸುವುದಾದರೆ, ಅದು ನಮ್ಮ ಭಾಗ್ಯವಿಶೇಷವೆಂಬುದರಲ್ಲಿ ಸಂದೇಹವೇನಿದೆ ? ಕ ನ್ಯಾದಾನಕ್ಕೆ ತಮಗಿಂತಲೂ ಸತ್ಪಾತ್ರವೆಲ್ಲಿ ದೊರೆಯುವುದು ? ಆದರೆ ತಾವು ಈ ವಿಚಾರವನ್ನು ಮಹಾರಾಜನಲ್ಲಿಯೇ ತಿಳಿಸಿದ್ದ ರೆ ಉತ್ತಮವಾಗಿತ್ತು ! ಸ್ತ್ರೀಯರು ಯಾವವಿಧದಲ್ಲಿಯೂ ಅಸ್ವತಂತ್ರರಲ್ಲವೆ ? ಪಕ್ವತಂ-ಮಹಾರಾಣೀ ! ಹಾಗಲ್ಲ ! ಕನ್ಯಾವಿವಾಹವಿಷಯದಲ್ಲಿ ಹೆತ್ತ ತಾಯಿಯ ಇಷ್ಟವೇ ಮುಖ್ಯವಾದುದು! ನೀನು ಇಷ್ಟಪಟ್ಟ ಪ ಕ್ಷದಲ್ಲಿ, ಮಹಾರಾಜನು ಅದಕ್ಕೆ ವಿರುದ್ಧವಾಗಿ ನಡೆಯಲಾರನು. ಬೇಕಾದರೆ ನಾನೇ ಮಹಾರಾಜನಲ್ಲಿ ತಿಳಿಸುವೆನು, ಮೊದಲು ಈ ಗ ನೀನು ವಾಗ್ದಾನವನ್ನು ಮಾಡು ! ರಾಣಿ -ಪೂಜ್ಯರೆ! ನನ್ನ ಅಡ್ಡಿಯೇನೂ ಇಲ್ಲ ! ನಾನು ಮನಃಪೂರಕವಾ ಗಿ ಸಮ್ಮತಿಸುವೆನು.