ಪುಟ:ಶ್ರೀಮತಿ ಪರಿಣಯಂ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾಂಕ೦. ಪಕ್ವತಂ-ಇಷ್ಮೆ ನನ್ನ ಕೋರಿಕೆ, ನಿನ್ನ ಸಖಿಯೇಕೆ ಇನ್ನೂ ಬರಲಿಲ್ಲ ! ಅದೋ ಬರುತ್ತಿರುವಳು. (ಸಖಿಯು ಪ್ರವೇಶಿಸುವಳು.) ಸಖಿ ದೇವಿ ! ನಾರದಮಹರ್ಷಿಯು ಮಾಧ್ಯಾಕ್ಸಿ ಡ್ರಾಗಿ ನದಿಗೆ ಹೋಗಿ ರುವರಂತೆ? ಪಕ್ವತಂ-ಹಾಗಿದ್ದರೆ ನಾನೂ ನಡಿಗೆ ಹೋಗಿಬರುವೆನು, (ಹೋಗುವನು.) (ಮಹಾರಾಷ್ಟ್ರೀಯು ತನ್ನಲ್ಲಿ ತಾನು ಯೋಚಿಸುತ್ತಿರುವಳು-) ಸಖಿ -ದೇವಿ! ಇದೇನು? ಏನೋ ಯೋಚಿಸುತ್ತಿರುವಹಾಗಿದೆ?ವಿಶೇಷವೇ ನೂ ಇಲ್ಲವಷ್ಟೆ ? ರಾಣಿ -ಸಖಿ : ದೈವಫುಟನೆಯನ್ನು ಯಾರೂ ಕಂಡವರಿಲ್ಲವೆಂದು ಈಗ್ಗೆ ಸ್ವಲ್ಪ ಮೊದಲು ನೀನು ಹೇಳಿದ ಮಾತು, ಈಗಾಗಲೇ ನನ್ನ ನಿದರ್ಶನಕ್ಕೆ ಬಂದಿತು. ನಮ್ಮ ಕುಮಾರಿಯ ವಿವಾಹವು ಸ ಮೀಪಿಸಿದಂತೆ ತೋರುವುದು. ಸಖಿ-ಸಂಭ್ರಮದಿಂದ) ದೇವಿ ! ಅದು ಹೇಗೆ? ವರನು ಯಾರು ? ರಾಣಿ -ಸಖಿ!ಈ ವಿಚಾರವನ್ನು ನಾನು ಬಹಳ ರಹಸ್ಯವಾಗಿಡಬೇಕಾದರೂ ನೀನು ನನಗೆ ಆಪ್ತಸಖಿಯಾದುದರಿಂದ ನಿನ್ನಲ್ಲಿ ಬಚ್ಚಿಡಲಾರೆನು. ಈಗ ಬಂದಿದ್ದ ಪತಮಹರ್ಷಿಯೇ ಕನ್ಯಾರ್ಥಿಯಾಗಿ ಬಂದು ನನ್ನಲ್ಲಿ ಯಾಚಿಸಿದನು. ಸಖಿ-(ನಗುತ್ತ)ದೇವಿ! ಇದುವರೆಗೆ ರಾಜಕುಲದಲ್ಲಿಯೇ ಅನುರೂಪನಾ ದ ವರನಿಲ್ಲವೆಂದು ಎಲ್ಲರನ್ನೂ ನಿರಾಕರಿಸುತಿದ್ದ ನೀನು, ಕೊನೆಗೆ ಈ ಶೈತ್ರಿಯರಿಗೆ ನಿನ್ನ ಮಗಳನ್ನು ಕೊಟ್ಟು ಮದುವೆಮಾಡ ಬೇಕಾಯಿತೆ ? ರಾಣಿ-ಸಖಿ! ಆ ಚಿಂತೆಯು ನನಗೆ ಎಳ್ಳಷ್ಟಾದರೂ ಇಲ್ಲ! ಆದರೆ ಆಮಹ ರ್ಷಿಯು ತಾನಾಗಿ ನನ್ನ ಮಗಳನ್ನು ಮೋಹಿಸದಹಾಗೆ ಹೇಳು ವನು ನಿಜವಾಗಿ ಮೋಹಿಸಿರುವನೋ, ಅಥವಾ ನನ್ನ ಮನಸ್ಸನ್ನು ಪರೀಕ್ಷಿಸುವುದಕ್ಕಾಗಿ ಕೇಳಿರುವನೋ ತಿಳಿಯಲಿಲ್ಲ! ನಿಜವನ್ನು ತಿಳಿಯದೆ ನನ್ನ ಮನಸ್ಸು ಕಳವಳಿಸುತ್ತಿರುವುದು.