ಪುಟ:ಶ್ರೀಮತಿ ಪರಿಣಯಂ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾಂಕಂ. ܘܐ ಸಖಿ-ಅಪ್ಪಣೆ ! (ಸಖಿಯು ಹೋಗುವಳು) ರಾಣಿ-ನಾಥಾ ! ಬೇರೇನೂ ಇಲ್ಲ ! ದೈವಫುಟನೆಯು ಬಹಳ ವಿಚಿತ್ರ ವಾಗಿದೆ ! ನಮ್ಮ ಶ್ರೀಮತೀಕುಮಾರಿಯ ವಿವಾಹವಿಷಯದಲ್ಲಿ (ಎಂದು ಹೇಳುವಷ್ಟರಲ್ಲಿ ಆರ್ಥೋಕ್ರಿಯಲ್ಲಿ.) ರಾಜಂ-ಸರಿ ! ಸರಿ ! ನಾನೂ ಅದನ್ನೇ ನಿನಗೆ ಹೇಳುವುದಕ್ಕಾಗಿ ಬಂದೆನು, ಈ ವಿಚಾರವು ನಿನಗೆ ಹೇಗೆ ತಿಳಿಯಿತು ? ರಾಣಿ-ಆ ಮಹರ್ಷಿಯೇ ಈಗ ನನ್ನಲ್ಲಿಗೆ ಬಂದಿದ್ದರು. ರಾಜಂ-ಅವರು ನನ್ನೊಡನೆ ಮಾಧ್ಯಾ ಕಕ್ಕಾಗಿ ನದಿಗೆ ಹೋಗುವಂತೆ ಹೇಳಿ ಹೋದರು. ನಿನ್ನನ್ನು ಯಾವಾಗ ನೋಡಿರಬಹುದು? ರಾಣಿ-ಇಲ್ಲಿಗೆ ಬಂದು ನನ್ನನ್ನು ನೋಡಿದಮೇಲೆ,ನದಿಗೆ ಹೋಗುವುದಾಗಿ ಹೇಳಿ ಹೋದರು. ರಾಜಂ-ಇರಬಹುದು ! ಆ ಮಹರ್ಷಿಯು ಈ ವಿಚಾರವಾಗಿ, ನಿನ್ನನ್ನು ಕಂಡು ಮಾತಾಡುವುದಾಗಿ ಹೇಳಿದ್ದರು. ಇಲ್ಲಿ ನಿನ್ನನ್ನು ನೋಡಿದಮೇಲೆ ಸ್ಪಾ ನಾರ ವಾಗಿ ಹೋಗಿರಬಹುದು, ಅದು ಹೋಗಲಿ ! ಈಗ ನಿನ್ನ ಇಷ್ಟವೇನು ಹೇಳು ! ಅದನ್ನು ತಿಳಿಯು ವುದಕ್ಕಾಗಿಯೇ ನಾನು ಇಲ್ಲಿಗೆ ಬಂದೆನು. ರಾಣಿ-ನಾಥಾ! ಇದರಲ್ಲಿ ನನ್ನ ಇಷ್ಟವೇನಿದೆ? ಆ ಮಹರ್ಷಿಯು ಕೇಳಿದ ಮೇಲೆ ನಾವು ನಿರಾಕರಿಸುವುದಕ್ಕಾದೀತೆ ? ಈ ವಿಚಾರದಲ್ಲಿ ನಾನು ಅಸ್ವತಂತ್ರಳಾದರೂ, ನನ್ನ ಸಮ್ಮತಿಯನ್ನು ನಾನು ತಿಳಿಸಿ ಬಿಟ್ಟೆನು.ಇದರಮೇಲೆ ನಿನ್ನ ಇಷ್ಟಾನುಸಾರವಾಗಿ ನಡೆಸಬಹುದು. ರಾಜಂ-ದೇವಿ ! ನನ್ನ ಇಷ್ಟಕ್ಕೆ ನೀನು ವಿರುದ್ಧವಾಗಿ ನಡೆಯಲಾರೆಯೆಂಬ ಭರವಸದಿಂದ ನಾನೂ ಹಾಗೆಯೇ ಆ ಮಹರ್ಷಿಗೆ ವಾಗ್ದಾನ ವನ್ನು ..ಾಡಿರುವೆನು, ನಿನಗೆ ಈ ವಿಚಾರವು ಸಮ್ಮತವೋ, ಇಲ್ಲವೋ ಎಂದು ನಾನು ಬಹಳ ಭಯಪಡುತಿದ್ದೆನು, .ದೈವಾ ಥೀನದಿಂದ ನಮ್ಮಿಬ್ಬರ ಅಭಿಪ್ರಾಯವೂ ಏಕೀಭವಿಸಿತು! ಅನು ಕೂಲದಾಂಪತ್ಯದ ಲಕ್ಷಣವೇ ಇದು ! ನನಗೆ ನೀನು ಅರ್ಥಾಂಗಿ