ಪುಟ:ಶ್ರೀಮತಿ ಪರಿಣಯಂ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮತೀಪರಿಣಯಂ ಯೆಂಬುದು ಇದರಿಂದಲೇ ಸ್ಪಷ್ಟವಾಗುವುದು, ದೇವಿ! ಇನ್ನು ಗಾಲವಿಳಂಬವು ಸಾಕು ! ವಿವಾಹಕ್ಕೆ ಬೇಕಾದ ಸನ್ನಾ ಹಗಳೆಲ್ಲ ವನ್ನೂ ಸಿದ್ಧಪಡಿಸುವೆವು. ರಾಣಿ-ನಾಥಾ ! ಹೌದು ! ಶುಭಕಾಲ್ಯವನ್ನು ಶೀಘ್ರದಲ್ಲಿಯೇ ನಡೆಸಿ, ಬಿಡಬೇಕು. ರಾಜಂ-ಯಾರಲ್ಲಿ ! ಕಂಚುಕಿಯು-(ಪ್ರವೇಶಿಸಿ) ಮಹಾರಾಜನೆ ! ಏನಪ್ಪಣೆ ! ರಾಜಂ- ಜಯಂಧರಾ ! ಈಗಲೇ ನೀನು ಹೋಗಿ, ವಿವಾಹಕ್ಕೆ ಬೇಕಾದ ಸಕಲಸನ್ನಾ ಹಗಳನ್ನೂ ಸಿದ್ಧಪಡಿಸುವಂತೆ ನಮ್ಮ ಗೃಹಾಧ್ಯಕ್ಷ ನಿಗೆ ತಿಳಿಸು ! ನಮ್ಮ ಶ್ರೀಮತೀಕುಮಾರಿಯನ್ನು ದೇವರ್ಷಿ ಯಾದ ನಾರದನಿಗೆ ಕೊಟ್ಟುರಾಣಿ-ನಗುತ್ತ) ನಾಥಾ ! ಇದೇನು ? ಈ ಸಂತೋಷಸಂಭ್ರಮದಲ್ಲಿ ವರನ ಹೆಸರನ್ನೇ ಮಾರಿಸಿಬಿಟ್ಟೆಯಲ್ಲಾ ! ಪರತಮಹರ್ಷಿಯೆಂ ದು ಹೇಳು ! ರಾಜಂ- ಪ್ರಿಯೆ ! ಚೆನ್ನಾಯಿತು ! ಆ ಮಹರ್ಷಿಗಳ ಹೆಸರಿನಲ್ಲಿ ನಿನಗೇ ಭ್ರಾಂತಿಯುಂಟಾಗಿರುವಹಾಗಿದೆ, ನಮ್ಮಲ್ಲಿ ಕನ್ಯಾಕ್ಕಿಯಾಗಿ ಬಂ ಡಿದವನು ನಾರದನು ! ರಾಣಿ-ನಾಥಾ ! ಇಲ್ಲ ! ನಾರದನನ್ನು ನಾನು ಕಾಣೆನೆ ? ನನ್ನಲ್ಲಿಗೆ ಬಂ ದಿದ್ದವನು ಪರತಮುನಿ. ರಾಜಂ-(ಬೆಜ್ಜರಬಿದ್ದು) ಏನು ? ನಿಜವಾಗಿಯೂ ನಿನ್ನಲ್ಲಿ ಬಂದಿದ್ದವನು ಪರೈತನೆ ? ರಾಣಿ-ನಾಧಾ ! ನಿಜವಲ್ಲದೆ ನಿನ್ನೊಡನೆ ನಾನು ಸುಳ್ಳಾಡುವೆನೆ ? ನಿಜ ವಾಗಿಯೂ ನನ್ನಲ್ಲಿ ಬಂದು ಕೇಳಿದವನು ಪಕ್ವತನು. ರಾಜಂ- ಪರತನಿಗೇ ನೀನು ನಿನ್ನ ಮಗಳನ್ನು ಕೊಡುವುದಾಗಿ ವಾಗ್ದಾನ ಮಾಡಿದುದು ?