ಪುಟ:ಶ್ರೀಮತಿ ಪರಿಣಯಂ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾ೦ಕಂ. ೬೩ ರಾಣಿ-ಹೌದು ! ಪರೈತನಿಗೇ ನಾನು ಮಾತುಕೊಟ್ಟುದು. ರಾಜO-ಚಿಂತೆಯಿಂದ ನಿಟ್ಟುಸಿರನ್ನು ಬಿಟ್ಟು ಪ್ರಿಯೆ! ನಾವು ಮೋಸ ಹೋದೆವು! ನಾರದಮುನಿಯು ನನ್ನಲ್ಲಿ ಬಂದು ಕೇಳಿದುದರಿಂದ ಅವನಿಗೆ ನಾನು ವಾಗ್ದಾನವನ್ನು ಮಾಡಿಬಿಟ್ಟೆನು. ದೇವಿ! ಕೇವಲ ವಿರಕ್ತನಾದ ಅನಾರದನು ನನ್ನೊಡನೆ ವಿವಾಹಪ್ರಸ್ತಾವವನ್ನು ಎತ್ತಿದಾಗಲೇ ನನಗೆ ಸಂದೇಹವು ಹುಟ್ಟಿತು. ಈಗ ಆ ಸಂದೇ ಹವು ಸ್ಥಿರಪಟ್ಟಿತು ! ಆ ಮಹರ್ಷಿಗಳಿಬ್ಬರೂ ತಮ್ಮೊಳಗೆ ತಾವು ರಹಸ್ಯದಲ್ಲಿ ಮಾತಾಡಿಕೊಂಡು, ನಮ್ಮನ್ನು ಪರೀಕ್ಷಿಸು ವುದಕ್ಕಾಗಿಯೇ ಹೀಗೆ ಮಾಡಿರುವರು ! ಈಗ ನಮ್ಮಿಬ್ಬರಲ್ಲಿ ಯಾರ ಮಾತು ಸುಳ್ಳಾಗಬೇಕು?'ಪ್ರಿಯೆ ! ಮುಖ್ಯವಾಗಿ ನಾವು ಧರಸಂಕಟದಲ್ಲಿ ಸಿಕ್ಕಿಬಿದ್ದೆವು, ಮಾಡುವುದೇನು ? ರಾಣಿ -ನಾಥಾ ! ಮೊದಲು ಆ ಪಕ್ವತಮುನಿಯು ಬಂದು ನನ್ನನ್ನು ಕೇಳಿದಾಗ, ನನಗೂ ಆ ಸಂದೇಹವೇ ಹುಟ್ಟಿತು. ಹಾಗಿದ್ದರೂ ಆ “ಮಹರ್ಷಿಯು ಹೇಳಿದ ಮಾತುಗಳು ನಿರ್ವಂಚನೆಯಾಗಿ ತೋರಿದುದರಿಂದ, ನಾನು ಸಮ್ಮತಿಸಬೇಕಾಯಿತು. ನಮ್ಮಿಬ್ಬ ರನ್ನೂ ಧರಸಂಕಟದಲ್ಲಿ ಸಿಕ್ಕಿಸಿ ವಂಚಿಸುವುದಕ್ಕಾಗಿಯೇ ನಾರ ದನು ಈ ಸಂವಿಧಾನವನ್ನು ಮಾಡಿರಬಹುದೆಂದು ಈಗ ಚೆನ್ನಾಗಿ ಸ್ಪಷ್ಟವಾಗುವುದು. ರಾಜಂ- (ಆಲೋಚಿಸಿ) ದೇವಿ ! ಹಾಗೆ ನಿರ್ಧರಿಸುವುದಕ್ಕೂ ಸಾಧ್ಯವಿಲ್ಲ! ಸಾಧುವತ್ಸಲನಾದ ನಾರದನು ನನ್ನನ್ನು ವಂಚಿಸುವನೆಂದು ನನಗೆ ತೋರಲಿಲ್ಲ ! ನಮ್ಮನ್ನು ವಂಚಿಸಿ ಅವನಿಗಾಗಬೇಕಾದು ದೇನು ? ಕಾಲವಶದಿಂದ ಎಂತಹ ಜಿತೇಂದ್ರಿಯರಿಗಾದರೂ ಬು `ಯು ಕದಲುವುದುಂಟು ? ಅದರಂತೆ ಆ ತಾಪಸರಿಬ್ಬರೂ ನಿಜ ವಾಗಿಯೇ ನಮ್ಮ ಮಗಳ ರೂಪಕ್ಕೆ ಮೋಹಿಸಿ, ಒಬ್ಬರೊಬ್ಬರಿಗೆ ತಿಳಿಯದೆ ರಹಸ್ಯದಲ್ಲಿ ತಮ್ಮ ಕಾಠ್ಯಸಿದ್ಧಿಗಾಗಿ ಯತ್ನಿಸಿದ್ದರೂ ಇರಬಹುದು, ಇಬ್ಬರೂ ಮಹಾತಪಸ್ವಿಗಳು! ಅವರಿಬ್ಬರೂ