ಪುಟ:ಶ್ರೀಮತಿ ಪರಿಣಯಂ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮತೀಪರಿಷಯಂ ಆಶೋತ್ತರವನ್ನಿಟ್ಟುಕೊಂಡು ಹೋಗಿರುವರು. ಅವರಲ್ಲಿ ಯಾ ರನ್ನು ತಿರಸ್ಕರಿಸಬಹುದು ? ನಮಗಿರುವವಳೂ ಒಬ್ಬಳೇ ಮಗಳು ! ಅವಳನ್ನು ಒಬ್ಬನಿಗೆ ಕೊಟ್ಟರೆ, ಮತ್ತೊಬ್ಬನಿಗೆ ಕೋಪವುಂಟಾಗುವುದೇನೋ ಸಹಜವು! ನಮ್ಮಿಬ್ಬರಲ್ಲಿ ಯಾ ರಾದರೂ ಒಬ್ಬರು ಆಡಿದ ಮಾತಿಗೆ ತಪ್ಪಿದಂತೆಯೂ ಆಗುವುದು, ಅವರಿಬ್ಬರ ಮನಸ್ಸಿಗೂ ಅಸಮಾಧಾನವಿಲ್ಲದೆ, ನಾ ವೂ ದೋಷಭಾಗಿಗಳಾಗದೆ ಇರುವುದಕ್ಕೆ ಈಗ ಯಾವ ಉಪಾಯ ವನ್ನು ಮಾಡಬಹುದು. ! (ಸ್ವಲ್ಪಹೊತ್ತಿನವರೆಗೆ ಆಲೋಚಿಸಿ) ಪ್ರಿಯೆ! ಈವಿಚಾರದಲ್ಲಿ ನನಗೊಂದುಪಾಯವು ತೋರಿರುವುದು. ನಾಳೆ ಆ ನಾರದಪರೈತರಿಬ್ಬರಿಗಾಗಿಯೇ ಸ್ವಯಂವರವನ್ನೇ ರಡಿಸುವೆವು, ನಮ್ಮ ಕುಮಾರಿಯು ಅವರಿಬ್ಬರಲ್ಲಿ ತನ್ನ ಮನಸ್ಸಿ ಗೊಪ್ಪಿದವನನ್ನು ವರಿಸಲಿ ! ಆಗ ನಮ್ಮ ಮೇಲಿನ ಭಾರವು ತಪ್ಪ ವುದು, ತಮ್ಮ ರೂಪಸಂಪತ್ತಿಯಿಂದ, ಕಸ್ಯೆಯ ಮನಸ್ಸನ್ನು ಮೋಹಗೊಳಿಸತಕ್ಕ ಭಾರವು ಆವರಮೇಲೆಯೇ ಬಿಳುವುದು! ಇದೇ ಈಗ ನನಗೆ ಕಾಲೋಚಿತವಾದ ಉಪಾಯವೆಂದು ತೋರು ವುದು, ನಿನ್ನ ಅಭಿಪ್ರಾಯವೇನು ಹೇಳು ! ರಾಣಿ-ಇದರಮೇಲೆ ನಾನು ಹೇಳತಕ್ಕದ್ದೇನಿದೆ? ರಾಜಂ-ಹಾಗಿದ್ದರೆ ಬಾ ಹೋಗುವೆವು! ಆಮಹರ್ಷಿಗಳಿಬ್ಬರೂ ಇಷ್ಟರಲ್ಲಿ ಸ್ನಾನವನ್ನು ಮುಗಿಸಿಕೊಂಡು ಬಂದಿರಬಹುದು.ಅವರಿಗೆ ಆತಿಥ್ಯ ವನ್ನು ನಡೆಸಿದಮೇಲೆ, ನಾವೇ ವಿನಯಪೂರಕವಾಗಿ ಈ ವಿಚಾರವನ್ನು ತಿಳಿಸಿಬಿಡುವೆವು (ಎಂದುಹೋಗುವರು,) ಇದು ಮೂರನೆಯ ಅಂಕವು. ಈute