ಪುಟ:ಶ್ರೀಮತಿ ಪರಿಣಯಂ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-++ಚ ತು ಥಾ ೯ 0 ಕ ವು: rw ಆಸ್ಥಾನ:-ಪುರವೀಥಿ (ನಾರದನು ಆಶಾಂಭಂಗದಿಂದ ಚಿಂತಾಕುಲನಾಗಿ ಪ್ರವೇಶಿಸುವನು.) ನಾರದಂ-(ಕೈಹಿಸುಕುತ್ತ) ಆಹಾ ! ಎಂತಹ ಮೋಸವಾಯಿತು ! ನಾನು ಮಾಧ್ಯಾಹ್ನ ಕಕ್ಕಾಗಿ ನದಿಗೆ ಹೋಗಿ ಬರುವಷ್ಟರಲ್ಲಿ, ಆ ಪರ್ವ ತನು ಏನೋ ಕಪಟತಂತ್ರವನ್ನು ಮಾಡಿ ನನ್ನ ಉದ್ದೇಶಕ್ಕೆ ಭಂಗ ವನ್ನು ತಂದುಬಿಟ್ಟನಲ್ಲಾ!ಆ ಪರ್ವತಸಿಗೂ,ಹೀಗೆ ಸಿಮೋಹ ವು ಹುಟ್ಟುವುದೆಂದು ನಾನೆಂದಿಗೂ ಎಣಿಸಿರಲಿಲ್ಲ.ಪರ್ವತನು ಆಗ ಉದ್ಯಾನದಿಂದ ಏಕಾಕಿಯಾಗಿ ಎದ್ದು ಹೊರಟುಹೋದಾಗಲೇ ನನಗೆ ಸಂದೇಹವು ಹುಟ್ಟಿತು, ಅವನು ಆಗಿನಿಂದ ನನ್ನ ಕಣ್ಮರೆ ಯಾಗಿ ತಿರುಗುತ್ತಿರುವುದಕ್ಕೂ ಈಗ ಕಾರಣವು ಸ್ಪಷ್ಟವಾ ಯಿತು! ಆಪರ್ವತನು ನನ್ನೊಡನೆ ಸ್ಪರ್ಧೆಗೆ ನಿಂತು, ಕಲಹ ವನ್ನೆ ಬ್ಬಿಸಿರುವುದರಿಂದಲೇ, ರಾಜನು ನಾಳೆ ನಮ್ಮಿಬ್ಬರಿಗಾಗಿ ಸ್ವಯಂವರವನ್ನೇರ್ಪಡಿಸುವುದಾಗಿ ಹೇಳಿರುವನು. ಮುಖ್ಯವಾಗಿ ನಾನು ಮಾಡಿದುದು ತಪ್ಪ ! ರಾಜನು ತನ್ನ ಮಗಳನ್ನು ನನಗೆ ವಿವಾಹಮಾಡಿಕೊಡುವ ವಿಷಯದಲ್ಲಿ ಸ್ವಲ್ಪ ಮಾತ್ರಸಮ್ಮತಿಯ ನ್ನು ತೋರಿಸಿದಮಾತ್ರಕ್ಕೆ,ಅಲ್ಪಸಂತೋಷಿಯಾದ ನಾನು, ಆಷ್ಟ ರಲ್ಲಿಯೇ ತೃಪ್ತನಾಗಿ ಬಂದುಬಿಟ್ಟೆನು, ಆಗಲೇ ನಾನು ಆರಾಜ ನಿಂದ ಇನ್ನೂ ದೃಢವಾದ ವಾಖ್ಯಾನವನ್ನು ಪಡೆದು ಬಂದಿದ್ದರೆ, ಇಷ್ಟಕ್ಕೆ ಅವಕಾಶವಾಗುತ್ತಿರಲಿಲ್ಲ. ಅಥವಾ ಕಾರಸಿದ್ಧಿಯಾಗು ವವರೆಗೆ ನಾನು ಆರಾಜನ ಹಿಂದೆಯೇ ತಿರುಗುತಿದ್ದರೂ, ಅವನ ಮನಸ್ಸನ್ನು ಕೆಡಿಸುವುದಕ್ಕೆ ಪರ್ವತನಿಗೆ ಅವಕಾಶವು ಸಿಕ್ಕುತಿ ರ ಲಿಲ್ಲ. ಮುಖ್ಯವಾಗಿ ನಾನು ಈ ಸಮಯದಲ್ಲಿ ಮಾಧ್ಯಾಕ್ಷಿಕ