ಪುಟ:ಶ್ರೀಮತಿ ಪರಿಣಯಂ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ಥಾಂಕಂ, ೬೧ ವಿಷ್ಣು -- ಮುನಿಂದ್ರಾ ! ಸುಖಾಗಮನವೆ ! ಇದೇನು ? ಆಕಸ್ಮಿಕವಾಗಿ ನೀನಿಲ್ಲಗೆ ಬರಲು ಕಾರಣವೇನು ? ವಿಶೇಷವೇನೂ ಇಲ್ಲವಷ್ಟೆ ? ನಾರದಂದೇವಾ ! ಈಗ ನಾನೊಂದು ಅವಶ್ಯಕಾರವನ್ನು ದ್ವೇಶಿಸಿಯೇ ನಿನ್ನಲ್ಲಿಗೆ ಬಂದಿರುವೆನು.ಭಕ್ತವತ್ಸಲನಾದ ನೀನು ನನ್ನ ಉದ್ದೇಶ ರಿಸಿಕೊಡಬೇಕು. ವಿಷ್ಣು - ನಾರದಮುನೀಂದ್ರಾ ! ಸಂಕೋಚವೇಕೆ ? ನಿನ್ನ ಅಭಿಮತವನ್ನು ತಿಳಿಸು, ಅವಶ್ಯವಾಗಿ ನಡೆಸಿಕೊಡುವೆನು. ಇದಕ್ಕಾಗಿ ಇಷ್ಟೊಂ ದು ಪೂರೈಪೀಠಿಕೆಯೇಕೆ ? ಕಂ || ಮನಮೊಲ್ಕು ಭಜಿಪ ಭಕ್ತರ ಮನೋಭಿಮತಸಿದ್ಧಿಗೆಡೆಯನೀಯದಿರಲ ಮೇ ದಿನಿಯೊಳಕ್ಕೆ ಭಕ್ತ ಪರಾಧೀ ನನೆಂಬ ಬಿರುದೆನಗೆ ವಿಫಲನಾಗದೆ ಪೇಳ |! ಆದುದರಿಂದ ನಾನು ತಪ್ಪದೆ ನಿನ್ನ ಉದ್ದೇಶವನ್ನಿಡೇರಿಸಿ ಕೊ ಡುವೆನು, ನಿಸ್ಸಂಕೋಚವಾಗಿ ಕೇಳಬಹುದು. ನಾರದಂ-ದೇವಾ ! (ಸಂಕೋಚದಿಂದ) ಅಂಬರೀಷಮಹಾರಾಜನಿಗೆ ಶ್ರೀಮತಿಯೆಂಬ ಕನೈಯೊಬ್ಬಳಿರುವಳು, ನಾನು ಸಂಚಾರವಶ ದಿಂದ ಆ ರಾಜನ ಪಟ್ಟಣಕ್ಕೆ ಹೋದಾಗ, ಆಕಸ್ಮಾತ್ತಾಗಿ ಅವ ಳನ್ನು ನೋಡಿದೆನು. ಅವಳ ರೂಪಲಾವಣ್ಯಗಳಿಗೆ ಮೋಹಿ ತನಾಗಿ, ಅವಳನ್ನು ವಿವಾಹಮಾಡಿಕೊಳ್ಳಬೇಕೆಂಬ ಆಸೆಯಿಂದ ನಾನು ರಾಜನನ್ನು ಕೇಳಿಕೊಂಡೆನು. ರಾಜನು ನನ್ನ ಪ್ರಾರನೆಯ ನ್ನು ನಡೆಸಿಕೊಡುವುದಾಗಿ ವಾಗ್ದಾನಮಾಡುವಷ್ಟರಲ್ಲಿ, ನ ಪ್ರೊಡನೆ ಬಂದಿದ್ದ ಪರ್ವತನೂ, ಆ ಕನೈಯಮೇಲೆ ಕಣ್ಣಿಟ್ಟು, : * ಅಕೆಯನ್ನು ತನಗೆ ವಿವಾಹಮಾಡಿಕೊಳ್ಳಬೇಕೆಂದು ಪ್ರಯತ್ನಿ ಸಿದನು. ರಾಜನು ನಮ್ಮಿಬ್ಬರಲ್ಲಿ, ಯಾರನ್ನೂ ನಿರಾಕರಿಸಲಾ ರದೆ, ನಾಳೆ ನಮ್ಮಿಬ್ಬರಿಗಾಗಿಯೇ ಸ್ವಯಂವರವನ್ನೇರ್ಪಡಿಸಿ