ಪುಟ:ಶ್ರೀಮತಿ ಪರಿಣಯಂ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.೬೬ ಶ್ರೀಮಶೀಪರಿಣಯಂ ಯಿತಲ್ಲವೆ?ಅಯ್ಯೋ ಪಾಪ!ಆ ಪರೈತನು ಕಪಿಮುಖದಿಂದಬಂದು ಆ ಸ್ವಯಂವರಮಂಟಪದಲ್ಲಿ ಕುಳಿತಾಗ, ಅವನ ಅವಸ್ಥೆಯೇ ನಾಗಬೇಕು ? ರಾಜಕುಮಾರಿಯು ಅವನ ಮುಖವನ್ನು ನೋಡಿದ ಮಾತ್ರಕ್ಕೆ ಎಷ್ಟು ಅಸಹ್ಯಪಡುವಳು! ಅವನನ್ನು ಕಂಡೊಡನೆ ರಾಜದೂತರನ್ನು ಕರೆಸಿ, ಹೊರಕ್ಕೆ ನೂಕಿಸುದರಲ್ಲಿಯೂ ಸಂ ದೇಹವಿಲ್ಲ. ಅಬ್ಬಾ ! ಈ ಸಂದರ್ಭದಲ್ಲಿ ಪರ್ವತನಿಗುಂಟಾಗ ಬಹುದಾದ ಅವಮಾನವೆಷ್ಟೆಂಬುದನ್ನು ಯೋಚಿಸಿದರೆ, ನನಗೇ ನಾಚಿಕೆಯಾಗುತ್ತಿರುವುದು. ಛೇ ! ಭೀ ! ನನಗೆಮಾತ್ರ ಈ ವಿಧವಾದ ಅವಮಾನವೇನಾದರೂ ಸಂಭವಿಸುವಹಾಗಿ ದರೆ, ಆಗಲೇ ನಾನು ಪ್ರಾಣತ್ಯಾಗವನ್ನು ಮಾಡುತಿದ್ದೆನೇ ಹೊರತು, ಈ ಭೂಮಿಯಲ್ಲಿ ತಲೆಯೆತ್ತಿ ಜೀವಿಸುತ್ತಿರಲಿಲ್ಲ ! ಆದರೆ ಮಾಡುವುದೇನು ? ಆ ಪರ್ವತಸಿಗೆ ಇಂತಹ ಅವಮಾನ ವನ್ನನುಭವಿಸಬೇಕಾಗಿದ್ದುದರಿಂದಲೇ, ಅವನಿಗೆ ನನ್ನೊಡನೆ ಸ್ಪ ರ್ಧೆಗೆ ನಿಲ್ಲುವಹಾಗೆ ವಿಪರೀತಬುದ್ದಿಯೂ ಹುಟ್ಟಿತು ! ಸಿ ಮೋಹದಿಂದ ಮುಂದುಗಾಣದೆ ಪ್ರವರ್ತಿಸತಕ್ಕವರ ಬಾಳೇ ಇದು! (ಸುತ್ತಲೂ ನೋಡಿ) ಇದೇನು ? ರಾಜನು ಸ್ವಯಂವರ ಕ್ಯಾಗಿ ನಿರ್ಣಯಿಸಿದ ಕಾಲವು ಆಗಲೇ ಸಮೀಪಿಸುತ್ತಬಂದಿತು. ಇನ್ನೂ ಪಕ್ವತವೇಕೆ ಬರಲಿಲ್ಲ ! ಒಂದುವೇಳೆ ಅವನು ಆ ರಾಜಕು ಮಾರಿಗೆ ಮನಸೊಪ್ಪುವಹಾಗೆ ದೇಹವನ್ನು ಶೃಂಗರಿಸಿಕೊಳ್ಳುವ ಪ್ರಯತ್ನದಲ್ಲಿ ಹೀಗೆ ವಿಳಂಬಮಾಡುತ್ತಿರಬಹುದೆ? (ನಕ್ಕು) ಕಪಿ ಮುಖಕ್ಕೆ ಎಷ್ಟಲಂಕಾರವನ್ನು ಮಾಡಿದರೇನು ? ಮನಸ್ಯಪ್ತಿ ಯಾಗುವವರೆಗೂ ಮಾಡಲಿ ! ಪಾಪ! ಅವನು ಇಲ್ಲಿಗೆ ಬರುವಾಗ ಮನಸ್ಸಿನಲ್ಲಿ ಎಷ್ಟೋ ಆಶೋತ್ತರದಿಂದ ಬರುವನು. ತನಗಾ ಗುವ ಅವಮಾನವನ್ನು ಬಲ್ಲನೆ? ಇರಲಿ! ಅವನು ಬರವಷ್ಟರಲ್ಲಿ ನಾನೂ ಈ ಸಭಾಮಂಟಪವನ್ನು ಸುತ್ತಿಬರುವೆನು. (ಹೋಗುವನು) ಅ|