ವಿಷಯಕ್ಕೆ ಹೋಗು

ಪುಟ:ಶ್ರೀಮತೀ ಪರಿಣಯ ನಾಟಕಂ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೨. ಶ್ರೀಮತೀಪರಿಣಯಂ .ವಿಷ್ಣು -ಓ ಮಹರ್ಷಿಗಳೇ ! ಈಗಲೂ ನಿಮ್ಮ ಗೌರವಕ್ಕೂ, ತಪಶ್ಯಕ್ತಿ ಗೂ ಏನೂ ಕೊರತೆಯಿಲ್ಲ. ನನ್ನ ಮಾಯೆಯು ಎಂತವರಿಗಾದ ರೂ ದುರತಿಕ್ರಮವು, ನಿಮ್ಮ ಯತ್ನ ವೇನಿದೆ ? ಇನ್ನು ಮೇಲೆ ನೀವು ಮೊದಲಿನಂತೆಯೇ ಲೋಕಕ್ಕೆ ಜ್ಞಾನೋಪದೇಶಕರಾಗಿ ಸಂಚರಿಸಬಹುದು. ಈ ರಾಜನಲ್ಲಿ ನಿಮ್ಮ ಶಾಪವು ವಿಫಲವಾಯಿ ತೆಂದು ಹೇಳಿದಿರಲ್ಲವೆ ? ಒಂದುವೇಳೆ ನಾನಾದರೂ ನಿಮ್ಮ ಶಾಪವನ್ನು ಪ್ರತಿಗ್ರಹಿಸುವೆನೇ ಹೊರತು, ಭಕ್ತನಾದ ಈ ಆ೧ ಬರೀಷನ ಅಪಾಯವನ್ನು ಸಹಿಸಲಾರೆನು, ನಿಮ್ಮ ಗೌರವಕ್ಕೂ, ನಿಮ್ಮ ತಪಶ್ಯಕಿಗೂ ಇದರಿಂದ ಕುಂದಕವಿಲ್ಲವೆಂಬ ವಿಷಯದ ಸ್ತ್ರೀ ಲೋಕಕ್ಕೆ ನಂಬಿಕೆಯುಂಟಾಗುವಂತೆ ನಾನೇ ನಿಮ್ಮ ಶಾಪ ಕ್ಕೆ ಗುರಿಯಾಗುವೆನು. ನಾರದಂ-ನಮ್ಮ ಬುದ್ಧಿಮೋಹಕ್ಕೂ ನಿನ್ನ ಮಾಯೆಯೇ ಕಾರಣವೆಂದು ಹೇಳಿದೆಯಲ್ಲವೆ ? ನೀನೇ ನಮಗೆ ಈ ಮೋಹವನ್ನುಂಟು ಮಾಡಿ, ನಾವು ಕಾಮಿಸಿದ ಕಳ್ಳಿಯನ್ನ ಪಹರಿಸಿದುದರಿಂದ, ನೀನೂ ಈ ಶ್ರೀಮತಿಯೊಡನೆ ಮನುಷ್ಯನಾಗಿ ಹುಟ್ಟಿ, ಈ ನಿನ್ನ ಪತ್ನಿ ಯನ್ನು ಬೇರೊಬ್ಬರು ಅಪಹರಿಸಿಕೊಂಡುಹೋಗುವುದರಿಂದ ನೀನು ಕೆಲವು ಕಾಲದವರಿಗೆ ನಮ್ಮಂತೆ ವಿಯೋಗದುಃಖವನ್ನನುಭವಿಸ ಬೇಕು, ನೀನು ನಮ್ಮಲ್ಲಿ ವಾತ್ಸಲ್ಯವುಳ್ಳವನಾಗಿ, ಈ ಶಾಪವನ್ನು ಪ್ರತಿಗ್ರಹಿಸಿದರೆ, ಲೋಕಕ್ಕೆ ನಮ್ಮಲ್ಲಿ ಗೌರವಬುದ್ಧಿಯು ತಪ್ಪ ಲಾರದು. ವಿಷ್ಣು --ನಾರದಾ ! ಸಂತೋಷಪೂರಕವಾಗಿ ಪರಿಗ್ರಹಿಸುವೆನು, ನಾನು ಇದಕ್ಕೆ ಮೊದಲೇ ಲೋಕಕ್ಷೇಮಕ್ಕಾಗಿ ಮನುಷ್ಯರೂಪದಿಂದ ಅವತರಿಸಬೇಕೆಂದು ಸಂಕಲ್ಪಿಸಿದ್ದೆನು. ನಿನ್ನ ಶಾಹವು ಅದಕ್ಕೆ ಸಹಕಾರಿಯಾಗಲಿ! ಕೇಳು