ವಿಷಯಕ್ಕೆ ಹೋಗು

ಪುಟ:ಶ್ರೀಮತೀ ಪರಿಣಯ ನಾಟಕಂ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಥಮಾಂಕ೦. (ತೆರೆಯಲ್ಲಿ ನಾವ್ಯಧ್ವನಿಯಾಗುವುದು.) ಸೂತ್ರ-(ಕಿವಿಗೊಟ್ಟು ಕೇಳಿ) ಆಹಾ ! ಏನಿದು ! ಎಲ್ಲಿಯೋ ಗೀತವಾದ್ಯ ಗಳೊಡಗೂಡಿದ ನಾಟೈಧ್ವನಿಯು ಕೇಳಿಸುತ್ತಿರುವುದು! (ಪಾರಿಪಾರ್ಶ್ವಕನು ಸಂಭ್ರಮಹಿಂದ ಬಂದು) ಪಾರಿ... ಭಾವಾ : ತ್ವರಮಾಡು ! ತ್ವರೆಮಾಡು ! ದೇವರಾಜನಾದ ಮ ಹೇಂದ್ರನು, ಈಗಿನ ಶರನ್ಮಹೋತ್ಸವವನ್ನು ಅತಿವೈಭವದಿಂದ ನಡೆಸಬೇಕೆಂದುದ್ದೇಶಿಸಿ, ಆ ಉತ್ಸವಕಾರಸಿಲ್ವಾಹಕ್ಕಾಗಿ ಮನ್ಯ ಥನನ್ನೇ ನಿಯಮಿಸಿರುವನು. ಇದರಿಂದ ಕಾಮದೇವನು, ಆ ೫ ತೃವಕಾಲದಲ್ಲಿ ನಡೆಸಬೇಕಾದ ಗಾನನರ್ತನಾದಿ ಸಕಲಸನ್ನಾ ಹಗಳನ್ನು ಬಹಳಶ್ರದ್ಧೆಯಿಂದ ಸಿದ್ಧಗೊಳಿಸಿರುವನು. ಈ ಮ ಹೋತ್ಸವಾನಂದವನ್ನನುಭವಿಸುವುದಕ್ಕಾಗಿ ಸಮಸ್ತದೇವ ದಂಪತಿಗಳ ಸರಾಭರಣಭೂಷಿತರಾಗಿ ಬಂದು ನೆರೆಯುತಿ ರುವರು. ಈ ಉತ್ಸವಾವಲೋಕನಕ್ಕಾಗಿ ನಾರದಾದಿಮಹ ರ್ಷಿಗಳೂ ಬರುತ್ತಿರುವರು. ಬಾ ! ನಾವೂ ಹೋಗುವೆವು! ಸೂತ್ರ ಸಂತೋಷದಿಂದ) ಓಹೋ ! ನಮ್ಮ ನಾಟಕಾರಂಭವೇ ಇದು! ಭದ್ರಕಾ ! ನೀನು ನನ್ನ ಪತ್ನಿ ಯನ್ನು ಕರೆದುಕೊಂಡು ಈಗಲೇ ಅಲ್ಲಿಗೆ ಹೊರಡು! ಇದೊ! ನಿಮ್ಮ ಹಿಂದೆಯೇ ನಾನೂ ಬಂದು ಸೇರುವೆನು. ಪಾರಿಅಪ್ಪಣೆ ! ಪಾರಿಪಾರ್ಶ್ವಕನು ಹೋಗುವನು.) ಸೂತ್ರ - -ಏತ್ರನೆ : ಸಾ ! ನಾವೂ ಅಲ್ಲಿಗೆ ಹೋಗುವೆವು! ವಿದೂ -- ಹಿಮ್ಮೊಗನಾಗಿ ತಿರುಗಿ) ಭರತಾಚಾಯ್ಯಾ ! ನೀನು ಹೋಗು! ನಾನೊಲ್ಲೆನು! ಊಟಮಾಡಿ ಸುಖವಾಗಿ ಮಲಗುವೆನು. ಸೂತ್ರ- ವಿದೂಷಕನ ಕೈಹಿಡಿದು ) ಏತ್ರನೆ ! ಏನಿದು ! ಆ ಮ ಹೋತ್ಸವಾನಂದವನ್ನನುಭವಿಸುವುದರಲ್ಲಿ ಒಬ್ಬೊಬ್ಬರೂ ಅ ಷ್ಟೊಂದು ಕುತೂಹಲವನ್ನು ತೋರಿಸುತ್ತಿರುವಾಗ, ನಿನಗೆ ಮಾತ್ರ ಬೇಸರವೇಕೆ ?