ಶ್ರೀಮಪರಿಣಯಂ ಮನ್ಮಥಂ-(ನಾರದನನ್ನು ನೋಡಿ ಹಾಸ್ಯ ಪೂರೈಕವಾಗಿ) ಓ ನಾರದಮು - ನೀಂದ್ರಾ ! ನಿಷ್ಕಾರಣವಾದ ಈ ಸಿನ್ನ ಆಗ್ರಹವು, ಈ ಸಭೆಯ ↑ ನನಗೆ ನಡೆದ ಸನ್ಮಾನವಿಷಯದಲ್ಲಿ ಸಿನಗುಂಟಾದ ಅಸಹನ ವನ್ನು ಹೊರಪಡಿಸುವುದೇ ಹೊರತು ಬೇರೆಯಲ್ಲ ! ದೇವೇಂದ್ರ ನು ಈಗ ನನ್ನನ್ನು ಗೌರವಿಸಿದ ಮಾತ್ರಕ್ಕೆ ನಿನ್ನ ಗೌರವಕ್ಕೆ ಬಂದಹಾಸಿಯೇನು ? ಯುಕ್ತಾಯುಕ್ತ ವಿವೇಚನ ಪರನಾದ ಈ ದೇವೇಂದ್ರನು, ಕಾಲೋಚಿತವಾಗಿಯೇ ನಡೆಸಿರುವನು. ಇ೦ ತಹ ಸಭೆಗಳಲ್ಲಿ ನಡೆಯಬೇಕಾದ ಅಗ್ರಪೂಜೆಗೆ ನಾನೇ ಬಾಧ್ಯನು! ಇಲ್ಲಿ ನಡೆಯುತ್ತಿರುವ ಶಾರದೋತ್ಸವವು ಕೇವಲ ಭೋಗಪ್ಪ ಧಾನವಾದುದು! ರೂಪವತಿಯರಾದ ಈ ಅಪ್ಪರಸ್ತ್ರೀಯರು ! ಆನಂದಕರಗಳಾದ ಅವರ ಗಾನ ನರ್ತನಗಳು ! ಈ ಸುಗಂಧ ಸಾಮಗ್ರಿಗಳು : ಈ ಹಂಸತೂಲಿಕಾತಲ್ಪಗಳು! ಹೀಗೆಯೇ ಇಂದ್ರಿಯತೃಪ್ತಿಗಾಗಿ ಏರ್ಪಟ್ಟಿರುವ ಭೋಗಸಾಮಗ್ರಿಗ ಳೆಲ್ಲವೂ ನನ್ನ ಸೇನಾಪರಿಕರಗಳಲ್ಲವೆ ? ಇವಕ್ಕೆಲ್ಲಾ ನಾನೇ ನಿರಾಹಕನಾದುದರಿಂದ, ಇಲ್ಲಿ ನಡೆಯಬೇಕಾದ ಸನ್ಮಾ ನವು 'ನನಗಲ್ಲದೆ ನಿನ್ನಂತಹ ಯೋಗಿಗಳಿಗಲ್ಲ ! ನನ್ನ ಗೌರವ ಸ್ಥಾನವೇ ಬೇರೆ ! ನಿಮ್ಮ ಗೌರವಸ್ಥಾನವೇ ಬೇರೆ ! ವೈದಿಕಗೊ ಹಿಗಳಲ್ಲಿಯೂ, ಯಜ್ಞಶಾಲೆಗಳಲ್ಲಿಯೂ, ಋಷ್ಯಾಶ್ರಮಗಳ ಕ್ಲಿಯೂ, ದೇವಾಲಯಗಳಲ್ಲಿಯೂ ನಿಮಗೆ ನಡೆಯಬೇಕಾದ ಗೌರವಗಳೆಲ್ಲವೂ ನಡೆಯುತ್ತಲೇ ಇರುವವು ಅಂತಹ ಸ್ಥಳಗಳಲ್ಲಿ ನನ್ನನ್ನು ಕೇಳುವವರಾರು? ಸತ್ಯೇಶ್ವರನಾದ ಆ ಪರಮಪುರುಷನ ಆಜ್ಞಾನುಸಾರವಾಗಿ ಒಬ್ಬೊಬ್ಬರು ಒಂದೊಂದು ಕಾರಕ್ಕೆ ನಿರಾಹಕರಾಗಿರುವರು. ವೃ|| ಧರೆಯಂ ಪಟ್ಟಿ ಸಿದಾತನೋರ್ವನವನಾಂತಿಪ್ಪಾಣತನೋರ್ವ೦ ಕರಂ || ಪೊರೆವಾತ೦ ಸೆರನೊರ್ವ್ವನಂತದನೆ ತಾಂಕೊಲ್ನಾತನೊರ್ವ್ವ೦ ಪರಾ।
ಪುಟ:ಶ್ರೀಮತೀ ಪರಿಣಯ ನಾಟಕಂ.djvu/೨೩
ಗೋಚರ