ದ್ವಿತೀಯಾ೦ಕಂ. ೨ ಪರ್ವತ-ಈ ನಿನ್ನ ಅದ್ಭುತಕೀರ್ತಿಯನ್ನು ಕೇಳಿಯೇ ನಾವೂ ನಿನ್ನ ದರ್ಶನ ದಿಂದ ಧನ್ಯರಾಗಬೇಕೆಂದು ಇಲ್ಲಿಗೆ ಬಂದವರೇಹೊರತು, ಬೇರೆ ಯಾವ ಕಾರೊದ್ದೇಶದಿಂದಲೂ ಬಂದವರಲ್ಲ. ರಾಜೇಂದ್ರಾ! ನಿನಗೂ, ನಿನ್ನೆ ರಾಜ್ಯಾಂಗಗಳಿಗೂ, ನಿನ್ನ ಪ್ರಜೆಗಳಿಗೂ ಕುಶಲ ವಷ್ಟೆ ? ರಾಜಂ-ಪೂಜ್ಯರೆ ! ನಿಮ್ಮಂತಹ ಮಹಾತ್ಮರ ಪೂರ್ಣಾನುಗ್ರಹಕ್ಕೆ ಪಾ ತ್ರನಾಗಿರುವಾಗ, ನನ್ನ ಕ್ಷೇಮಕ್ಕೆ ಯಾವಭಾಗದಲ್ಲಿ ಕೊರತೆಯುಂ “ಹಾಗಿದ್ದರೂ, ಭಗವಾಯೆಯ ಪ್ರಭಾವವನ್ನೂ, ಪ್ರಕೃತಿ ಬದ್ದವಾದ ಈ ಪ್ರಪಂಚದ ಸ್ಥಿತಿಗತಿಗಳನ್ನೂ ಕರತಲಾಮಲಕ ದಂತೆ ಸಾಕ್ಷಾತ್ಕರಿಸಬಲ್ಲ ನಿಮಗೆ, ಈಗ ನಾನು ಹೊಸದಾಗಿ ತಿಳಿಸ ಬೇಕಾದುದೇನು ? ಲೋಕದಲ್ಲಿ ಸಂಸಾರಿಯಾದ ಮನುಷ್ಯನು, ಎಷ್ಟೆಭಾಗ್ಯಶಾಲಿಯಾಗಿರಲಿ! ಎಷ್ಮೆ ಬಲಪರಾಕ್ರಮವುಳ್ಳವ ನಾಗಿರಲಿ ! ಪ್ರತ್ರಕಳತ್ರಾಏಮೋಹಪಾಶದಲ್ಲಿ ಸಿಕ್ಕಿರುವವರೆಗೆ, ಅವನಿಗೆ ಕ್ಷೇಮವೆಂಬ ಮಾತೇ ಸುಳ್ಳು! ಅವನ ಮನಸ್ಸು ಅನವ ರತವೂ ಯಾವುದಾದರೂ ಒಂದು ಚಿಂತೆಯಿಂದ ಕುದಿಯುತ್ತ ಲೇ ಇರುವುದು. ನಾರದಂ-ಆಹಾ ! ಏನಿದು ! ಭಗವದ್ಗುಣಾಮೃತಪಾನದಿಂದ ನಿತ್ಯಸಂ ತೋಷಿಯಾದ ನಿನಗೂ ಕುಟುಂಬಚಿಂತೆಯೆ ? ನಿನ್ನ ಚಿಂತೆಗೆ ಕಾ ರಣವೇನು ? ರಾಜಂ- ಪೂಜ್ಯರೆ ! ಕಂ । ಕ್ಷಿತಿಯೊಳಗೆಣಿಸ೮೯ 'ಕನ್ಯಾ | ಪಿತೃತ್ವಮೇ ದುಖಹೇತು” ಎಂಬೀನುಡಿ ನಿ! ಶಿತವೆಂಬುದಕ್ಕೆ ನನ್ನೀ | ಸ್ಥಿತಿಯೆ ನಿದರ್ಶನಮೆನಿಪ್ಪದೀಗಳ* ನಿಜದಿಂ || ಪೂಜ್ಯರೆ ನನಗೆ ಶ್ರೀಮತಿಯೆಂಬ ಕನ್ಯಯೊಬ್ಬಳಿರುವಳು. ನನ್ನ ಪುಣ್ಯಫಲವೇ ಮೂರ್ತೀಭವಿಸಿದಂತೆ, ಸಕಲಗುಣಸಂಪನ್ನೆ ಯಾದ
ಪುಟ:ಶ್ರೀಮತೀ ಪರಿಣಯ ನಾಟಕಂ.djvu/೪೦
ಗೋಚರ