ವಿಷಯಕ್ಕೆ ಹೋಗು

ಪುಟ:ಶ್ರೀಮತೀ ಪರಿಣಯ ನಾಟಕಂ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮತೀಪರಿಣಯಂ ಕೇತಾರಗಳ-ರೂಪಕತಾಳ. ಅಂತರಂಗದ 1 ಚಿಂತೆಯೆನ್ನ ನು 1 ಸಂತತ ಬಾಧಿಪ !! ದಂತ | ಎಂತು ನೋಡಿದೊ ಡೆನ್ನ ಮನವು : ಶಾಂತಿಯ ನೊಂದದೆ 1 ಸಂತ ಪಿಪದು!! ಇಂದುವದನೆ ಯೆನ್ನ ನಂದನೆ ! ಕುಂದಕುಸುಮ ! ಸುಂದರರದನೆ 1 ಸುಂದರಾಂಗನ ಕೈಯ ಪಿಡಿದು | ಚಂದದಿ ನಡೆವುದನೆಂದು ನಾನೊಟ್ಟೆನೋ! ಅಂಗನಾಜನವೆಲ್ಲ ಕೂಡಿ | ತುಂಗವಿಭವದಿಂದ ಪಾಡಿ|| ಮಂಗಳಾಂಗಿಗೆ ಪರಿಣಯೋಚಿತ ( ಮಂಗ ! ಇಂಗಳ 1 ನೆಂದು ಮಾನ್ಸರೆ! ಸಖಿ-ದೇವಿ! ಸುಮ್ಮನೆ ಚಿಂತಿಸಿ ಫಲವೇನು? ಹೆಣ್ಣುಮಕ್ಕಳನ್ನು ಪಡೆದ ವರಿಗೆ ಹೇಗಿದ್ದರೂ ಈ ಚಿಂತೆಯು ತಪ್ಪಿದುದಲ್ಲ ! ಲೋಕಯಾ ತ್ರೆಯೇ ಹೀಗೆ? ಕಾಲವು ಅನುಕೂಲಿಸಿಬಂದರೆ, ನಮ್ಮ ಪ್ರಯತ್ನ ವಿಲ್ಲದಂತೆಯೇ ಕಾರವು ನಡೆದುಹೋಗುವುದು ! ಆದುವರೆಗೆ ಮನಸ್ಸಮಾಧಾನದಿಂದ ನಿರೀಕ್ಷಿಸಬೇಕಾದುದೊಂದೇ ನಮ್ಮ ಕಾರವು. ರಾಣಿ-ಸಖಿ : ಇನ್ನು ಕಾಲನಿರೀಕ್ಷಣೆಯಿಂದತಾನೇ ಫಲವೇನು ? ಎಲ್ಲಾ ದೇಶದ ರಾಜಕುಮಾರರ ಭಾವಚಿತ್ರಗಳನ್ನೂ ತರಿಸಿನೋಡಿದು ನಾಯಿತಲ್ಲವೆ? ನಮ್ಮ ರಾಜಕುಲದಲ್ಲಿ ಇದುವರೆಗೆ ಸಿಕ್ಕದ ವರನು ಮುಂದೆಲ್ಲಿ ಸಿಕ್ಕುವನು ? ಸಖಿ-ದೈವಘಟನೆಯನ್ನು ಯಾರು ಬಲ್ಲರು ? ರಾಜಕುಲದವನಿಲ್ಲದಿದ್ದರೆ ಅದಕ್ಕಿಂತಲೂ ಉತ್ತಮಕುಲದವನೇ ನಿನ್ನ ಮಗಳಿಗೆ ಪ್ರತಿಯಾಗಿ ಏರ್ಪ್ಪಡಬಹುದು ? ಅಥವಾ ಯಾವನಾದರೂ ದಿವ್ಯಪುರುಷ ನೊಬ್ಬನು ಬಂದು, ನಿನ್ನ ಮಗಳನ್ನು ವರಿಸಿದರೂ ವರಿಸಬಹುದು. ಇನ್ನು ನೀನು ಅದರ ಚಿಂತೆಯನ್ನು ಬಿಟ್ಟುಬಿಡು! (ಪತಮುನಿಯು ಪ್ರವೇಶಿಸುವನು.) ರಾಣಿ-(ಸಂಭ್ರಮದಿಂದೆದ್ದು) ಪೂಜ್ಯರೆ ! ವಂದಿಸುವೆನು. ಪಕ್ವತಂ-ದೇವಿ ! ನಿನಗೆ ಶುಭವಾಗಲಿ ! ರಾಣಿ-ಈ ಪೀಠವನ್ನಲಂಕರಿಸಬೇಕು !