೩೮ ಶ್ರೀಮತಿಪರಿಯಂ ಹ್ಯವುಂಟಾಗುವಂತೆ ವರವನ್ನು ಪಡೆದುಬರುವೆನು, ಈ ಸಂದರ್ಭ ದಸ್ವಕಾರಸಾಧನೆಯೊಡನೆ ಆ ನಾರದನಿಗೆ ದೊಡ್ಡ ಅವಮಾನ ವನ್ನೂ ಉಂಟುಮಾಡದಿದ್ದರೆ ನಾನು ಪಕ್ವತನೆ? ಇನ್ನು ಕಾಲ ವಿಳಂಬವು ಸಾಕು ! (ಹೋಗುವನು.) ಆಸ್ಥಾನ - ರಾಬ್ಬಿ. (ಮಹಾವಿಷ್ಣುವು ಶೇಷಶಯನದಲ್ಲಿ ಲಕ್ಷ್ಮಿದೇವಿಯೊಡನೆ ಪಗಡೆಯನಾಡುತ್ತಿರುವನು.) ರಾಗ : ತಾಳ. ವಿಷ್ಣು- ನೋಡು ನೋಡೆಲೆ | ನೀರಜ್ಞಾಕ್ಷಿ ನಾ | ನಾಡುವಾಟವ|| ನೀಗಲೆ 11 ಕಾಂತೆಯೆನ್ನೊಳ | ಗಿಂತು ಪಂಥವ | ನಾಂತು ನೀ ಜೈಸುವ / ಚಿಂತೆಯ ಬಿಡುಬಿಡು || ಲಕ್ಸಿ - ನೋಡಲೇಕೆ 1 ಬಲ್ಲೆ ನಿನ್ನ | ಗಾಡಿತನವನು | ಕಾಂತಕೇಳ€ 11, ಕಾಲಸೂತ್ರದ 1 ಜಾಲದಿಂ ಭವ ! ನಾಳಿಯನಾಡಿನ ಲೀಲೆಯಿದಲ್ಲವು || ವಿಷು - ಸುಂದರೀಮಣಿ 1 ಮುಂದೆ ನೋಡಿದೊ | ಕೊಂದೆನು ಕಾಯ್ದಳ | ಹಿಂದಕೆ ತೆಗೆತೆಗೆ 11 ಲಕ್ಷಿ - ಎಲ್ಲ ಲೋಕವ : ಕೊಲ್ಲುವ ಸಾಸವು! ಸಲ್ಲದೀ ಯಾದೊಳಕೆ | ಬಲ್ಲೆನಾಂ ಬಿಡುಬಿಡು|| (ಶ್ರೀವಿಷ್ಣುವಿನ ಮುಖದಲ್ಲಿ ಅಕಾರಣಹಾಸ್ಯವನ್ನು ನೋಡಿ ಲಕ್ಷ್ಮಿಯು ಆಟವನ್ನು ನಿಲ್ಲಿಸಿ.) ಅಕಿ- ನಾಥಾ ! ಇದೇನು ? ನಿಷ್ಕಾರಣವಾಗಿ ನಗುವುದೇಕೆ ? ವಿಷ್ಣು- ನಗುವುದಕ್ಕೆ ಕಾರಣವುಂಟು. ಲಕ್ಷ- ಏನದು ? ಆದನ್ನು ನನಗೂ ತಿಳಿಸಬಾರದೆ ? - ಮುಂದೆ ನಿನಗೆ ಆ ವಿಚಾರವು ತಾನಾಗಿಯೇ ಗೊತ್ತಾಗುವುದು. ಅದೊಂದು ರಹಸ್ಯವಾದ ಸಂಗತಿ !
ಪುಟ:ಶ್ರೀಮತೀ ಪರಿಣಯ ನಾಟಕಂ.djvu/೭೯
ಗೋಚರ