ವಿಷಯಕ್ಕೆ ಹೋಗು

ಪುಟ:ಶ್ರೀಮತೀ ಪರಿಣಯ ನಾಟಕಂ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೮ ಶ್ರೀಮತೀಪರಿಣಯಂ ಬವನಿಗಂತೂ ಹೆಣ್ಣಿನಾಸೆಯಿಲ್ಲ. ಅವನ ಆಶೋತ್ತರವೇನೋ ಅಪರಿಮಿತವಾಗಿರುವುದು ! ಬರೀಮಾತುಗಳಿಂದಾದರೂ ಅವನ ಮನಸ್ಸಿಗೆ ಆಪ್ಯಾಯನವನ್ನು ಂಟುಮಾಡುವೆನು ಹೇಗೂ ಕಾರ್ ವು ನಮ್ಮ ಕೈವಶವಾಗಿರುವಾಗ, ಬಾಯಿಮಾತುಗಳಿಂದಾದರೂ ಅವನು ಸಂತೋಷಪಡಲಿ ! (ಮುಂದೆ ಹೋಗಿ) ಮಿತ್ರನೆ! ಇದೇ ನು ಇಷ್ಟು ವಿಳಂಬವಾಯಿತು ? ನಾನು ನಿನ್ನನ್ನೇ ನಿರೀಕ್ಷಿಸುತ್ತಿ ದೈನು, (ನಾರದನು ಪ್ರವೇಶಿಸುವನು. ನಾರದ ಪರೈತರಿಬ್ಬರೂ ಒಬ್ಬರ ಮುಖವನ್ನೊಬ್ಬರು ನೋಡಿ ಮರೆಯಾಗಿ ನಗುವರು. ನಾರದಂ-ಮಿತ್ರನೆ ! ಸಿನಗೆ ಮೊದಲೇ ನಾನು ಇಲ್ಲಿ ಬಂದು ಹೋದೆನು. ಈ ಸ್ವಯಂವರಮಂಟಪದ ಸೊಬಗನ್ನು ನೋಡುವುದಕ್ಕಾಗಿ ಹೋಗಿ ಅಲ್ಲಲ್ಲಿ ಸುತ್ತಿಬಂದೆನು. ಪರತಂ-ಅದು ಹೋಗಲಿ ! ಈಗ ಅಂಬರೀಷರಾಜನು ಏನೇನೋ ಉಪಾಯ ದಿಂದ ತನ್ನ ಮಗಳ ಸ್ವಯಂವರವೆಂಬ ವ್ಯಾಜವನ್ನು ಕಲ್ಪಿಸಿ, ಆಜನ್ಮ ಸ್ನೇಹಿತರಾದ ನಮ್ಮಿಬ್ಬರನ್ನೇ ಸ್ಪರ್ಧೆಗೆ ನಿಲ್ಲಿಸಿದನು ನೋಡು ! ನಾರದಂ-ಇದು ನಮ್ಮಿಬ್ಬರ ಅದೃಷ್ಟ ಪರೀಕ್ಷೆಯೇ ಹೊರತು ಇದರಲ್ಲಿ ಸ್ಪರ್ಧೆಯೇನಿರುವುದು, ಈಗ ನಮ್ಮಿಬ್ಬರಲ್ಲಿ ಯಾರ ಅದೃಷ್ಟವು ಮೇಲೆಂಬುದು ಇನ್ನು ಸ್ವಲ್ಪ ಕಾಲದೊಳಗಾಗಿ ತಿಳಿದುಹೋಗು ವುದುಪಕ್ವತಂ-(ಸ್ವಗತ) ಇನ್ನೂ ಇವನಿಗೆ ಆ ಆಸೆಯು ತಪ್ಪಿದಹಾಗಿಲ್ಲ ! ಪಾಪ ! ತನ್ನ ಮುಖವು ತನಗೆ ಕಾಣುವಹಾಗಿದ್ದರೆ, ಇವನು ಹೀಗೆ ಆಶೋತ್ತರವನ್ನಿಟ್ಟುಕೊಳ್ಳುತ್ತಿದ್ದೇನೆ ? ( ಪ್ರಕಾ ಶಂ) ನಾರದಾ ! ನನಗಿಂತಲೂ ನೀನು ಅದೃಷ್ಟಶಾಲಿಯೆಂ ಬುದು, ಈಗ ನಿನ್ನ ಮುಖಲಕ್ಷಣದಿಂದಲೇ ವ್ಯಕ್ತವಾಗುವುದು. ಲೋಕಮೋಹಕವಾದ ಈ ನಿನ್ನ ಮುಖಸೌಂದಠ್ಯವನ್ನು ನೋ