ಪಂಚಮಾಂಕ೦
೮೧
ರಾಜಂ-(ಸಂಭ್ರಾಂತನಾಗಿ) ಕುಮಾರೀ ! ಏನಿದು ? ಅಕಸ್ಮಾತ್ತಾಗಿ ಹೀ
ಗೇಕೆ ಹೆದರುವೆ ?
ಶ್ರೀಮತಿ-ಜನಕಾ ! ಅದೋ : ನಮ್ಮ ಸ್ವಯಂವರಮಂಟಪದಲ್ಲಿ ಯಾವು
ದೋ ಭಯಂಕರವಾದ ಕಾಡುಮೃಗಗಳು ಬಂದು ಕುಳಿತಿರುವುವು.
ರಾಜಂ --ಎಲ್ಲಿ ! ಎಲ್ಲಿ !
ಶ್ರೀಮತಿ.- ರಾಜನನ್ನು ಕರೆತಂದು ತೋರಿಸುವಳು.)
ರಾಜಂ -ಮುಂದೆ ನೋಡಿ ಚಿಂತಾಕುಲನಾಗಿ ಆಹಾ! ಏನಿದು ! ಈ ಮೃ
ಗಗಳಲ್ಲಿಯವು ? (ಚೆನ್ನಾಗಿ ನೋಡಿ)ಇವು ನಿಜವಾಗಿ ಸಾಮಾನ್ಯ
ಮೃಗಗಳಂತೆ ತೋರಲಿಲ್ಲ ! ಮುಖವುಹೊರತು, ಕೈ, ಕಾಲು,
ಮುಂತಾದ ಅವಯವಗಳೆಲ್ಲವೂ ಮನುಷ್ಯಾಕೃತಿಯಿಂದಿರುವುವು.
ಈ ಸ್ವಯಂವರವನ್ನು ಕೆಡಿಸುವುದಕ್ಕಾಗಿ, ಮಾಯಾವಿಗಳಾದ
ರಾಕ್ಷಸರೇನಾದರೂ ಹೀಗೆ ವೇಷಧಾರಿಗಳಾಗಿ ಬಂದಿರಬಹುದೆ ?
ಅದಕ್ಕೂ ಸಂಭವವಿಲ್ಲ ! ಸಾಕ್ಷಾತ್ವಿಷ್ಣುಚಕ್ರವು ನನ್ನಲ್ಲಿರುವಾಗ,
ರಾಕ್ಷಸರು ಇಷ್ಟು ನಿರ್ಭಯವಾಗಿ ಇಲ್ಲಿಗೆ ಪ್ರವೇಶಿಸುವುದೆಂದ
ರೇನು ? ನಮ್ಮ ಪುರರ್ದಾಕ್ಕೆ ಕಾಲಿಡುವುದಕ್ಕೆ ಮೊದಲೇ ಆ
ಸುದರ್ಶನದ ತೇಜಸ್ಸಿನಿಂದ ಅವರು ದಗ್ಧರಾಗಬೇಕಲ್ಲವೆ? ಅಥವಾ
ಇದು ದೇವತೆಗಳ ತಂತ್ರವಾಗಿರಬಹುದೆ ? ಯಾವದೇವತೆಗಳಲ್ಲಿ
ಯೂ ನಾನು ಅಪರಾಧಿಯಲ್ಲ ! ಅವರೇಕೆ ನನ್ನನ್ನು ವಂಚಿಸುವ
ರು ! ಒಂದುವೇಳೆ ನಾರದಪರೈತರೇ ನನ್ನನ್ನು ಪರೀಕ್ಷಿಸುವುದ
ಕ್ಕಾಗಿ ಹೀಗೆ ವೇಷಾಂತರದಿಂದ ಬಂದಿರಬಹುದೆ ? ಇದ್ದರೂ
ಇರಬಹುದು. ಇರಲಿ ! ಇವರನ್ನು ಮಾತಾಡಿಸಿ ನೋಡುವೆನು
ಅವರ ಕಂಠಧ್ವನಿಯಿಂದ ಸ್ವಲ್ಪ ಮಾತ್ರವಾದರೂ ನಿಜಸ್ಥಿತಿಯ
ನ್ನು ಕಂಡುಕೊಳ್ಳಬಹುದು. (ಮುಂದೆ ಬಂದು) ಎಲೈ! ವಿಲಕ್ಷಣ
ರೂಪದಿಂದ ಭದ್ರಾಸನವನ್ನೇರಿ ಕುಳಿತಿರುವ ನೀವು ಯಾರು !
ನಾರದಂ--(ಸ್ವಗತಂ ಓಹೋ!ರಾಜನು ಈ ಕಪಿಮುಖವನ್ನು ನೋಡಿ ಭ್ರ
ಮಿಸುತ್ತಿರುವನು.ನಿಜಸ್ಥಿತಿಯನ್ನು ತಿಳಿಯದವರು ಹೀಗೆ ಕಳವಳ