ವಿಷಯಕ್ಕೆ ಹೋಗು

ಪುಟ:ಶ್ರೀಮತೀ ಪರಿಣಯ ನಾಟಕಂ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೪ ಶ್ರೀಮಶೀಪರಿಣಯಂ ನಾರದಂ-ಏನು ! ನಾನು ನಾರದನೆಂಬುದರಲ್ಲಿಯೇ ನಿನಗೆ ಸಂದೇಹ ವೇನು ? ಮುಖವನ್ನು ನೋಡಿದರೆ ತಿಳಿಯುವುದಿಲ್ಲವೆ ? ಈತನ ವಿಷಯದಲ್ಲಿಯೂ ನೀನು ಸಂದೇಹಿಸಬೇಡ! ಇವಸೇ ಪರ್ವತನು. ಪರ್ವತಂ-ರಾಜಾ ! ಸಂದೇಹಿಸಬೇಡ : ಈತನೇ ನಾರದನು, ನನ್ನ ಮಾತ ನ್ನು ನಂಬು! ನಿನ್ನ ಮಗಳನ್ನು ಕರೆ ! ರಾಜಂ- ಪೂಜ್ಯರೆ ! ಹಾಗೆಯೇ ಮಾಡುವೆನು. (ಶ್ರೀಮತಿಯ ಕೈಯನ್ನು ಹಿಡಿದು ಮುಂದೆ ನಿಲ್ಲಿಸಿಕೊಂಡು ಜನಾ೦ತಿಕ॰) ಕುಮಾರೀ ! ಎಷ್ಟೆಷ್ಟು ಯೋಚಿಸಿದರೂ ಇವರ ನಿಜಸ್ಥಿತಿಯೇನೆಂದು ತಿಳಿಯ ಲಿಲ್ಲ. ನಾನು ನಿರ್ಣಯಿಸಿದಂತೆ ನಾರದಪರ್ವತರಿಬ್ಬರೂ, ಇಲ್ಲಿಗೆ ಬರಬೇಕಾದ ಕಾಲಕ್ಕೆ ಸರಿಯಾಗಿ, ಈ ವ್ಯಕ್ತಿಗಳೆರಡೂ ಇಲ್ಲಿಗೆ ಬಂದು ಕುಳಿತಿರುವುವು, ಕಂಠಸ್ವರವೂ ಅವರಂತೆಯೇ ಇರುವುದು, ಇದರಿಂದ ಆ ನಾರದಪರೈತರೇ ನಮ್ಮ ಮನೋ ದಾರ್ಥ್ಯವನ್ನೂ, ನಮ್ಮ ಸತ್ಯವನ್ನೂ ಪರೀಕ್ಷಿಸುವುದಕ್ಕಾಗಿ, ಹೀಗೆ ವೇಷಧಾರಿಗಳಾಗಿ ಬಂದಿರಬಹುದೆಂದು ಊಹಿಸಬೇಕಾಗಿದೆ. ನಿಜಸ್ಥಿತಿಯನ್ನು ತಿಳಿಯದ ನಾವು ಇವರನ್ನು ತಿರಸ್ಕರಿಸಿದ ಮೇಲೆ, ಇವರೇ ನಾರದಪರೈತರಾಗಿದ್ದ ಪಕ್ಷದಲ್ಲಿ ನಾವು ಬ್ರಾ ಹಣಕೋಪಕ್ಕೆ ಪಾತ್ರರಾಗುವೆವು. ಆಡಿದ ಭಾಷೆಗೆ ತಪ್ಪಿದ ಮಹಾದೋಷಕ್ಕೂ ನಾನು ಗುರಿಯಾಗುವೆನು. ಹಾಗಿಲ್ಲದೆ ಈ ಸ್ಥಿತಿಯಲ್ಲಿ ಇವರ ಕೊರಲಿಗೆ ಸ್ವಯಂವರಮಾಲಿಕೆಯನ್ನು ಹಾಕ ಬೇಕೆಂದು ನಿನ್ನನ್ನು ನಿರ್ಬಂಧಿಸುವುದಕ್ಕೂ ನನ್ನ ನಾಲಗೆಯು ಹೊರಡದಿರುವುದು, ಇದಕ್ಕೆ ನಾನೇನು ಮಾಡಲಿ ! ಈ ಉಭಯ ಸಂಕಟದಿಂದ ನನ್ನನ್ನು ತಪ್ಪಿಸತಕ್ಕ ಭಾರವು ನಿನ್ನದಾಗಿದೆ. ಶ್ರೀಮತಿ-ಜನಕಾ ! ಭಗವನ್ಮಾಯೆಯು ವಿಚಿತ್ರವಾಗಿರುವುದು, ಜನರು ಆ ಮಾಯೆಯಿಂದ ವಂಚಿತರಾಗಿ, ತಮ್ಮ ತಮ್ಮ ಕರಾನುಸಾರವಾ ದ ಫಲವನ್ನು ಅನುಭವಿಸದೆ ತೀರದು! ಈ ವಿಷಯದಲ್ಲಿ ಯಾರೇ ನು ಮಾಡಬಲ್ಲರು? ನನ್ನ ಕ್ಷೇಮವನ್ನುದ್ದೇಶಿಸಿ ನೀನು ಸತ್ಯ 6,