ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೬.೦.) ದಶಮಸ್ಕಂಧವು. ೨೧೭೧ ದಾಗ ಆ ಸಂಬಂಧವು ಸರಿಬೀಳದು, ಅಂತಹ ಸಂಬಂಧವು ನಡೆಯುವು ದೂ ಅಸಂಭವವು: ಓ ರಾಜಕುಮಾರೀ! ನೀನು ದೂರದೃಷ್ಟಿಯುಳ್ಳವಳಾಗಿ ದರೂ, ಇದೊಂದನ್ನೂ ಯೋಚಿಸದೆ, ನನ್ನಲ್ಲಿ ಯಾವುದೊಂದು ಗುಣವೂ ಇಲ್ಲದಿದ್ದರೂ ನನ್ನನ್ನು ವರಿಸಿಬಿಟ್ಟೆಯಲ್ಲಾ ! ಲೋಕದಲ್ಲಿ ಕೆಲವುಮಂದಿ ಭಿಕ್ಷುಜನಗಳು ಹೊರತು, ನಮ್ಮನ್ನು ಕೊಂಡಾಡತಕ್ಕವರು ಬೇರೊಬ್ಬರಿಲ್ಲ. ನಮ್ಮನ್ನು ಕೈಹಿಡಿದು ನೀನು ಅನ್ಯಾಯವಾಗಿ ನಿನ್ನ ಇಹಲೋಕಸುಖಗಳ ನ್ನೇ ಕೆಡಿಸಿಕೊಂಡಹಾಗಾಯಿತು. ರುಕ್ಕಿಣಿ ! ಈಗಲೂ ಆದುದಾಯಿತು ! ನಿನಗೊಂದುಪಾಯವನ್ನು ಹೇಳುವೆನು, ಈಗಲಾದರೂ ನೀನು, ಕುಲದಲ್ಲಿ ಯ,ಐಶ್ವರದಲ್ಲಿಯೂ,ನಿನಗೆ ಅನುರೂಪನಾದ ಬೇರೆಯಾವನಾದರೂ ರಾ ಜಶ್ರೇಷ್ಠರನ್ನು ಆಶ್ರಯಿಸಿ ಸುಖದಿಂದಿರು ! ಯಾವನನ್ನು ವರಿಸುವುದರಿಂದ ನಿನಗೆ ಮುಂದೆ ಇಹಲೋಕದಲ್ಲಿಯೂ, ಪರಲೋಕದಲ್ಲಿಯೂ, ಕ್ಷೇಮವುಂ ಟೋ ಅಂತವನನ್ನು ಭಜಿಸು. (ಆದರೆ ನನ್ನನ್ನು ನೀನು ಬಲಾತ್ಕಾರದಿಂದ ಅಪಹರಿಸಿ ತಂದುದೇಕೆ ?” ಎಂದು ಕೇಳುವೆಯಾ ! ಓ ರಾಜಪುತ್ರಿ : ನಿನ್ನ ನ್ನು ವರಿಸಬೇಕೆಂದು ನಾನು ತಂದವನಲ್ಲ! ಶಿಶುಪಾಲ, ಸಾಲ್ಯ, ದಂತವಕ್ಕೆ, ರುಕ್ಕಿ ಮೊದಲಾದವರೆಲ್ಲರೂ ಬಹುಕಾಲದಿಂದ ನನ್ನನ್ನು ದ್ವೇಷಿಸುತಿದ್ದರು. ವೀರಮದದಿಂದ ಕೊಬ್ಬಿದ ಅವರ ಗರ್ವವನ್ನು ಮುರಿಯುವುದಕ್ಕಾಗಿ ನಾನು ನಿನ್ನ ನ್ನು ತಂದೆನೇಹೊರತು ಬೇರೆಯಲ್ಲ? ದುಷ್ಟಜನರ ಗರ್ವವನ್ನು ಮುರಿಯ ಬೇಕೆಂಬುದೇ ನನ್ನ ಸಂಕಲ್ಪವು, ನಮಗೆ ಮನೆಮಂದಿಮಕ್ಕಳೆಂಬ ಮೋಹ ವು ಸ್ವಲ್ಪ ಮಾತ್ರವೂ ಇಲ್ಲ. ದಾರೇಷಣ, ಪತೇಷಣ, ಉದರೇಷಣ ವೆಂಬ ಈಷಣತ್ರಯಗಳೂ ನಮ್ಮನ್ನು ಬಾಧಿಸಲಾರವು, ಏಕೆಂದರೆ, ನಮ್ಮೊ ಳಗೆ ನಾವು ನಮ್ಮ ಅನುಭವದಿಂದಲೇ ತೃಪ್ತರಾಗಿರುವೆವು, ನಮಗೆ ಈ ಲೋ ಕದಲ್ಲಿ ಆಸೆಪಟ್ಟು ಪಡೆಯಬೇಕಾದ ವಸ್ತುವೊಂದೂ ಇಲ್ಲ, ಸ್ವಯಂಪ್ರಕಾ ಶವಾದ ಆತ್ಮಸ್ವರೂಪದರ್ಶನದಿಂದ ತೃಪ್ತರಾಗಿ, ಬೇರೆ ಪ್ರಾಕೃತವ್ಯಾಪಾ ರಗಳೆಲ್ಲವನ್ನೂ ಬಿಟ್ಟು, ನಮ್ಮ ಮನೆಯಲ್ಲಿ ನಾವು ನಿರಾತಂಕವಾಗಿರುವೆವು. ಹೀಗೆ ಈ ಲೋಕವ್ಯಾಪಾರವನ್ನೇ ತ್ಯಜಿಸಿದ ನಾವೆಲ್ಲಿ? ವಿಲಾಸವತಿಯರಾದ ನಿಮ್ಮಂತಹ ಸ್ತ್ರೀಯರೆಲ್ಲಿ?” ಎಂದನು.