ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೭೩ ಅಧ್ಯಾ, ೬೦.] | ದಶಮಸ್ಕಂಧವು. (ಓ ವೈದರ್ಭೀ! ಕೋಪಿಸಬೇಡ ! ನೀನು ನನ್ನನ್ನೇ ನಂಬಿದವಳೆಂಬುದನ್ನು ನಾನು ಬಲ್ಲೆನು. ಆದರೂ ನೀನು ಏನು ಹೇಳುವೆಯೋ ಎಂಬುದನ್ನು ತಿಳಿ ಯುವುದಕ್ಕಾಗಿ ಸುಮ್ಮನೆ ವಿನೋದಾರ್ಥವಾಗಿ ಈ ಮಾತನ್ನಾ ಡಿದೆನು. ಇದಲ್ಲದೆ, ಓ ಕಾಮಿನೀ ! ಪ್ರಣಯಕೋಪದಲ್ಲಿ,ನಡುಗುತ್ತಿರುವ ತುಟಿಯಿಂ ದಲೂ! ಕೆಂಪೇರಿದ ಕಡೆಗಣ್ಣಿನಿಂದಲೂ,ಅಂದವಾದ ಹುಬ್ಬುಗಂಟಿನಿಂದಲೂ, ಶೋಭಿತವಾದ ನಿನ್ನ ಮುಖಸೌಂದರವನ್ನು ಒಂದಾವರ್ತಿ ನೋಡಬೇಕೆಂಬ ಆಸೆಯೂ ನನಗೆ ಹುಟ್ಟಿತು. • ಹೀಗೆ ನಿಷ್ಕಾರಣವಾಗಿ ನನಗೆ ಕೋಪವನ್ನು ಹುಟ್ಟಿಸಿ ಸಂಕಟಗೊಳಿಸುವುದರಿಂದ ನಿನಗೆ ಬಂದ ಲಾಭವೇನು ” ಎಂದು ಕೇಳುವೆಯಾ ? ಎಲೆ ಭೀರು ! ಹೀಗೆ ಪತ್ನಿ ಯರೊಡನೆ ಪ್ರಣಯಕಲಹದಿಂದ ವಿನೋಹಿಸುತ್ತ ಕೆಲವನ್ನು ಕಳೆಯುವುದಲ್ಲವೇ ಗೃಹಸ್ಯರಿಗೆ ಸದ್ಯೋತ್ತಮ ವಾದ ಲಾಭವು ! ಇದೇ ಸಂಸಾರದಲ್ಲಿರುವ ಪರಮಸುಖವು. ” ಎಂದನು. ಹೀಗೆ ಕೃಷ್ಣನು ಕೇಳಿದ ಪ್ರಿಯವಾಕ್ಯವನ್ನು ಕೇಳಿದಮೇಲೆ ರುಕ್ಷ್ಮಿಣಿಯು, ಅದನ್ನು ಪರಿಹಾಸೋಕಿಯೆಂದು ತಿಳಿದು, ಮನಸ್ಸಿನಲ್ಲಿ ಸ್ವಲ್ಪ ಸ್ವಲ್ಪ ವಾಗಿ ಧೈಲ್ಯವನ್ನು ತಂದುಕೊಂಡಳು. ಅವಳ ಭಯವು ಸೀಗಿತು. ಆಗ ಮೆಲ್ಲಗೆ ತಲೆ ಯನ್ನೆ ತ್ರಿ, ಕೃಷ್ಣನ ಮುಖವನ್ನು ನೋಡುತ್ತ, ಲಜ್ಞಾ ಸೂಚಕವಾದ ಮಂದಹಾಸದೊಡನೆ ಹೀಗೆಂದು ಹೇಳುವಳು.* *ಓ ! ಪಂ ಡರೀಕಾಕ್ಷಾ ! ನನಗೆ ನೀನು ಯಾವವಿಧದಲ್ಲಿಯೂ ಸಾಟಿಯಲ್ಲವೆಂದೂ, ಹೀಗಿರುವಾಗ ನನ್ನ ಸ್ನೇಕೆ ವರಿಸಿದೆ” ಯೆಂದೂ ಕೇಳಿದೆಯಲ್ಲವೆ ? ನೀನು ಹೇಳಿ ದುದೇನೋ ವಾಸ್ತವವೇ ! ನಾನೂ ಅದನ್ನು ಮೊದಲೇ ಬಲ್ಲೆನು. ನಮ್ಮಿಬ್ಬರಿಗೆ ಯಾವವಿಧದಲ್ಲಿಯೂ ಸಾಮ್ಯವಿಲ್ಲ. ಅಷ್ಟೇಕೆ ? ಕೃಷ್ಣಾ! ನಿನ್ನ ನೈತ್ರಸೌಂದರವೊಂದರಿಂದಲೇ ನಿನಗೆ ಸಾಟಿಯೊಬ್ಬರೂ ಇಲ್ಲವೆಂದು ಸ್ಪಷ್ಟವಾಗುವುದು, ಹೀಗಿರುವಾಗ ನಾನು ನಿನಗೆ ಅನುರೂಪಭಾರೈಯಾ

  • ಹಿಂದೆ ಕೃಷ್ಣನು ತನ್ನಲ್ಲಿ ಹೀನತೆಯನ್ನಾ ರೂಪಿಸಿಕೊಂಡು ಹೇಳಿದ ಒಂದೊಂದು ಮಾತೂ, ಆತನ ಪರಸ್ವರೂಪವನ್ನೇ ಸೂಚಿಸುವುವು. ಇಲ್ಲಿಂದ ಮುಂದೆ ರುಕ್ಕಿಣಿಯು ಆ ಒಂದೊಂದು ಮಾತಿಗೂ ಉತ್ತರವನ್ನು ಕೊಡುವ ನೆವದಿಂದ ಆ ತತ್ಕಾರವನ್ನೇ ಹೊರಪಡಿಸುವಳೆಂದು ಗ್ರಹಿಸಬೇಕು.