ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೭೪ ಶ್ರೀಮದ್ಭಾಗವತವು [ಅಧ್ಯಾ 40, ಗುವೆನೆ? ಸ್ವರೂಪಸ್ವಭಾವಗಳಲ್ಲಿ ಅಪರಿಚ್ಛಿನ್ನ ನಾದ ನಿನಗೆ, ನಾನು ಹೇಗೆ ತಾನೇ ಸಾಟಿಯಾಗುವೆನು, ಪಾಡು ಪರಿಪೂರ್ಣನಾಗಿಯೂ, ಮೂರು ಲೋಕಕ್ಕೂ ಏಕಾಧಿಪತಿಯಾಗಿಯೂ, ನಿತ್ಯವಿಭೂತಿವಿಶಿಷ್ಯನಾಗಿಯೂ ಇರುವ ನೀನೆಲ್ಲಿ ? ಪ್ರಕೃತಿಗುಣಗಳಿಗೂ, ನಿನ್ನ ಸಂಕಲ್ಪಕ್ಕೆ ಅಧೀನಳಾದ ನಾನೆಲ್ಲಿ : ಓ ದೇವಾ ! ನಾನು ನಿನಗೆ ಪರತಂತ್ರಳೆಂಬುದನ್ನು ತಿಳಿಯದ ವರುಮಾತ್ರ ನನ್ನನ್ನು ಗೌರವದಿಂದ ಭಾವಿಸಬಹುದು! ಆಗೌರವವು ನನಗುಂ ವಾದುದೂ ನಿನ್ನ ಸಂಬಂಧದಿಂದಲ್ಲದೆ ಬೇರೆಯಲ್ಲ. ಕೃಷ್ಮಾ! ನೀನು ರಾಜರಿಗೆ ಹೆದರಿ ಸಮುದ್ರ ಮಧ್ಯದಲ್ಲಿ ಸೇರಿರುವುದಾಗಿ ಹೇಳಿದೆಯಲ್ಲವೆ ? ಅದೂ ವಾಸ್ತವವೇ! ನೀನು ಭಯಪಟ್ಟವನಂತೆ ನಟಿಸಿಹೋದವನೇ ಹೊರತು ನಿಜವಾಗಿ ಭಯಪಟ್ಟವನಲ್ಲ. ಮೂಗಡಿಗಳಿಂದಲೇ ಮೂರುಲೋಕವನ್ನೂ ಸಾಧಿಸಿದ ನೀನು ರಾಜರಿಗೆ ಭಯಪಡುವೆಯೆಂಬುದು ನಿಜವೆ ? ನೀನು ಸಮು ದ್ರದಲ್ಲಿರುವುದೂ ನನ್ನಲ್ಲಿ ನಿನಗಿರುವ ಅಸಾಧಾರಣಪ್ರೀತಿಯಿಂದಲೇ! ಏಕೆಂ ದರೆ, ನಾನು ಕ್ಷೀರಸಾಗರಕಸ್ಯೆ ಯಾದ ಲಕ್ಷ್ಮಿ ಯೆಂದೇ ಕೆಲವರು ಹೇಳು ವರು. ಈಗ ನೀನು ಆಶ್ರಯಿಸಿರತಕ್ಕ ಲವಣಸಮುದ್ರವೂ ನನ್ನ ತಂ ದೆಯ ಮೆರೆಗೆ ಸೇರಿರುವುದರಿಂದ, ನನ್ನ ಕ್ಲಿರುವ ಪ್ರೀತಿ ಯಿಂದಲೇ ಸೀನು ಅಲ್ಲಿ ಹೋಗಿ ಸೇರಿರಬೇಕು. ನಾಥಾ ! - ನಾನು ಬಲ್ಲವರೋಧಕ್ಕೆ ಪಾತ್ರನೆಂದು ಹೇಳಿದೆಯಲ್ಲವೆ ” ಅದೂ ಸುಳ್ಳಲ್ಲ ! ಕುತಗಳಾದ ಶಬ್ಯಾದಿ ವಿಷಯಗಳಲ್ಲಿ ಬಿದ್ದು, ಭೋಗವದಬಂದ ಬೀಗಿ ಬೆರೆ ಯತಕ್ಕವರೊಡನೆ ನಿನಗೆ ವಿರೋಧವು ಸಹಜವಾಗಿಯೇ ಇರುವುದು, ಅದನ್ನು ನಿನ್ನಲ್ಲಿ ದೋಷ ವೆಂದು ಹೇಳಬಹುದೆ ? (' ನಮಗೆ ರಾರ್ಜಿಾಸನವನ್ನೆ ರ.ವುದಕ್ಕೆ ಅರ್ಹತೆ ಯಿಲ್ಲ” ಎಂದು ಹೇಳಿದೆ. ಆ ರಾಜಾಸನದಿಂದ ನಿನಗಗಬೇಕಾದುದೇನು? ರಾಜಾಸನವೆಂಬುದು ತಮಸ್ಸಿನಂತೆ ಕೇವಲ ನರಕಾವಹವೆನಿಸುವುದು. ' ನ್ನ ಪಾದಸೇವಕರೇ ಅದನ್ನು ತೃಣಪ್ರಾಯವಾಗಿ ಎಣಿಸುತ್ತಿರುವಾಗ, ಉಭಯ ವಿಭೂತಿ ನಾಯಕನಾದ ನಿನಗೆ ಆ ರಾಜಾ ಸನವೆಂಬುದು ಎಷ್ಟು ಮಾತ್ರವಾ ಗಿರುವುದು ? « ನನ್ನ ಜಾತಿಮತಗಳೊಂದೂ ಗೊತ್ತಿಲ್ಲ” ಎಂದು ಹೇಳಿದೆ ಯಲ್ಲವೆ ? ಅದರಲ್ಲಿ ಸಂದೇಹವೇನಿದೆ ? ಮಹಾಜ್ಞಾನಿಗಳಾದ ಯೋಗೀಶ್ವರ