ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೭೩ L| ಶ್ರೀಮದ್ಭಾಗವತವು [ಅಧ್ಯಾ, ೬೦. ಯಾವ ವಿಧದಲ್ಲಿಯೂ ಸಮಾನಳಲ್ಲವೆಂಬುದೇನೋ ನಿಜವೇ! ಆದರೆ ಈಗ ನಾನು ನಿನ್ನೊಡನೆ ಸಾಮ್ಯಬುದ್ಧಿಯಿಂದ ಬಂದವಳಲ್ಲ, ನಿನ್ನ ಬಾಸ್ಯವ ನ್ನುದ್ದೇಶಿಸಿಯೇ ನಿನ್ನ ನ್ನಾಶ್ರಯಿಸಿರುವೆನು. ಯಾರು ನಿನ್ನ ದಾಸ್ಯದಲ್ಲಿಯೇ ಆಸೆಯುಳ್ಳವರಾಗಿ, ಬೇರೆ ಯಾವುದನ್ನೂ ಅಪೇಕ್ಷಿಸದಿರುವರೋ, ಅಂಥವರೇ ಲೋಕದಲ್ಲಿ ಭೀಮಂತರು, ಅಂತವರನ್ನು ಕೈಹಿಡಿದು ಉದ್ಧರಿಸಬೇಕಾದುದು ನಿನಗೂ ಉಚಿತವೇ! ಕೇವಲಭೋ10ಸಕ್ತಿಯಿಂದ ನಿನ್ನ ನ್ನಾಶ್ರಯಿಸತಕ್ಕ ಪುರುಷರಿಗಾಗಲಿ, ಸ್ತ್ರೀಯರಿಗಾಗಲಿ, ನಿನ್ನ ಸಾಂಗತ್ಯವು ಫಲಕಾರಿಯಾಗೆ ದು, ಇದಲ್ಲದೆ « ಭಿಕ್ಷುಕರೇ ನನ್ನನ್ನು ಹೊಗಳುವರೇ ಹೊರತು, ಶ್ರೀ ಮಂತರು ನನ್ನ ನ್ನು ಲಕ್ಷ ಮಾಡಲಾರರೆಂದು ಹೇಳಿದೆಯಲ್ಲವೆ ? ಅದೂ ವಾಸ್ತವವೇ ? ಕೌ-ಸ್ವಭಾವವನ್ನು ಬಿಟ್ಟು, ಸರಭೂತಸುಕೃತ್ತು ಗಳಾಗಿರುವ ಯೋಗಿಗಳೇ ಏನ್ನ ಪ್ರಭಾವವನ್ನು ತಿಳಿದು, ನಿನ್ನನ್ನು ಹೊ ಗಳುವರು. ನೀನು ಮೂರುಲೋಕಕ್ಕೂ ಆತ್ಮನೆಂದೂ, ಆಶ್ರಿತರಿಗೆ ನಿನ್ನ ನೆ ನೀನು ಕೊಡತಕ್ಕವನೆಂದೂ ಅವರು ಚೆನ್ನಾಗಿ ಬಲ್ಲರು. ಇದನ್ನು ತಿಳಿದೇ ಅವರು ನಿನ್ನ ಮಹಿಮೆಯನ್ನು ಕೊಂಡಾಡುವರು. ನಾಥಾ! ಆ ನಿನ್ನ ಮಹಿಮೆ ಯನ್ನು ನನ್ನ ಕೇಳಿಬಲ್ಲವಳಾದುದರಿಂದಲೇ, ಈಗ ನಿನ್ನ ನ್ನು ಆಶ್ರಯಿ ಸಿದನು, ನಿನ್ನ ಹುಬ್ಬಿನಾಟಗಳಿಂದ ನಡೆಯುತ್ತಿರುವ ಕಾಲಗತಿಯೆಂಬ ವೇಗ ಕೈ ಸಿಕ್ಕಿ, ಆಗಾಗ ಆಶಾಭಂಗವನ್ನು ಹೊಂದುತ್ತಿರುವ ಬ್ರಹ್ಮ೦ಗ್ರಾ ಗಳನ್ನೂ ನಾನು ಲಕ್ಷ್ಯಮಾಡದೆ ನಿರಾಕರಿಸಿದೆನು. ಹೀಗಿರುವಾಗ ಇಲ್ಲ. ರಾದ ಆ ಶಿಶುಪಾಲಾಟಗಳನ್ನು ಕಣ್ಣೆತ್ತಿಯಾದರೂ ನೋಡುವೆನೆ ? ಮತ್ತು ನೀನು ಆ ರಾಜರಿಗೆ ಹೆದರಿದವನೆಂದು ಹೇಳಿದೆಯಲ್ಲವೆ? ಇದೆಲ್ಲವೂ ನಿನ್ನ ನತ್ರ ನವೇ ಹೊರತು ಬೇರೆಯಲ್ಲ, ಶಾರ್ಙ್ಗಧ್ವನಿಯಿಂದಲೇ ಶತ್ರುರಾಜರನ್ನೊರಿ ಸಿ, ಸಿಂಹವು ಕುದ್ರಮೃಗಗಳನ್ನ ಟ್ಟಿ ತನ್ನ ಭಾಗವನ್ನು ಎತ್ತಿಕೊಂಡು ಓಡ ವಂತೆ ನನ್ನನ್ನು ಇಲ್ಲಿಗೆ ಕರೆತಂದೆಯಲ್ಲವೆ ? ಹೀಗಿರುವಾಗಲೂ ಆ ರಾಜರಿಗೆ ಭಯಪಟ್ಟು ಸಮುದ್ರ ಮಧ್ಯದಲ್ಲಿ ಸೇರಿರುವೆನೆಂದು ಹೇಳಿದನಿನ್ನ ಮಾತು ತಿಳ: ವಳಿಕೆಯಿಲ್ಲದಅಜ್ಞರಿಗಾದರೂಎಂದಿಗೂನಂಬುಗೆಯನ್ನು ಹುಟ್ಟಿಸಲಾರದ: « ಕುಲಶೀಲಗಳೊಂದನ್ನೂ ಹೀಗೆಂದು ನಿರ್ಣಯಿಸುವುದಕ್ಕಿಲ್ಲದ ನನ್ನನ: