ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೩೭ ಅಧ್ಯಾ, ೬0 ) ದಶಮಸ್ಕಂಧವು ಕೈಹಿಡಿದ ಹೆಂಗಸರು ಕಷ್ಟಕ್ಕೊಳಗಾಗಬೇಕೆಂದು ಹೇಳಿದೆಯಲ್ಲವೆ?ನಾಥಾ! ನಿನ್ನ !ದಾಸ್ಯವನ್ನು ಪಡೆಯಬೇಕೆಂಬ ಅಭಿಲಾಷೆಯಿಂದಲ್ಲವೇ ರಾಜಶ್ರೇಷ, ರೆನಿಸಿಕೊಂಡ ಸೃಧು, ಭರತ, ಯಯಾತಿ, ಗಯ, ಮೊದಲಾದವರೆಲ್ಲರೂ' ತಮ್ಮ ಸರೊತ್ತಮವಾದ ರಾಜ್ಯಾಧಿಪತ್ಯವನ್ನೂ ಬಿಟ್ಟು,ವನವನ್ನು ಪ್ರವೇ ಶಿಸಿ, ನಿನ್ನ ಪದವಿಯನ್ನು ಹುಡುಕಲಾರಂಭಿಸಿದರು. ಈಗ ಅವರೆಲ್ಲರೂ, ಯಾ ವವಿಧವಾದ ಕಷ್ಟವನ್ನಾ ದರೂ ಅನುಭವಿಸುತ್ತಿರುವರೇನು ! ಅವರೆಲ್ಲರೂ, ಈಗ ಸಾಂಸಾರಿಕವಾದ ಈ ಲೋಕವನ್ನು ಬಿಟ್ಟು, ನಿನ್ನೊಡನೆ ಸಾಧ ರ್ಮ್ಯರೂಪವಾದ ಶಾಶ್ವತಸುಖದಲ್ಲಿರುವರಲ್ಲವೆ ? ನಿನ್ನನ್ನು ಕೈಹಿಡಿದಮೇಲೆ ದುಃಖವೆಂಬುದೆಲ್ಲಿಯದು?ನಾಥಾ:ನನಗೆ ಅನುರೂಪನಾದ ಬೇರೆ ಯಾವನಾ ದರೂ ಕ್ಷತ್ರಿಯನನ್ನಾಶ್ರಯಿಸುವಂತೆ ಹೇಳಿದೆ.ಸಮಸ್ವ ಕಲ್ಯಾಣಗುಣಗಳಿಗೂ ಆಶ್ರಯವಾಗಿ, ಸಮಸ್ಯಪುಣ್ಯಗಳಿಗೂ ಫಲರೂಪವಾಗಿ, ಲಕ್ಷ್ಮಿದೇವಿಗೆ ನಿ ವಾಸವಾಗಿರುವ ನಿನ್ನ ಪಾದಪದ್ಮಗಳನ್ನು ಬಿಟ್ಟು, ಮರಣಶೀಲರಾಗಿಯೂ, ಯಾವಾಗಲೂ, ಮಹಾಭಯದಲ್ಲಿ ಮಳುಗಿದವರಾಗಿಯೂ, ಇರುವ ಬೇರೆ ಪು ರುಷರನ್ನು ನಾನು ಮನಸ್ಸಿನಿಂದಲಾದರೂ ಸ್ಮರಿಸುವೆನೆ? 'ವಿವೇಕವುಳ್ಳ ಯಾವ ಸೀಯೂ ಸೈರಿಸಲಾರಳು, ಸಲ್ವಲೋ ಜಾಧೀಶ್ವರನಾಗಿ, ಸಾಂ ತರಾತ್ಮನಾಗಿ, ಇಹಲೋಕಪರಲೋಕವೆರಡರಲ್ಲಿಯೂ ಸುಖಪ್ರದನಾಗಿ ರುವ ನಿನಗಿಂತಲೂ ನನಗೆ ಅನುರೂಪನಾದವನು ಬೇರೆ ಯಾರುಂಟು ? ನಾನು ನಿನ್ನನ್ನೇ ನಂಬಿರುವೆನು. ಜನ್ಮ ಜನ್ಮದಲ್ಲಿಯೂ ನಿನಗೆ ನಾನು ಸಹ ಧರ್ಮಚಾರಿಣಿಯಾಗಿರಬೇಕೆಂಬುದೇ ನನ್ನ ಕೋರಿಕ! ಸಮಸ್ತಪಾಪವನ್ನೂ , ತನ್ಮೂಲಕವಾದ ಸಂಸಾರವನ್ನೂ ನೀಗಿಸತಕ್ಕ ನಿನ್ನ ಪಾದಪದ್ಮಗಳೇ ನನಗೆ ಜನ್ಮ ಜನ್ಮಕ್ಕೂ ಆಶ್ರಯವಾಗಿರಲಿ! ನಾಥಾ !ಇದೇ ನನ್ನ ಪ್ರಾರ್ಥನೆ. ಅನೇ ಕರಾಜಾಧಿರಾಜರು ನನ್ನನ್ನು ಕಾಮಿಸಿದರೆಂದು ಹೇಳಿದೆಯಲ್ಲವೆ ? ಓ!ಅಚ್ಚು ತಾ! ಯಾರ ಮನೆಗಳಲ್ಲಿ ಸ್ತ್ರೀಯರೇ ಸ್ವತಂತ್ರಾಧಿಕಾರವುಳ್ಳವರಾಗಿ, ತಮ್ಮ ಗಂಡಂದಿರನ್ನು ಕತ್ತೆಗಳಂತೆಯೂ, ಎತ್ತುಗಳಂತೆಯೂ, ನಾಯಿಗಳಂತೆಯೂ, ಬೆಕ್ಕುಗಳಂತೆಯೂ, ತಮ್ಮ ಸೇವಾಕಾರದಲ್ಲಿ ಇರಿಸಿಕೊಂಡಿರುವರೋ? ಮತ್ತು ಯಾವ ಸ್ತ್ರೀಯರು ಬ್ರಹ್ಮರುದ್ರಾದಿಗಳ ಸಭೆಗಳಲ್ಲಿ ಕೀರ್ತಿಸಲ್ಪಡು