ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೬೦.] ದಶಮಸ್ಕಂಧವು. ೨೧೬೯ ಈವಾಕ್ಯವು ಸುಳ್ಳಲ್ಲವೆಂದೇ ನನಗೂ ತೋರುವುದು, ಕಾಶೀರಾಜಪ್ರಿಯಾದ ಅಂಬಿಕೆಗೆ ಕನ್ಯಾವಸ್ಥೆಯಲ್ಲಿಯೇ ಸಾಊನಲ್ಲಿ ದೃಢಾನುರಾಗವು ಹುಟ್ಟಿದಂ ತೆ, ಸಾಮಾನ್ಯವಾಗಿ ಕನ್ನೆಯರಿಗೆ ಒಬ್ಬಾನೊಬ್ಬ ಪುರುಷನಲ್ಲಿ ಅನುರಾಗವು ಹು ಟ್ಟುವುದು ಸಹಜವು. ವಿವಾಹವಾದಮೇಲೆಯೂ 'ಆಸತ್ತ್ವಭಾವವುಳ್ಳ ಸೀ ಯರಿಗೆ, ಹೊಸಹೊಸಪುರುಷರಲ್ಲಿ ಮನಸ್ಸು ಪ್ರವರ್ತಿಸುವುದೂ ಸಹಜವು. ಆದುದರಿಂದ ವಿವೇಕಿಯಾದವನು ಸ್ತ್ರೀಯರ ಸ್ವಭಾವವನ್ನು ಮೊದಲೇ ಪರೀಕ್ಷಿಸಿ ದುಷ್ಟೆಯಾದವಳನ್ನು ಮದಿವೆಯಾಗಬಾರದು. ಹಾಗೆ ಸ್ತ್ರೀ. ಭಾವವನ್ನು ಪರೀಕ್ಷಿಸದೆ ವಿವಾಹ ಮಾಡಿಕೊಂಡವನು, ಇಹಪರಸೌಖ್ಯಗಳೆರ ಡಕ್ಕೂ ಹೊರಗಾಗುವನು.ಅಂತಹ ಸ್ತ್ರೀಯರ ಕೋಟೆಯಲ್ಲಿ ನೀನು ನನ್ನ ನ್ಯೂ ಸೇರಿಸಬಹುದೆ” ? ಎಂದಳು ಆಗ ಕೃಷ್ಣನು: ಓ ಸಾಥೀ!ರಾಜಪತ್ರಿ'ನಿನ್ನ ಬಾಯಿಂದ ಈವಿಧವಾ ದ ಪ್ರಿಯವಾಕ್ಯಗಳನ್ನು ಕೇಳಬೇಕೆಂಬುದಕ್ಕಾಗಿಯೇ, ಪರಿಹಾಸ್ಯಕ್ಕಾಗಿ ನಾನು ಆ ಮಾತುಗಳನ್ನಾಡಿದೆನೇ ಹೊರತು ಬೇರೆ ಯಲ್ಲ. ನಾನು ಹೇಳಿದ ಒಂ ದೊಂದುಮಾತಿನ ತಾತ್ಸರವನ್ನೂ ನೀನು ಗ್ರಹಿಸಿ, ನನ್ನ ಅಭಿಪ್ರಾಯಕ್ಕೆ ತಕ್ಕಂತೆ ಉತ್ತರವನ್ನು ಕೊಟ್ಟುದರಿಂದ, ನಾನು ಬಹಳಸಂತೋಷಪಟ್ಟೆನು. ನೀನು ಹೇಳಿದುದೆಲ್ಲವೂ ಸತ್ಯವು. ಓ ಮಾನಿನೀ ! ಈಗ ನೀನು ನನ್ನ ಪಾದಸೇ ವೆ ಮೊದಲಾದ ಯಾವಯಾವ ಕೋರಿಕೆಗಳನ್ನು ಅಪೇಕ್ಷಿಸಿದೆಯೋ, ನನಗೆ ಏಕಾಂತಭಕ್ಕಳಾದ ನಿನ್ನಲ್ಲಿ ಅವೆಲ್ಲವೂ ಈಗಾಗಲೇ ಸಿದ್ಧಿಸಿರುವುದು, ಈಗ ನೀನು ನನ್ನಲ್ಲಿ ಹೊಸದಾಗಿ ಕೇಳಬೇಕಾದುದಾಗಲಿ, ನಾನು ನಿನಗೆ ಹೊಸ ದಾಗಿ ಕೊಡತಕ್ಕುದಾಗಲಿ ಯಾವುದೊಂದೂ ಇರುವುದಿಲ್ಲ. ಆದರೆ ನಿನಗೆ ನನ್ನಲ್ಲಿರತಕ್ಕೆ ಪ್ರೇಮಾತಿಶಯವೂ, ಪಾತಿವ್ರತ್ಯವೂ, ಈಗ ಲೋಕ ಕ್ಕೆ ಸ್ಪಷ್ಟವಾಗಿ ತಿಳಿಯುವಂತಾಯಿತು. ನಾನು ಆಡಬಾರದ ಮಾತು ಗಳನ್ನಾಡಿ ನಿನ್ನನ್ನು ಧಿಕ್ಕರಿಸಿದರೂ, ನೀನು ಮನಸ್ಸು ಕಲಗದೆ ನನ್ನಲ್ಲಿ ದೃಢಭಕ್ತಿಯನ್ನೆ ತೋರಿಸಿದೆ! ಲೋಕದಲ್ಲಿ ಯಾವಜನರು, ಅಲ್ಪಸು ಖಕ್ಯಾಸೆಪಟ್ಟು, ಅದರಿಂದ ಮಸ್ಸು ಕಲಗಿ, ನಾನು ಮೋಕ್ಷಪ್ರದನಾಗಿರು ವಾಗಲೂ, ದಾಂಪತ್ಯಸುಖಕ್ಕೆ ಮಾತ್ರವೇ ಆಸೆಪಟ್ಟು, ತಪಸ್ಸಿನಿಂದ