ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೮೦ ಶ್ರೀಮದ್ಭಾಗವತವು [ಅಧ್ಯಾ, ೬೦. ಲೂ, ವ್ರತಗಳಿಂದಲೂ ನನ್ನನ್ನು ಆರಾಧಿಸುವರೋ, ಅವರೆಲ್ಲರೂ ನನ್ನ ಮಾ ಯೆಯಿಂದ ಮೋಹಿತರೆಂದೇ ತಿಳಿ : ಮೋಕ್ಷಲಕ್ಷ್ಮಿಗೆ ಮುಖ್ಯಾಧಾ ರನಾಗಿರುವ ನನ್ನನ್ನು , ತಪಸ್ಸು ಮೊದಲಾದುವುಗಳಿಂದ ಪ್ರಸನ್ನ ನನ್ನಾಗಿ ಮಾಡಿಕೊಂಡಮೇಲೆಯೂ, ಯಾರು,ನನ್ನಿಂದ ಪಡೆಯಬಹುದಾದ 3 ಉತ್ಯ ಮಪುರುಷಾರ್ಥವನ್ನು ಬಿಟ್ಟು,ಅಲ್ಪಸುಖವನ್ನು ಕೋರುವರೋ, ಅಂಥವರನ್ನು ಮಂದಭಾಗ್ಯರೆಂದು ಹೇಳುವುದರಲ್ಲಿ ಸಂದೇಹವೇಸಿದೆ ! ಲೌಕಿಕಗಳಾದ ಸು ಗಳೆಲ್ಲವೂ ಅತ್ಯಲ್ಪಗಳು! ನರಕದಲ್ಲಿಯೂ ಅಂತವುಗಳನ್ನನುಭವಿಸ ಬಹುದು. ಆದುದರಿಂದ ದಾಂಪತ್ಯ ಸುಖವನ್ನು ನರಕವೆಂದೇ ಹೇಳಬಹು ದು, ಓ ಗೃಹೇಶ್ವರೀ : ಸೀನು ಸಂಸಾರವಿಮೋಚನಕ್ಕೆ ಕಾರಣವಾದ, ಸಿ ಪ್ಯಾಮವಾದ ಅನಿವೃತಿಯನ್ನು ತೋರಿಸಿದೆಯವೆ ? ಇದು ನಿನಗೆ ದೈ ವಾನುಗ್ರಹದಿಂದುಂಟಾದುದೆಂದು ತಿಳಿ ! ಇದು ಪುಣ್ಯ ಪರಿಪಾಕವಿಲ್ಲದ ಅಲ್ಪ ಜನರಿಗೆ ಎಂದೆಂದಿಗೂ ಸಿದ್ದಿಸಲಾರದು : ಕೇವಲ ಇಂದ್ರಿಯತೃಪ್ತಿಪ ರಾಯಣರಾಗಿ, ತಮ್ಮ ಹಾವಭಾವವಿಳಾಸಗಳಿಂದ ಪತಿಯನ್ನು ವಂಚಿಸುವ ಸ್ವಭಾವವುಳ್ಳ ಸಾಮಾನ್ಯಸಿಯರಿಗೆ, ಇದು ಸ್ವಷ್ಟ ದಲ್ಲಿಯೂ ಸಾಧ್ಯವಲ್ಲ ವೆಂಬುದನ್ನು ಹೇಳಬೇಕಾದುದೇನು ? ಓ ಮಾನಿನೀ ! ಮುಖ್ಯವಾಗಿ ಒಂದೇ ಮಾತಿನಲ್ಲಿ ಹೇಳುವನು ಕೇಳು : ಕುಟುಂಬಿಗಳಲ್ಲಿ ನಿನ್ನಂತೆ ಪತಿಪರಾಯಣೆ ಯಾದ ಸ್ತ್ರೀಯನ್ನು ಇದುವರೆಗೆ ನಾನು ಕಂಡುಕೇಳಿದುದಿಲ್ಲ! ಇದಕ್ಕೆ ಬೇರೆ ನಿದರ್ಶನವೇಕೆ ! ನಿನ್ನ ವಿವಾಹಕಾಲದಲ್ಲಿ ಎಷ್ಟೋ ಮಂದಿ ರಾಜಾಧಿರಾಜರು ನಿನ್ನನ್ನು ತಾವಾಗಿ ಮೋಹಿಸಿಬಂದರೂ, ಅವರೆಲ್ಲರನ್ನೂ ಅನಾದರಿಸಿ, ಬ್ರಾ ಹ್ಮಣೋತ್ತಮನ ಮೂಲಕವಾಗಿ ನನಗೆ ರಹಸ್ಯ ಸಂದೇಶವನ್ನು ಹೇಳಿಕಳುಹಿ ಸಿದೆಯಲ್ಲವೆ ? ಅದೂ ಹಾಗಿರಲಿ ! ನಾನು ನಿನ್ನಣ್ಣನನ್ನು ಯುದ್ಧದಲ್ಲಿ ಪರಾ ಭವಿಸಿದೆನು!ಅವನಿಗೆ ವೈರೂಪ್ಯವನ್ನೂ ಉಂಟುಮಾಡಿದೆನು!ಅನಿರುದ್ಧನವಿವಾ ಹಕಾಲದಲ್ಲಿ ನಡೆದ ದ್ಯೋತಸಭೆಯಲ್ಲಿ, ಅವನ ಪ್ರಾಣವನ್ನೂ ನೀಗಿಸಿದೆವು.ಇ ವೆಲ್ಲವನ್ನೂ ನೋಡುತಿದ್ದಾಗಲೂ ನೀನು, ಮನಸ್ಸಿನ ದುಃಖವನ್ನು ಹೊರಕ್ಕೆ ಕಾಣಿಸದೆ, ನನ್ನ ಮನಸ್ಸಿಗೆ ಏನಾದರೂ ಅಸಮಾಧಾನವುಂಟಾಗುವುದೆಂಬ ಭಯದಿಂದ ಸುಮ್ಮನಿದ್ದೆಯಲ್ಲವೆ!ಇದೇ ನಿನಗೆ ನನ್ನಲ್ಲಿರುವ ಪ್ರೇಮದ ಪರಾ