ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

දෙය. ಶ್ರೀಮದ್ಭಾಗವತವು - [ಅಧ್ಯಾ, ೬೧. ಬ್ಲೊಬ್ಬರ ಮನೆಯಲ್ಲಿಯೂ ಯಾವಾಗಲೂ ಇದ್ದಂತೆ ತನ್ನ ಮಾಯೆಯಿಂದ ಅವರನ್ನು ಮೋಹಗೊಳಿಸುತ್ತಿದ್ದನು. ಅವರೊಬ್ಬೊಬ್ಬರಿಗೂ, ಕೃಷ್ಣನಿಗೆ ತನ್ನಂತೆ ಪ್ರಿಯೆಯಿಲ್ಲವೆಂಬ ಭಾವವು ಹುಟ್ಟಿತು. ಆಸ್ತಿಯರೊಬೊಬ್ಬ ರೂ, ತಮ್ಮ ಸೌಂದಯ್ಯ ಬಂದ ಕೃಷ್ಣನನ್ನೂ ತಾವು ಮೋಹಪರ ವಶನ್ನಾಗಿ ಮಾಡಿಬಿಟ್ಟಂತೆ ಹೆಮ್ಮೆ ಗೊಂಡಿದ್ದರು. ಆದರೇನು ? ಸ್ವರೂಪ ಸ್ವಭಾವಗಳಲ್ಲಿ ಕಂದುಕುಂದಿಲ್ಲದೆ, ಪರಿಪೂರ್ಣನಾದ ಆ ಶ್ರೀಕೃಷ್ಣನ ಮುಖ ಕಮಲವನ್ನೂ , ಆತನ ಆಜಾನುಬಾಹುಗಳನ್ನೂ, ಮಂದಹಾಸವಿಶಿಷ್ಟವಾದ ಮುಖವನ್ನೂ, ಪ್ರಸನ್ನ ದೃಷ್ಟಿಯನ್ನೂ ನೋಡಿ, ಆತನ ಸರಸಸಲ್ಲಾಪಾಡಿ ಗಳಿಗೆ ತಾವು ಮೈಮರೆತು ಮರುಳಾಗುತಿದ್ದರೇ ಹೊರತು, ತಮ್ಮ ಹಾವ ಭಾವವಿಲಾಸಗಳಿಂದ ಆತನ ಮನಸ್ಸನ್ನು ಜಯಿಸಲಾರದೆ ಹೋದರು. ಆ ಹದಿ ನಾರುಸಾವಿರಮಂದಿ ಸ್ತ್ರೀಯರೂ ಮನ್ಮಥಬಾಣದಂತೆ ಮೋಹಜನಕವಾದ ತಮ್ಮ ಮಂದಹಾಸಗಳಿಂದಾಗಲಿ, ಕಟಾಕ್ಷಸೌಂದಠ್ಯದಿಂದಾಗಲಿ, ಹುಬ್ಬಿ ನಾಟಗಳಿ೦ಬಾಗಲಿ, ಶೃಂಗಾರಸೂಚಕಗಳಾದ ಆಂಗಸಂಜ್ಞೆಗಳಿಂದಾಗಲಿ, ಕಾಮಶಾಸ್ತ್ರ ಪ್ರಸಿದ್ಧಗಳಾದ ಬೇರೆ ಯಾವವಿಧದಿಂದಾಗಲಿ, ಆ ಕೃಷ್ಣನ ಮನಸ್ಸನ್ನು ಕದಲಿಸಲು ಸಮರರಾಗಲಿಲ್ಲ. ಹೀಗೆ ಆ ರಾಜಕುಮಾರಿಯರು, ಬ್ರಹ್ಮಾಟದೇವತೆಗಳೂ ಯಾವನ ನಿಜವನ್ನು ಕಾಣಲಾರರೋ,ಅಂತಹಲಕ್ಷಿ ಪತಿಯಾದ ಶ್ರೀಹರಿಯನ್ನೇ ತಮಗೆ ಪತಿಯನ್ನಾಗಿ ಪಡೆದು, ಆತನು ಎದೆಬಿಡ ದೆ ತಮ್ಮ ಬಳಿಯಲ್ಲಿದ್ದು ತಮ್ಮನ್ನು ನಾನಾ ವಿಧವಾದ ಅನುರಾಗಚೇಷ್ಟೆಗೆ ಆಂದ ಸಂತೋಷಪಡಿಸುತ್ತಿರುವುದನ್ನು ನೋಡಿ ಪರಮಾನಂದಭರಿತರಾಗಿ, ತಮ್ಮಲ್ಲಿ ಬೇರೆಬೇರೆ ನೂರಾರುಮಂದಿ ದಾಸಿಯರಿದ್ದರೂ ಕೃಷ್ಣನಲ್ಲಿ ತಮಗಿರುವ ಪ್ರೇಮದಿಂದ, ಅವರು ತಮ್ಮ ಕೈಯಿಂದಲೇ ಉಪಚರಿಸುತಿದ್ದ ರು, ಕೃಷ್ಣನನ್ನು ಕಂಡೊನೆ ಪ್ರತ್ಯುತ್ಯಾನಮಾಡುವುದು ! ಆಸನವನ್ನು ತಂದಿಡುವುದು! ಆರ್ಥ್ಯಪಾದ್ಯಾದಿಗಳನ್ನು ಕೊಡುವುದು ! ತಾಂಬೂಲವನ್ನು ಮಡಿಸಿಕೊಡುವುದು! ಬಳಲಿಕೆಯನ್ನಾ ರಿಸುವುದು!ಬೀಸುವುದು! ಗಂಧಪುಷ್ಪ ಗಳಿಂದಲಂಕರಿಸುವುದು! ತಲೆಬಾಚುವುದು! ಹಾಸಿಗೆಹಾಸುವುದು! ಅಭ್ಯಂಗ ನಮಾಡಿಸುವುದು! ಉಪಹಾರಗಳನ್ನು ತಂದಿಡುವುದು! ಇವೇ ಮೊದಲಾದ