ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧ರ ಅಧ್ಯಾ, ೬೧j ದಶಮಸ್ಕಂಧವು. ಸೇವಾವೃತ್ತಿಗಳಿಂದ ಅವನನ್ನು ಸಂತೋಷಪಡಿಸುತಿದ್ದರು. ಓ ರಾಜಾ ! ಮೇಲೆ ಹೇಳಿದ ಹದಿನಾರುಸಾವಿರಮಂದಿ ಸ್ತ್ರೀಯರಿಗೂ ಬೇರೆಬೇರೆಯಾಗಿ ಹತ್ತು ಮಂದಿ ಪ್ರತ್ರರಂತೆ ಜನಿಸಿದರೆಂದು ಹೇಳದೆನಲ್ಲವೆ? ಆಸ್ತ್ರೀಯರಲ್ಲಿ ಎಂ ಟು ಮಂದಿ ಮಾತ್ರ ಪ್ರಮುಖರೆನಿಸಿದುದರಿಂದ, ಈ ಅಷ್ಟಮಹಿಷಿಯರಲ್ಲಿ ಹುಟ್ಟಿದ ಕುಮಾರರ ಹೆಸರನ್ನು ಮಾತ್ರ ಹೇಳುವೆನು ಕೇಳು. ರುಕ್ಕಿಣಿಯಲ್ಲಿ, ಪ್ರದ್ಯುಮ್ನ , ಚಾರುದೇಷ್ಣ, ಸುದೇಷ್ಟ್ರ, ಚಾರು ದೇಸ, ಸುಚಾರು, ಚಾರುಗುಪ್ಪ, ಭದ್ರಚಾರು, ಚಾರುಚಂದ್ರ, ಅತಿಚಾ ರು, ಚಾರುಮಂತರೆಂಬ ಹತ್ತು ಮಂದಿ ಪುತ್ರರು ಹುಟ್ಟಿದರು. ಸತ್ಯಭಾ ಮೆಯಲ್ಲಿ, ಭಾನು, ಸುಭಾನು, ಸ್ವರ್ಭಾನು, ಪ್ರಭಾನು, ಭಾನುಮಂತ, ಚಂ ದ್ರಭಾನು, ಬೃಹದ್ಭಾನು, ಅತಿಭಾನು, ಶ್ರೀಭಾನು, ಪ್ರತಿಭಾನುವೆಂಬ ಹತ್ತು ಮಂದಿ ಮಕ್ಕಳಾದರು, ಜಾಂಬವತಿಗೆ, ಸಾಂಬ, ಸುಮಿತ್ರ, ಪುರುಜಿತ್ತು, ಶತಜಿತ್ತು, ಸಹಸ್ರಜಿತ್ತು, ವಿಜಯ, ಚಿತ್ರಕೇತು, ವಸುಮಂತ, ದ್ರವಿಣ, ಕ್ರತುಗಳೆಂಬ ಹತ್ತು ಮಂದಿ ಪುತ್ರರಾದರು. ನಾಗ್ಯ ಜಿತಿಯೆಂಬವಳಲ್ಲಿ, ಭಾನು, ಚಂದ್ರ, ಅಶ್ವಸೇನ, ಚಿತ್ರಗು, ವೇಗವಂತ, ವೃಷ, ಆಸು, ಶಂಕು, ವಸ್ತು, ನೃತಿಯೆಂಬ ಹತ್ತು ಮಂದಿ ಮಕ್ಕಳಾದರು. ಕಾಳಿಂದಿಯೆಂಬವಳಲ್ಲಿ, ಶ್ರುತಿ, ಕವಿ, ವೃಷ, ವೀರ,ಸುಬಾಹು, ಭದ್ರ, (ಏಕಲ)ಶಾಂತಿ, ದರ್ಶ, ಪೂರ್ಣಮಾ ಸ, ಸೋಮಕರೆಂಬ ಹತ್ತು ಮಂದಿ ಮಕ್ಕಳಾದರು, ಅಕ್ಷಣೆಯೆಂಬವಳಲ್ಲಿ, ಪ್ರ ಜಂಪು, ಗಾತ್ರರ್ವಾ, ಸಿಂಹ, ಬಲ, ಪ್ರಬಲ, ಊರಗ, ಮಹಾಶಕ್ತಿ, ಸಹ, ಓಜಸ್ಸು, ಅಪರಾಜಿತರೆಂಬವರು ಜನಿಸಿದರು. ಮಿತ್ರವಿಂದೆಯಲ್ಲಿ, ವೃಕ, ಆರ್ಕ, ಅನಿಲ,ಗೃಢ.ಬಕ್ಸನ್ನ, ಅನ್ನಾ ದ, ಮಹಾಶ, ಪವನ, ವಕ್ನಿ, ಕ್ಷುಧಿಯೆಂಬವರು ಜನಿಸಿದರು. ಭದ್ರೆಯೆಂಬವಳಲ್ಲಿ, ಸಂಗ್ರಾಮಜಿತ್ತು, ಬೃಹತ್ತೇನ, ಶೂರ, ಪ್ರಹಣ, ಅರಿಜಿತ್ತು, ಜಯ, ಸುಭದ್ರ, ವಾಮ, ಆ ಯುಸ್ಸು, ಸತ್ಯಕರೆಂಬವರು ಹುಟ್ಟಿದರು. ಹೀಗೆಯೇ ಇತರಸ್ತ್ರೀಯರಿಗೂ ಹತ್ತು ಮಂದಿ ಕುಮಾರರಂತೆ ಜನಿಸಿದರು. ಬಲರಾಮನ ಪತ್ನಿಯಾದ ರೋ ಹಿಣಿಯಲ್ಲಿಯೂ, ದೀಪ್ತಿಮಂತ, ತಾಮ್ರಪತ್ರ,ಮುಂತಾದವರು ಹುಟ್ಟಿದರು, ಹಿಂದೆ ಹೇಳಿದ ಕುಮಾರರಲ್ಲಿ ಪ್ರದ್ಯುಮ್ನ ನೆಂಬವನಿಗೆ, ರುಕ್ಕವತಿಯೆಂಬ ಭಾ 138 B