ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Y? ೨೧೮೪ ಶ್ರೀಮದ್ಭಾಗವತವು [ಅಧ್ಯಾ, ೬೧. ರೈಯಲ್ಲಿ ಮಹಾಬಲಾಢನಾದ ಅನಿರುದ್ಯನೆಂಬ ಮಗನಾದನು, ಅನಿರುದ್ಧನ ಪತ್ನಿ ಯಾದ ರುಕ್ಕ ವತಿಯೆಂಬವಳು ರುಕ್ಕಿಯ ಮಗಳು. ಈದಂಪತಿಗಳಿಬ್ಬ ರೂ ಭೋಜಕಟವೆಂಬ ಪಟ್ಟಣದಲ್ಲಿ ವಾಸಿಸುತ್ತಿದ್ದರು. ಪ್ರದ್ಯುಮ್ನ ಸಿಗೆ ಮಾತ್ರವಲ್ಲದೆ,ಕೃಷ್ಣನ ಬೇರೆ ಮಕ್ಕಳಿಗೂ ಬೇರೆಬೇರೆ ಅನೇಕಪುತ್ರರು ಜನಿಸಿ, ಅವರ ಸಂತಾನಗಳೆಲ್ಲವೂ ಪುತ್ರಪೌತ್ರಪರಂಪರೆಯಾಗಿ ವಿಸ್ತರಿಸುತ್ತ ಬಂದಿ ತು, ಕೃಷ್ಣನ ಹದಿನಾರುಸಾವಿರಮಂದಿ ಸ್ತ್ರೀಯರೂ ಸಂತಾನ ಸಮೃದ್ಧಿ ಯಿಂದ ಶೋಭಿಸುತ್ತಿದ್ದರು.” ಎಂದನು. ಈನಡುವೆ ಪುಕ್ತಿದಾಜನು ಶುಕ ಮುನಿಯನ್ನು ಕುರಿತ) c« ಓ ಮುನೀಂದ್ರಾ ! ರುಕ್ಕಿಯೆಂಬವನು ಕೃಷ್ಣನ ↑ ಅಜನ್ಮ ದ್ವೇಷವನ್ನು ಬೆಳೆಸುತಿದ್ದವರಲ್ಲವೆ ! ಆತನು ತನ್ನ ವೈರಿಯಾದ ಕೃಷ್ಣನ ಮಗನಿಗೆ ತನ್ನ ಮಗಳನ್ನು ಕೊಟ್ಟು ವಾಹಮಾಡಿದುದು ಹೇಗೆ ? ಆ ರುಕ್ಕಿಯು ಕೃಷ್ಣನಿಂದ ಅವಮಾನಿತನಾಗಿ, ಅವನನ್ನು ಕೊಲ್ಲುವುದ ಕ್ಕೂ ಅವಕಾಶವನ್ನು ಹುಡುಕುತಿದ್ದವನಲ್ಲವೆ ? $0ತವನು ಕೃಷ್ಣನೊಡನೆ ಸಂಬಂಧವನ್ನು ಬೆಳೆಸಿದನೆಂದರೆ, ನನಗೆ ಆಶ್ಚರವಾಗಿರುವುದು ಇದರ ರಹಸ್ಯ ವೇನೆಂಬುದನ್ನು ನನಗೆ ತಿಳಿಸಬೇಕು, ನಿಮ್ಮಂತಹ ಯೋಗಿಗಳು ಯೋಗದ ಪಿಯಿಂದಲೇ ಭೂತಭವಿಷ್ಯದ್ವರ್ತಮಾನಗಳೆಲ್ಲವನ್ನೂ ತಿಳಿಯಬಲ್ಲವರು. ಇಂದ್ರಿಯಗೊಚರಗಳಲ್ಲದ ಪರೋಕ್ಷವಿಷಯಗಳನ್ನೂ ನೀವು ನಿ ಕ್ಷಾತ್ಕರಿಸ ಬಲ್ಲವರು. ಆದುದರಿಂದ ಪರಸ್ಪರವೈರಿಗಳಲ್ಲಿ ವಿವಾಹಸಂಬಂಧವು ಹೇಗೆ ಬೆಳೆಯಿತೆಂಬ ವೃತ್ತಾಂತವನ್ನು ನನಗೆ ತಿಳಿಸಬೇಕು ” ಎಂದು ಕೇಳಲು, ಅದ ಆನ್ನಿ ಶುಕಮುನಿಯು, (ಲಾಜಾ ! ಕೇಳು ! ಕೃಷ್ಣನಿಂದ ಅವಮಾನಿತನಾದ ರುಕ್ಕಿಯು, ಆತನಲ್ಲಿ ಬದ್ಧದ್ವೇಷವನ್ನು ತೋರಿ ಸುತಿದ್ದರೂ, ತನ್ನ ತಂಗಿಯಾದ ರುಕ್ಷ್ಮಿಣಿಯ ಮನಸ್ಸನ್ನು ನೋಯಿಸ ಬಾರದೆಂಬ ದಾಕ್ಷಿಣ್ಯಕ್ಕಾಗಿ, ಅವಳ ಮಗನಾದ ಪ್ರದ್ಯುಮ್ನ ನಿಗೇ ತನ್ನ ಮಗಳನ್ನು ವಿವಾಹಮಾಡಿಕೊಟ್ಟನು. ಆಗಲೂ ರುಕ್ಕಿಯು ತಾನಾಗಿ ಪ್ರದ್ಯು ಮ ನಿಗೆ ತನ್ನ ಮಗಳನ್ನು ಕೊಟ್ಟವನಲ್ಲ. ಆ ವಿವಾಹವು ನಡೆದ ರೀತಿಯೇ ಬೇರೆ ! ಆ ರುಕ್ಕವತಿಯ ಸ್ವಯಂವರಕ್ಕಾಗಿ ಬಹಳ ಮಂದಿ ರಾಜರು ಬಂದು ನೆರೆದಿದ್ದರು. ಆದರೆ ರುಕ್ಕವತಿಗೂ, ಪ್ರದ್ಯುಮ್ನ ನಿಗೂ ಮೊದಲಿಂದಲೂ