ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೩೧.] ದಶಮಸ್ಕಂಧವು. ೨೧೮೫ ಅನ್ನೋನ್ಯಾನುರಾಗವು ಹುಟ್ಟಿದ್ದಿತು. (ಕೃಷ್ಣನು ರುಕ್ಷ್ಮಿಣಿಯನ್ನು ವರಿಸಿ ದಂತೆಯೆ) ಪ್ರದ್ಯುಮ್ನ ನೂಕೂಡ ಆ ಸ್ವಯಂವರಕಾಲದಲ್ಲಿ ರಥಯಾತ್ರ ಸಹಾಯನಾಗಿಬಂದು, ಅಲ್ಲಿದ್ದ ಇತರರಾಜರೆಲ್ಲರನ್ನೂ ಜಯಿಸಿ, ಆ ಕನ್ಯ ಯನ್ನ ಪಹರಿಸಿಕೊಂಡು ಹೋದನು. ರುಕ್ನಿಗೆ ಈ ವಿವಾಹವು ಸಮ್ಮತವಲ್ಲ ಡಿದ್ದರೂ, , ಮಿಂಚಿಹೋದ ಕಾವ್ಯಕ್ಕೆ ಅಡ್ಡಿ ಮಾಡಲಾರದೆ, ತನ್ನ ತಂಗಿ ಯಾದ ರುಕ್ಕಿಣಿಗೂ ಅದು ಸಮ್ಮತವಾಗಿರುವುದನ್ನು ತಿಳಿದು, ಸುಮ್ಮ ನಿದ್ದನು. ಕೃಷ್ಣಭಾರೆಯರಲ್ಲಿ ಗಂಡುಮಕ್ಕಳುಮಾತ್ರವೇ ಅಲ್ಲದೆ, ಒಬ್ಬೊಬ್ಬಳಲ್ಲಿ ಒಂದೊಂದು ಕನ್ಯಾತಿಶುವೂ ಜನಿಸಿತು. ಆ ಕನೈಯರಲ್ಲಿ ರುಕ್ಕಿಣಿ ಯ ಮಗಳಾದ ಚಾರುಮತಿಯೆಂಬವಳನ್ನು ಕೃತವರ್ಮನ ಮಗನು ವರಿಸಿದನು. ರುಕ್ಕಿಗೂ, ಕೃಷ್ಣನಿಗೂ ಬದ್ಧ ವೈರವಿದ್ದರೂ, ಆ ರುಕ್ಕಿ ಕೃಷ್ಣರಿಗೆ ಹಿಂದೆ ಹೇಳಿದುದೊಂದಲ್ಲದೆ ಮತ್ತೊಂದು ವಿಧದ ಬಾಂಧ ವ್ಯವೂ ಬೆಳೆಯಿತು. ರುಕ್ಕಿಯು ತನ್ನ ದೌಹಿತ್ರನಾದ ಅನಿರುದ್ಧನಿಗೆ, ತನ್ನ ಪಾತ್ರಿಯಾದ ರೋಚಸಿಯೆಂಬವಳನ್ನು ಕೊಟ್ಟು ವಿವಾಹಮಾಡಿಸಿದನು. ಇದೂ ತನ್ನ ತಂಗಿಯಾದ ರುಕ್ಷ್ಮಿಣಿಯ ನಿರ್ಬಂಧಕ್ಕಾಗಿಯೇ ಹೊರತು ಮನಃಪೂರೈಕವಾಗಿ ನಡೆದುದಲ್ಲ. ಶತ್ರುಗಳಲ್ಲಿ ಪರಸ್ಪರಬಾಂಧವ್ಯವೂ, ಭೋಜನಪ್ರತಿಭೋಜನಗಳೂ ಯುಕ್ತವಲ್ಲವೆಂಬ ಅಂಶವನ್ನು ರುಕ್ಕಿಯು ಚೆನ್ನಾಗಿ ಬಲ್ಲವನಾಗಿದ್ದರೂ, ಅವನಿಗೆ ತನ್ನ ತಂಗಿಯಲ್ಲಿದ್ದ ಪ್ರೇಮ ಪಾಶವು ಅಂತಹ ಸಂಬಂಧಕ್ಕೂ ಸಮ್ಮತಿಸುವಂತೆ ಮಾಡಿತು. ಲೋಕ ವಿರುದ್ಧವಾದ ಈ ಸಂಬಂಧಕ್ಕೆ ತಕ್ಕ ಫಲವು ಕಾಣದೆ ಹೋಗಲಿಲ್ಲ. ಆ ಸಂ ಗತಿಯನ್ನೂ ತಿಳಿಸುವೆನು ಕೇಳು ! ಅನಿರುದ್ಧನ ವಿವಾಹವು ನಡೆದು ಹೋದ ಮೇಲೆ, ಅದಕ್ಕಾಗಿ ಅಲ್ಲಿ ಬಂದಿದ್ದ ಕಳಿಂಗನೇ ಮೊದಲಾದ ಕೆಲವುಮಂದಿ ದುಷ್ಟರಾಜರು, ಬಲಗತರಾಗಿ,ರುಕ್ಕಿಗೆ ಹೀಗೆಂದು ದುರ್ಬೋಧನೆಯನ್ನು ಮಾಡತೊಡಗಿದರು, “ಅಯ್ಯಾ ! `ಮಿತ್ರನೆ ! ನೀನು ವಿಧಿಯಿಲ್ಲದೆ ನಿನ್ನ ಶತ್ರುಗಳೊಡನೆ ಬಾಂಧವ್ಯವನ್ನಂತೂ ಬೆಳೆಸಿದುದಾಯಿತು. ಆದರೇನು ? ಈಗಲೂ ಚಿಂತೆಯಿಲ್ಲ ! ಉಪಾಯದಿಂದ ಈಗಲೂ ನೀನು ನಿನ್ನ ವೈರಿಯಾದ ಬಲರಾಮನಿಗೆ ತಕ್ಕ ಪ್ರತಿಕ್ರಿಯೆಯನ್ನು ಮಾಡಬಹುದು, ಅವನಿಗೆ ದೂತ