ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೮೬ ಶ್ರೀಮದ್ಭಾಗವತವು [ಅಧ್ಯಾ ೬೧ ದಲ್ಲಿ ಪರಿಶ್ರಮವಿಲ್ಲ! ಆದರೂ ಅವನಿಗೆ ಜೂಜಾಡಬೇಕೆಂಬ ಆಸೆಯೇನೋ ಅಪಾರವಾಗಿರುವುದು, ಆದುದರಿಂದ ನೀನು ಅಕ್ಷಮ್ಯೂತದಲ್ಲಿ ಅವನನ್ನು ಸೋಲಿಸಿ ಅವನ ಸಸ್ಸನನ್ನೂ ಅಪಹರಿಸಿಬಿಡು" ಎಂದರು. ಅದರಂತೆಯೇ ರುಕ್ಕಿಯು ಬಲರಾಮನನ್ನು ಉಪಾಯದಿಂದ ಜೂಜಾಡುವುದಕ್ಕೆ ಪ್ರೋತ್ಸಾ ಹಿಸಿದನು. ಒಂದೊಂದಾಟದಲ್ಲಿಯೂ ಬಲರಾಮನಿಗೆ ಪರಾಜಯವುಂಟಾ ಯಿತು. ಆಗ ಬಲರಾಮನು, ಹಟದಿಂದಲೂ, ಕೋಪಬಂದಲೂ ಮೊದಲು ನೂರು, ಆಮೇಲೆ ಸಾವಿರ, ಆಮೇಲೆ ಹತ್ತು ಸಾವಿರವರಹಗಳಂತೆ ಮೇಲೆಯೇ ಲೆ ಹಣವನ್ನೊಡ್ಡಿ,ಮೊದಮೊದಲು ತಾನು ಗೆದ್ದರೂ ಕೊನೆಗೆ ಅವೆಲ್ಲವನ್ನೂ ಸೋತು ಬಿಟ್ಟನು.ಆಗ ಸಮೀಪದಲ್ಲಿದ್ದ ಕಳಿಂಗನು ಬಲರಾಮನನ್ನು ನೋಡಿ ಹದಿನಾರುಹಲ್ಲುಗಳೂ ಕಾಣುವಂತೆ ಅಟ್ಟಹಾಸದಿಂದ ನಗುತ್ತ ಅವನನ್ನು ಹಾಸ್ಯಮಾಡಿದನು. ಬಲರಾಮನಿಗೆ ಸಹಿಸಲಾರದ ಕೋಪವುಂಟಾಯಿತು. ಹಾಗಿದ್ದರೂ ಬಲರಾಮನು ಆಟದಮೇಲಿನ ಗಮನದಿಂದ ಸುಮ್ಮನಿದ್ದನು. ರುಕ್ಕಿಯು ಮತ್ತೊಮ್ಮೆ ಲಕ್ಷವರಹಗಳನ್ನೊಡ್ಡಲು, ಬಲರಾಮನಿಗೆ ಜ ಯವುಂಟಾಗಿ, ಆ ಹಣವು ಬಲರಾಮನಿಗೇ ಸೇರಬೇಕಾಯಿತು. ರುಕ್ಕಿ ಯು ಆ ಹಣವನ್ನು ಕೊಡಲಾರದೆ ಕಪಟತಂತ್ರವನ್ನಾರಂಭಿಸಿ, ಆ ಆಟದಲ್ಲಿ ತನಗೇ: ಜಯವಾಯಿತೆಂದು ಸಾಧಿಸಿ ಹಠಹಿಡದನು. ಬಲರಾಮನಿಗಾದ ರೋ, ಪರ್ವಕಾಲದ ಸಮುದ್ರದಂತೆ ಮಹತ್ತಾದ ಕೋಪಾವೇಶವು ಉಕ್ಕಿ ಬರುತ್ತಿತ್ತು, ಅವನ ಕಣ್ಣುಗಳು ಕೆಂಪಾದುವು. ಆದನ್ನೂ ತಡೆದುಕೊಂಡು ಬಲರಾಮನು ಮತ್ತೊಮ್ಮೆ ಅದೇ ಹಣವನ್ನೊಡ್ಡಿದನು. ಆಗಲೂ ನ್ಯಾಯ ರೀತಿಯಿಂದ ಬಲರಾಮನಿಗೇ ಜಯವುಂಟಾಗಿ, ಆ ಹಣವೂ ಅವನಿಗೇ ಸೇರ ಬೇಕಾಯಿತು, ಆದರೆ ಆಗಲೂ ರುಕ್ಕಿಯು ತನಗೇ ಜಯವುಂಟಾಯಿತೆಂದು ಹಟಹಿಡಿಯುತ್ತ, ತನ್ನ ಸಮೀಪದಲ್ಲಿದ್ದ ಕಳಿಂಗಾಡಿಗಳನ್ನೇ ಪಂಚಾಯಿ ತರನ್ನಾಗಿಟ್ಟು ಅವರಿಂದಲೂ ಅದೇಮಾತನ್ನು ಹೇಳಿಸಿದನು. ಅವರೆಲ್ಲರೂ ದುರ್ಯೋಧನನಲ್ಲಿ ತಮಗಿರುವ ಪಕ್ಷಪಾತದಿಂದ ಸುಳ್ಳು ಸಾಕ್ಷವನ್ನು ಹೇಳುತ್ತಿದ್ದಾಗ, ಆಕಾಶದಲ್ಲಿ ಧರ್ಮರೀತಿಯಿಂದ ಜಯಿಸಿದವನು ಬಲ ರಾಮನೇ ಹೊರತು ರುಕ್ಕಿಯಲ್ಲ ! ವಂಚಕನಾದ ಈ ರುಕ್ಕಿಯು ಹೇಳುವ