ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೬೧.] ದಶಮಸ್ಕಂಧವು. ೨೧೮೬ ಮಾತು ಸುಳ್ಳು”, ಎಂಬ ಅಶರೀರವಾಣಿಯು ಕೇಳಿಸಿತು. ಆ ಮಾತನ್ನೂ ಲಕ್ಷಮಾಡದೆ ದುಷ್ಟನಾದ ರುಕ್ಕಿಯು, ಬಲರಾಮನನ್ನು ಹೀಗಳೆಯುತ್ತಾ ಮುಂದೆ :ತನಗೆ ಅದರಿಂದುಂಟಾಗಬಹುದಾದ : ವಿನಾಶಕಾಲವನ್ನೂ ಯೋ ಚಿಯದೆ, ತನ್ನ ಮಿತ್ರರಾದ ದುಷ್ಪರಾಜರ ಪ್ರೋತ್ಸಾಹದಿಂದ ಹೀಗೆಂದು ಹೇಳುವನು. ಎಲಾ! ನೀವು ಕಾಡಿನಲ್ಲಿ ವಾಸಮಾಡತಕ್ಕ ಗೊಲ್ಲರು! ನಿಮಗೆ ಇಂತಹ ಚಮತ್ಕಾರದ ಆಟಗಳಲ್ಲಿ ಪರಿಚಯವೆಲ್ಲಿಯದು ? ನೀವು ಜಯಿ ಸಿದೆವೆಂದರೆ ಯಾರುತಾನೇ ನಂಬುವರು ! ಹೀಗೆ ಪಗಡೆಗಳಿಂದಾಗಲಿ, ಬಾಣಗಳಿಂದಾಗಲಿ ಆಟವಾಡತಕ್ಕೆ ಶಕ್ತಿಯು ನಮ್ಮಂತಹ ಕ್ಷತ್ರಿಯೋ ಮರಿಗೇಹೊರತು ನಿಮ್ಮಂತಹ ಗೊಲ್ಲರಿಗಲ್ಲ” ಎಂದು ಅಟ್ಟಹಾಸದಿಂದ ನಕ್ಕು ಹಾಸ್ಯಮಾಡಿದನು. ಆಗ ಬಲರಾಮನ ಕೋಪವನ್ನು ಕೇಳಬೇಕೇ ? ಮೊದಲೇ ಕಳಿಂಗನು ತನ್ನನ್ನು ಹಾಸ್ಯಮಾಡಿ ನಕ್ಕುದೊಂದು ! ಥರ್ಮದಿಂದ ತಾನು ಜಯಿಸಿದ ಆಟದಲ್ಲಿ ರುಕ್ಕಿಯು ಆಪಲಾಪಮಾಡಿದುದೊಂದು ! ಇವೆಲ್ಲವೂ ಅವನಿಗೆ ಕೋಪದಿಂದ ಮೈಮರೆಯುವಂತೆ ಮಾಡಿತು. ಅಕ್ಷಣವೇ ತನ್ನ ಸಮೀಪದಲ್ಲಿದ್ದ ಪರಿಭುವನ್ನು ಕೈಗೆತ್ತಿಕೊಂಡು, ಅದರಿಂದ ಆ ರಾಜ ಸಭೆಯಲ್ಲಿಯೇ ರುಕ್ಕಿಯನ್ನು ಕೊಂದುಬಿಟ್ಟನು, ಮತ್ತು ತನ್ನನ್ನು ನೋಡಿ ಹಲ್ಲು ಕಿರಿದು ಹಾಸ್ಯಮಾಡಿದ ಕಳಿಂಗನನ್ನು ಬಲಾತ್ಕಾರದಿಂದ ಹಿಡಿದು, ಕಾಲಿಂದ ಮೆಟ್ಟಿ, ಅವನ ಹಲ್ಲುಗಳೆಲ್ಲವನ್ನೂ ಉದಿರಿಸಿಬಿಟ್ಟನು ; ತನ್ನ ಮೇಲೆ ಯುದ್ಧಕ್ಕಾಗಿ ಬಂದ ಇತರರಾಜರನ್ನೂ ಅದೇ ಪರಿಫಾ ಯುಧದಿಂದ ಬಡಿದು ಕೆಡಹುತ್ತ ಬಂದನು. ಆ ರಾಜರೆಲ್ಲರೂ ಕೈಕಾಲು ಮುರಿದು, ಭಯದಿಂದ ನಾನಾದಿಕ್ಕುಗಳಿಗೆ ಪಲಾಯನಮಾಡಿದರು. ಆಗ ರುಕ್ಷ್ಮಿಣಿ ಯು, ತನ್ನಣ್ಣನ ಮರಣವನ್ನು ಕಣ್ಣಾರೆ ನೋಡುತ್ತಿದ್ದರೂ, ರಾಮ ಕೃಷ್ಣರ ಮನಸ್ಸಿಗೆ ಅಸಮಾಧಾನವುಂಟಾಗುವುದೋ ಎಂಬ ಭಯದಿಂದ ಬಾಯೆತ್ತದೆ ಸುಮ್ಮನಿದ್ದುಬಿಟ್ಟಳು, ಆಮೇಲೆ ಬಲರಾಮನೇ ಮೊದಲಾದ ದಾಶಾರ್ಹರೆಲ್ಲರೂ, ಹೊಸಮದುಮಗಳೊಡನೆ ಅನಿರುದ್ಧನನ್ನು ರಥದಲ್ಲಿ ಕುಳ್ಳಿರಿಸಿಕೊಂಡು, ಶ್ರೀ ಕೃಷ್ಣ ಸಹಾಯದಿಂದ ಸರ್ವಾಭೀಷ್ಮಸಿದ್ಧಿಯನ್ನು