ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೮೮ ಶ್ರೀಮದ್ಭಾಗವತವು (ಅಧ್ಯಾ, ೬೨. ಹೊಂದಿ, ಬಹಳಸಂಭ್ರಮದೊಡನೆ ದ್ವಾರಕೆಗೆ ಬಂದು ಸೇರಿದರು. ಇದು ಅರುವತ್ತೊಂದನೆಯ ಅಧ್ಯಾಯವು. w+ ಉಷಾಪರಿಣಯವೃತ್ತಾಂತವು, ww - ಆಗ ಪರೀಕ್ಷಿದ್ರಾಜನು ಶುಕನನ್ನು ಕುರಿತು ಓ ಮುನೀಂದ್ರಾ ! ಅನಿ ರುದ್ಧನು ಬಾಣಾಸುರನ ಮಗಳಾದ ಉಷೆಯೆಂಬವಳನ್ನು ವರಿಸಿದುದಾಗಿ ಯೂ, ಆ ವಿವಾಹಸಂದರ್ಭದಲ್ಲಿ ಕೃಷ್ಣನಿಗೂ, ರುದ್ರನಿಗೂ ಘೋರ | ಯುದ್ಧವು ನಡೆದುದಾಗಿಯೂ ಕೇಳಿಬಲ್ಲೆನು, ಆ ವೃತ್ತಾಂತವನ್ನು ವಿವರಿಸಿ ತಿಳಿಸಬೇಕು” ಎಂದು ಕೇಳಲು, ಶುಕಮುನಿಯು ಆಕಥೆಯನ್ನು ಸಕ್ರಮಿಸಿದನು ((ರಾಜಾ ಕೇಳು ! ವಾಮನರೂಪಿಯಾದ ಭಗವಂತನಿಗೆ ಭೂದಾನವನ್ನು ಮಾ ಡಿ ಪ್ರಸಿದ್ಧನಾದ ಬಲಿಚಕ್ರವರ್ತಿಯ ಮಹಾಮಹಿಮೆಯನ್ನು ನೀನು ಕೇಳಿಬ ಲೈಯಷ್ಟೆ ! ಅವನಿಗೆ ನೂರುಮಂದಿ ಮಕ್ಕಳಿದ್ದರು. ಅವರಲ್ಲಿ ಬಾಣಾಸುರ ನೇ ಜೈಷ್ಣನು, ಈ ಬಾಣನು ರುದ್ರನಿಗೆ ಪರಮಭಕ್ಕನು, ಇವನು ರಾಕ್ಷಸ ಕುಲದವನಾದರೂ, ಪೂಜ್ಯತೆಯಲ್ಲಿಯೂ, ಔದಾಲ್ಯದಲ್ಲಿಯೂ, ಬುದ್ಧಿಬಲ ದಲ್ಲಿಯೂ, ಸತ್ಯಸಂಧತೆಯಲ್ಲಿಯೂ, ವ್ರತನಿಷ್ಠೆ ಯಲ್ಲಿಯೂ ಪ್ರಸಿದ್ಧಿಗೊಲ ಡವನು, ಇವನು ಶೋಣಿತವೆಂಬ ಪಟ್ಟಣದಲ್ಲಿದ್ದು ರಾಜ್ಯವನ್ನಾಳುತಿದ್ದನು. ರುದ್ರಾನುಗ್ರಹದಿಂದ ದೇವತೆಗಳೆಲ್ಲರೂ ಅವನಿಗೆ ಕಿಂಕರರಾಗಿ ಸೇವೆಮಾ ಡುತಿದ್ದರು. ಇವನಿಗೆ ಸಾವಿರತೋಳುಗಳುಂಟು, ಒಮ್ಮೆ ರುದ್ರನ ತಾಂಡವ ಕಾಲದಲ್ಲಿ, ಈ ಬಾಣಾಸುರನು ತನ್ನ ಸಹಸ್ರಬಾಹುಗಳಿಂದಲೂ ವಾದ್ಯಗ. ಳನ್ನು ನುಡಿಸುತ್ತ ಅವನನ್ನು ಸಂತೋಷಪಡಿಸಿದನು. ಸರೈಜೀವಾಧಿಪತಿ ಯಾಗಿಯೂ ಭಕ್ತವತ್ಸಲನಾಗಿಯೂ ಇರುವ ರುದ್ರನು, ಆ ಬಾಣಾಸುರನ ಭಕ್ತಿಗೆ ಮೆಚ್ಚಿ, ಬೇಕಾದ ವರಗಳನ್ನು ಕೇಳಿಕೊಳ್ಳುವಂತೆ ಪ್ರೇರಿಸಲು, ಬಾಣಾಸುರನು, ಆ ರುದ್ರನನ್ನೇ ತನ್ನ ಪಟ್ಟಣಕ್ಕೆ ಕಾವಲಾಗಿದ್ದು ರಕ್ಷೆ ಸುತ್ತಿರಬೇಕೆಂದು ಕೇಳಿಕೊಂಡನು. ರುದ್ರನು ಅದರಂತೆಯೇ ಒಪ್ಪಿ ಕೊಂಡು, ಅವನ ಪುರವನ್ನು ರಕ್ಷಿಸುತ್ತಿರಲು, ಬಾಣಾಸುರನು ಆ ರುದ್ರನ ಬಲದಿಂದ ಯಾರಿಗೂ ದುರ್ಜಯನಾಗಿದ್ದನು. ಇದರಿಂದ ಆ ಅಸುರನಿಗೆ