ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೬೨ } ದಶಮಸ್ಕಂಧವು. ೨೧೮೯. ತನಗೆ ಸಮಾನರಾದ ವೀರರೇ ಇಲ್ಲವೆಂಬ ಹೆಮ್ಮೆಯು ಹೆಚ್ಚಿಹೋಯಿತು. ಆ ಗತ್ವದಿಂದ ಈತನು, ಒಮ್ಮೆ ಸಮೀಪದಲ್ಲಿದ್ದ ರುದ್ರನ ಪಾದಗಳಿಗೆ ತನ್ನ ತಲೆಯನ್ನು ಸೋಕಿಸಿ ನಮಸ್ಕರಿಸುತ್ತ ಹೀಗೆಂದು ಪ್ರಾರ್ಥಿಸಿದನು. «ಓ ಮಹಾದೇವಾ ! ಲೋಕಗುರುವಾಗಿ ಸರೈಶ್ವರನೆನಿಸಿಕೊಂಡ ನಿನಗೆ ವಂದನವು, ಕಲ್ಪವೃಕ್ಷದಂತೆ ಆಶ್ರಿತರ ಕೋರಿಕೆಯನ್ನಿ ಡೇವಿಸತಕ್ಕ ನಿನ್ನಲ್ಲಿ ನನ್ನದೊಂದು ಪ್ರಾರನೆಯುಂಟು! ಏನೆಂದರೆ!ಈಗ ನೀನು ನನಗೆ ಅನುಗ್ರಹಿ ಸಿಕೊಟ್ಟಿರುವ ಈ ನನ್ನ ಸಹಸ್ರಭುಜಗಳೂ, ನನ್ನ ಮೈಗೆ ಕೇವಲಭಾರಭ ತಗಳಾಗಿರುವುದೇ ಹೊರತು ಇವುಗಳಿಂದೇನೂ ಕಾರವಿಲ್ಲ ! ಮೂರುಲೋ ಕಗಳಲ್ಲಿಯೂ ನನ್ನನ್ನು ಪ್ರತಿಭಟಿಸಿ ನಿಲ್ಲುವಷ್ಟು ಧೈಯ್ಯಶಾಲಿಗಳಾರೂ ಇಲ್ಲ! ಅಷ್ಟೇಕೆ : ನೀನೊಬ್ಬನುಹೊರತು, ನಿನಗೆ ಸಮಾನಬಲವುಳ್ಳ ಬೇರೊಬ್ಬ ರಾದರೂ ನನ್ನನ್ನು ಇರಿಸಲಾರರು. ಈ ನನ್ನ ತೋಳುಗಳ ನವೆಯನ್ನಾರಿಸ ಬೇಕೆಂದರೆ, ನನಗೆ ಅವಕಾಶವೇ ಇಲ್ಲದೆ ಹೋಗಿದೆ ಇದಕ್ಕಾಗಿ ನಾನೆಮ್ಮೆ ಈ ನನ್ನ ತೋಳುಗಳಿಂದ ಅನೇಕ ಪತ್ರಗಳನ್ನು ಗುದ್ದಿ ಪುಡಿ ಮಾಡಿದೆನು. ಏಗ್ಗ ಜಗಳೊಡನೆ ಹೋರಾಡುವುದ ಕ್ಕಾಗಿ ಹೊರಟಾಗ, ಅವು ಗಲೂ ನನ್ನ ಮುಂದೆ ನಿಲ್ಲಲಾರದೆ ಪಲಾಯನ ಮಾಡಿದುವು. ಈ ನನ್ನ ಮೈನವೆಯನ್ನಾರಿಸುವುದಕ್ಕೆ ಉಪಾಯವೇ ಇಲ್ಲದಂತಿದೆ ! ಇದಕ್ಕೆನು ಮಾಡಲಿ"ಎಂದನು. ಈ ಗತ್ವದ ಮಾತನ್ನು ಕೇಳಿ ರುದ್ರನಿಗೂ ಕೋಪವುಂ ಟಾಯಿತು. ಆಗ ರುದ್ರನು ಬಾಣಾಸುರನನ್ನು ಕುರಿತು ” ಓ ಮೂಥಾ ! ನನಗೆ ಸಮಾನರಾದವರೂ ನಿನ್ನ ಮುಂದೆ ನಿಲ್ಲಲಾರದೆಂದು ಹೇಳಿದೆಯಲ್ಲವೆ ? ಹಾಗೆಯೇ ಆಗಲಿ ! ನಿನ್ನ ಗಥಕೇತುವು ಅಕಸ್ಮಾತ್ತಾಗಿ ಯಾವಾಗ ಮುರಿ ದುಬಿಳುವುದೋ, ಆಗ ನನಗೆ ಸಮಾನನಾದವನೊಬ್ಬನು ನಿನ್ನೊಡನೆ ಯುದ್ಧಕ್ಕೆ ನಿಂತು,ನಿನ್ನ ಕೊಬ್ಬನ್ನು ಮುರಿಯುವನು. ಹೋಗು ” ಎಂದನು. ಬುದ್ಧಿಹೀನನಾದ ಬಾಣಾಸುರನು, ಅಂತಹ ಯುದ್ಧಪ್ರಸಕ್ತಿಯೇ ತನಗೆ ಪರಮಲಾಭವೆಂದು ತಿಳಿದು, ಸಂತೋಷದಿಂದ ತನ್ನ ಅರಮನೆಗೆ ಹಿಂತಿರುಗಿ, ರುದ್ರನು ತನಗೆ ಸೂಚಿಸಿದ್ದ ಧ್ವಜಭಂಗವು ಯಾವಾಗ ನಡೆಯುವುದೋ ಎಂದು ಆ ಕಾಲವನ್ನೇ ಆತುರದಿಂದ ಇದಿರುನೋಡುತಿದ್ದನು. ಈಸಂಗತಿಯು