ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೯೦ ಶ್ರೀಮದ್ಭಾಗವತವು [ಅಧ್ಯಾ. ೬೨. ಹಾಗಿರಲಿ ! ಈ ಬಾಣಾಸುರನಿಗೆ ತ್ರಿಲೋಕಸುಂದರಿಯಾದ ಉಷೆಯೆಂಬ ಮಗಳೊಬ್ಬಳಿದ್ದಳು. ಒಮ್ಮೆ ಈ ಉಷೆಯು ಮಲಗಿದ್ದಾಗ, ಅವಳಿಗೆ ಪ್ರತ್ಯು ಮ್ಯ ಪುತ್ರನಾದ ಅನಿರುದ್ಯನ ರೂಪವು ಕನಸಿನಲ್ಲಿ ಕಾಣಿಸಿತು. ಅವಳು ಹಿಂ ದೆ ಯಾವಾಗಲೂ ಅನಿರುದ್ಧನನ್ನು ಪ್ರತ್ಯಕ್ಷದಲ್ಲಿ ಕಂಡವಳೂ ಅಲ್ಲ ! ಅವನ ವಿಷಯವನ್ನು ಕಿವಿಯಿಂದ ಕೇಳಿದವಳೂ ಅಲ್ಲ!ಹಾಗಿದ್ದರೂ ಅವಳಿಗೆ ಆ ಕನ ಸಿನಲ್ಲಿ ಕಂಡ ಮೂರ್ತಿಯಲ್ಲಿ ಮೋಹವು ಹುಟ್ಟಿತು. ನಿದ್ರೆ ತಿಳಿದು ಕಣ್ಣು ತೆರೆದಾಗ, ಆ ಮೂರ್ತಿಯು ಅದೃಶ್ಯವಾದುದನ್ನು ನೋಡಿ ಅವಳು ಪ್ರಿಯಾ! ಎಲ್ಲಿರುವೆ ! ಎಲ್ಲಿರುವೆ ” ಎಂದು ಕನವರಿಸುತ್ತ, ಸುತ್ತಲೂ ತಿರುಗಿತಿರುಗಿ ನೋಡಿದಳು. ಆಗ ತನ್ನ ಸಖಿಯರೆಲ್ಲರೂ ಸುತ್ತಲೂ ಕುಳಿತಿದ್ದುದನ್ನು ಕಂಡು,ಹಾಗೆಯೇ ನಾಚಿಕೆಯಿಂದ ತಲೆ ಯನ್ನು ತಗ್ಗಿಸಿ, ಮನ್ಮಥತಾಪ ದಿಂದ ತನ್ನಲ್ಲಿ ತಾನೇ ಕೊರಗುತಿದಳು, ಆಕೆಯ ಸಖಿ ಯರಲ್ಲಿ ಚಿತ್ರಲೇಖೆ ಯೆಂಬವಳೊಬ್ಬಳಿದ್ದಳು. ಇವಳು ಬಾಣಾಸುರನ ಮಂತ್ರಿಯಾದ ಕುಂಭಾಂ ಡನೆಂಬವನ ಮಗಳು! ಈಕೆಯು ಉಷೆಗೆ ವಿಶೇಷಪ್ರೇಮಪಾತ್ರಳಾಗಿದ್ದಳು. ಈ ಚಿತ್ರಲೇಖೆಯು ಕುತೂಹಲದಿಂದ ಉಷೆ ಯನ್ನು ಕುರಿತು « ಓ ಸಖೀ ! ಈ ಗಾಗಲೇ ನೀನು ಗಂಡನಿಗಾಗಿ ಹಂಬಲಿಸುವಂತಿದೆ ನಿನಗೆ ಯಾವನಲ್ಲಿ ಅನು ರಾಗವು ಹುಟ್ಟಿರುವುದು ಹೇಳು ! ನಿನ್ನ ಮನೋರಥಪಾತ್ರನಾವನು ? ನಿನ್ನನ್ನು ಕೈಹಿಡಿಯತಕ್ಕ ಅನುರೂಪನಾದ ವರನಾವನೆಂದು ಇದುವರೆಗೆ ನನಗೆ ತಿಳಿದಿಲ್ಲ. ನಿಜ ಸ್ಥಿತಿಯನ್ನು ತಿಳಿಸು” ಎಂದಳು. ಅದ ಕ್ಯಾ ಉಷೆಯು " (ಸಖೀ ! ನಾನೇನೆಂದು ಹೇಳಲಿ : ನಿನ್ನೆ ರಾತ್ರಿ ಸ್ಪಷ್ಟ ದಲ್ಲಿ ಸುಂದರಾಂಗ ನಾದ ಪುರುಷನೊಬ್ಬನು ನನಗೆ ಗೋಚರಿಸಿದನು. ಅವನಿಗೆ ಶ್ಯಾಮಲವರ್ಣ ವಾದ ಮೈ : ಕಮಲದಂತೆ ಕಣ್ಣುಗಳು : ಹೊಂಬಣ್ಣದ ಪಟ್ಟೆ ಮಡಿ ! ಉಬ್ಬಿದ ಭುಜಗಳು: ನೋಡಿ ಮಾತ್ರದಲ್ಲಿ ಯೇ ಸ್ತ್ರೀಯರ ಮನಸ್ಸನ್ನು ಮೋಹಗೊಳಿಸತಕ್ಕ ರೂಪಸಂಪತ್ತಿ ! ಇಂತಹ ಅದ್ಭುತರೂಪದಿಂದ ಕಾಣಿ ಸಿಕೊಂಡ ಆ ಪುರುಷನನ್ನು ನೋಡಿ, ನನ್ನ ಮನಸ್ಸು ಅವನಲ್ಲಿ ಮೋಹಗೊಂ ಡಿರುವುದು, ಅವನಿಗಾಗಿಯೇ ನಾನು ಹಂಬಲಿಸುತ್ತಿರುವೆನು. ಸ್ಪಷ್ಟ ದಲ್ಲಿ ಆತನು ನನ್ನ ಕಣ್ಣಿಗೆ ಗೋಚರಿಸಿದುದುಮಾತ್ರವಲ್ಲ!ಆತನು ನನ್ನ ಸಮೀಪಕ್ಕೆ