ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೯೨ ಶ್ರೀಮದ್ಭಾಗವತವು [ಅಧ್ಯಾ, ೬೨. ಯಿಂದ ಯಾರಿಗೂ ತಿಳಿಯದೆ ಅಂತಃಪುರವನ್ನು ಪ್ರವೇಶಿಸಿದಳು. ಅಲ್ಲಿ ಪ್ರದ್ಯುಮ್ನ ಕುಮಾರನಾದ ಅನಿರುದ್ಧನು ಮಂಚದಮೇಲೆ ನಿದ್ರಿಸುತಿ ದೈನು, ಒಡನೆಯೇ ಆಕೆಯು ತನ್ನ ಯೋಗಮಾಯೆಯಿಂದ ಅನಿರುದ್ಧನನ್ನು ಮಲಗಿದ್ದ ಮಂಚದೊಡನೆ ಶೋಣಿತಪುರಕ್ಕೆ ತಂದು ಉಷೆಯಶಯನಗೃಹದಲ್ಲಿ ಸೇರಿಸಿ, ತಾನು ನಡೆಸಿದ ವೃತ್ತಾಂತವೆಲ್ಲವನ್ನೂ ಅವಳಿಗೆ ತಿಳಿಸಿದಳು. ಉಷೆ ಯು ತನ್ನ ಮನಃಪ್ರಿಯನಾದ ಅನಿರುದ್ಧನನ್ನು ಕಂಡೊಡನೆ ಸಂತೋಷದಿಂ ದುಕ್ಕಾತ್ರ, ಬೇರೆ ಯಾರಿಗೂ ಪ್ರವೇಶಿಸಲಸಾಧ್ಯವಾದ ಆ ತನ್ನ ಮನೆಯಲ್ಲಿ ಅನಿರುದ್ಧನೊಡನೆ ಯಥೇಚ್ಛವಾಗಿ ರಮಿಸುತಿದ್ದಳು, ತನ್ನ ಪ್ರಿಯನ ಮ ನಸ್ಸಿಗೊಪ್ಪುವಂತೆ ಅಮೂಲ್ಯವಾದ ವಸ್ತುಗಳನ್ನೂ, ಗಂಧ ಪುಷ್ಪಧೂಪ ದೀಪಾದಿಗಳನ್ನೂ ,ಭಕ್ಷ ಭೋಜ್ಯ, ಪಾನೀಯಾದಿಗಳನ್ನೂ ತಂದೊದಗಿಸಿ,ಿ ಯವಾಕ್ಯಗಳಿಂದಲೂ, ಶುಶೂಷೆಯಿಂದಲೂ ಅವನನ್ನು ಬಹಳವಾಗಿ ಸಂ ತೋಷಪಡಿಸುತ್ತ ಬಂದಳು, ಅನಿರುದ್ಧನಿಗೆ ಅವಳಲ್ಲಿ ಮಿತಿಮೀರದ ಸ್ನೇಹವು ಹುಟ್ಟಿತು, ಆ ಭೋಗಸಮೃದ್ಧಿಯಲ್ಲಿ ಅವನಿಗೆ ಹಿಂದೆ ಕಳೆದುಹೋದ ದಿನಗ ಭೂ ತಿಳಿಯದಂತಾಯಿತು, ಬಹುದಿನಗಳವರೆಗೆ ಆ ಅಂತಃಪುರದಲ್ಲಿಯೇ ಗೂ ಢವಾಗಿದ್ದುಬಿಟ್ಟನು. ಹೀಗೆ ಉಷೆಯು, ಅನಿರುದ್ಧನೊಡನೆ ಅಂತಃಪುರದಲ್ಲಿ ರಮಿಸುತ್ತಿರುವ ವಿಷಯವು ಕೆಕೆಲವು ಸೂಚನೆಗಳಿಂದ ಕ್ರಮಕ್ರಮವಾಗಿ ಹೊರಬಿದ್ದಿತು. ಆಗ ಉಷೆ ಯು ಇದುವರೆಗೆ ಬಹಳ ನಿಯಮದಿಂದ ನಡೆಸು ತಿದ್ದ ಕನ್ಯಾವ್ರತವು ನಿಂತುಹೋಗಿರುವುದನ್ನೂ, ಅವಳು ಅನ್ನ ಪಾನಗಳಿಗೂ ಕೂಡ ಸಕಾಲಕ್ಕೆ ಬಾರದೆ ಇರುವುದನ್ನೂ ನೋಡಿ, ರಾಜಭಟರು ಬಾಣಾ ಸುರನಬಳಿಗೆ ಹೋಗಿ ಪ್ರಭೂ!ನಿನ್ನ ಮಗಳಾದ ಉಷೆಯು ನಮ್ಮ ಕುಲಕ್ಕೇ ಅವಮಾನಕರವಾದ ಕೆಲವು ಕಾಕ್ಯಗಳನ್ನು ನಡೆಸುವಹಾಗಿದೆ! ನಾವು ಅವಳ ನ್ನು ಹೊರಗೆ ಬಿಡದೆ ಮನೆಯ ಬಾಗಿಲಲ್ಲಿ ಎಷ್ಟೇ ಎಚ್ಚರದಿಂದ ಕಾವಲಿರು ವಾಗಲೂ,ಅವಳು ಯಾವನೋ ಪುರುಷನೊಡನೆ ಆಟವಾಡುವಂತಿದೆ.ಮತ್ತೊ ಬ್ಬ ಪುರುಷನು ಅವಳನ್ನು ಕಣ್ಣಿಂದ ನೋಡುವುದಕ್ಕೂ ಸಾಧ್ಯವಿಲ್ಲದಂತೆ ನಾ ವು ಬಹಳ ಎಚ್ಚರಿಕೆಯಿಂದಿರುವೆವು. ಇಂತಹ ಸ್ಥಿತಿಯಲ್ಲಿ ಯೂ ಹೀಗಾಗಲು ಕಾರಣವೇನೆಂದು ನಮಗೂ ಗೋಚರವಿಲ್ಲದಿದೆ”ಎಂದರು.ಬಾಣನು ತನ್ನ ಮಗ