ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೪೪ ಶ್ರೀಮದ್ಭಾಗವತವು [ಅಧ್ಯಾ. ೬೩ ಯಾಗಿ ಕಣ್ಣೀರುಬಿಟ್ಟು ರೋದಿಸತೊಡಗಿದಳು. ಇದು ಅರುವತ್ತೆರಡನೆಯ ಅಧ್ಯಾಯವು. ++ ಬಾಣಾಸುರಯುದ್ಧವು,++ ಓ ಪರೀಕ್ಷಿದ್ರಾಜಾ ! ಇಷ್ಟರಲ್ಲಿ ಇತ್ತಲಾಗಿ ದ್ವಾರಕೆಯಲ್ಲಿ ಆಷಾಢ ದಿಂದ ಆಶ್ವಯುಜದವರೆಗಿನ ಮಳೆಗಾಲದ ನಾಲ್ಕು ತಿಂಗಳೂ,ಅನಿರುದ್ಧನನ್ನು ಕಾಣದೆ ಅವನಬಂಧುಗಳೆಲ್ಲರೂ ಮಹಾವ್ಯಸನದಿಂದ ಕಳವಳಿಸುತಿದ್ದರು. ಇ ಮೂರಲ್ಲಿ ನಾರದನು ದ್ವಾರಕೆಗೆ ಬಂದು, ಶೋಣಿತಪುರಿಯಲ್ಲಿ ಅನಿರುದ್ಧನು ನಾಗರಾಶದಿಂದ ಬಂಧಿಸಲ್ಪಟ್ಟಿರುವುದನ್ನೂ, ಅದರ ಕಾರಣವನ್ನೂ ತಿಳಿ ಸಿದಮೇಲೆ, ವೃಷ್ಟಿಗಳೆಲ್ಲರೂ ಶೋಣಿತಪುರವನ್ನು ಮುತ್ತುವುದಕ್ಕಾಗಿ ಸೇನಾಸನ್ನಾ ಹಗಳೊಡನೆ ಹೊರಟರು. ಪ್ರದ್ಯುಮ್ನ , ಯುಯುಧಾನ ಗದ, ಸಾಂಬ, ಸಾರಣ, ನಂದ, ಉಪನಂದ, ಭದ್ರ, ಮೊದಲಾದ ಯಾದವವೀರರೆಲ್ಲರೂ, ರಾಮಕೃಷ್ಣರನ್ನು ಮುಂದಿಟ್ಟು ಕೊಂಡು, ಹನ್ನೆರಡು ಆgಹಿಣೀಸೈನ್ಯಗಳೊಡನೆ ಹೊರಟರು, ಬಾಣಾಸುರನ ಪಟ್ಟಣವನ್ನು ಸುತ್ತಲೂ ಮುತ್ತಿಗೆ ಹಾಕಿದರು, ಮತ್ತು ಅಲ್ಲಿ ಕ್ರಮವಾಗಿ ಪುರೋದ್ಯಾನ, ಪ್ರಾಕಾರ, ಗೋಪುರಾದಿಗಳನ್ನು ಬಡಿದು ಕೆಡಹುತ್ತಬಂದರು. ಇದನ್ನು ನೋಡಿ ಬಾಣಾಸುರನು, ಅತ್ಯಾಕ್ರೋಶಗೊಂಡವನಾಗಿ, ತಾನೂ ಅಷ್ಟೆ ಸೈನ್ಯಗಳನ್ನು ಸೇರಿಸಿಕೊಂಡು ಯುದ್ಧಕ್ಕಾಗಿ ಹೊರಟುಬಂದನು. ಪೂಜ್ಯ ನಾದ ರುದ್ರನೂಕೂಡ, ತಾನು ಬಾಣಾಸುರನಿಗೆ ಕೊಟ್ಟ ವರದಂತೆ, ಅವನ ಸಹಾಯಕ್ಕಾಗಿ, ತನ್ನ ಮಗನಾದ ಷಣ್ಮುಖನೊಡನೆಯೂ, ಪ್ರಮಥಗಣಗ ಳೊಡನೆಯೂ ಹೊರಟು, ಯಾದವಸೈನ್ಯವನ್ನಿಡಿರಿಸಿದನು. ರುದ್ರನು ಕೃಷ್ಣ ನಿಗಿದಿರಾಗಿ ನಿಂತನು. ಹಾಗೆಯೇ ಷಣ್ಮುಖನು ಪ್ರದ್ಯುಮ್ನ ನನ್ನೂ, ಕುಂ ಭಾಂಡ ಕೂಪಕರ್ಣರೆಂಬವರಿಬ್ಬರು ಬಲರಾಮನನ್ನೂ, ಬಾಣಾಸುರನ ಪುತ್ರನು ಸಾಂಬನನ್ನೂ, ಬಾಣನು ಸಾತ್ಯಕಿಯನ್ನೂ ಇದಿರಿಸಿ ನಿಂತರು. ಎರಡುಪಕ್ಷದವರಿಗೂ ಭಯಂಕರವಾದ ಯುದ್ಧವು ಉಪಕ್ರಮಿಸಿತು. ಬ್ರಹ್ಮಾದಿದೇವತೆಗಳೂ, ಮುನಿಗಳೂ, ಸಿದ್ಧ, ಚಾರಣ, ಗಂಧರಾಪ್ಪರ