ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ೨ ಅಧ್ಯಾ. ೬೩] ದಶಮಸ್ಕಂಥವು. ೨೧೯೫ ಸರೂ, ಯುದ್ಧದರ್ಶನಕುತೂಹಲದಿಂದ ವಿಮಾನಗಳನ್ನೇರಿ ಬಂದು, ಆಕಾಶ ದಲ್ಲಿ ತುಂಬಿ ನೆರೆದಿದ್ದರು. ಯುದ್ಧಾರಂಭದಲ್ಲಿಯೇ ಕೃಷ್ಣನು,ತನ್ನ ಶಾರ್ಜ್ ಧನುಸ್ಸಿನಿಂದ ಪರಂಪರೆಯಾಗಿ ಬಾಣಗಳನ್ನು ಪ್ರಯೋಗಿಸಿ, ರುದ್ರಾನು ಚರರಾದ ಭೂತ, ಪ್ರೇತ, ಪಿಶಾಚ, ಯಕ್ಷ, ರಾಕ್ಷಸ, ಗುಹ್ಯಕ, ವಿನಾಯಕ ಡಾಕಿನೀ, ಯಾತುಧಾನ, ಕೋಶ್ಯಾಂಡ, ಬ್ರಹ್ಮರಾಕ್ಷಸರನ್ನೂ, ಮಾತೃ ಗಣಗಳನ್ನೂ , ಕ್ಷಣಮಾತ್ರದಲ್ಲಿ ಧ್ವಂಸಮಾಡಿ ಓಡಿಸಿಬಿಟ್ಟನು. ರುದ್ರನು ಕೋಪದಿಂದ ಬೇರೆಬೇರೆ ವಿಧವಾದ ಶಸ್ತ್ರಾಸ್ತ್ರಗಳನ್ನು ಹೂಡಿ, ಕೃಷ್ಣನ ಮೇಲೆ ಪ್ರಯೋಗಿಸುತ್ತಿದ್ದನು. ಕೃಷ್ಣನು ಸ್ವಲ್ಪಮಾತ್ರವೂ ಧೈರಗುಂ ದದೆ, ಆ ಶಸ್ತ್ರಾಸ್ತ್ರಗಳೆಲ್ಲವನ್ನೂ ಪ್ರತ್ಯಸ್ತ್ರಗಳಿಂದ ನಿಗ್ರಹಿಸುತ್ತ ಬಂದನು. ಬ್ರಹ್ಮಾಸ್ತ್ರವನ್ನು ಬ್ರಹ್ಮಾಸ್ತ್ರದಿಂದಲೂ, ವಾಯವ್ಯಾಸವನ್ನು ಪರ ತಾಸ್ತ್ರದಿಂದಲೂ, ಆಗೈ ಯಾಸ್ತ್ರವನ್ನು ಪರ್ಜನ್ಯಾಸದಿಂದಲೂ, ಪಾಶು ಪತಾಸ್ಮವನ್ನು ನಾರಾಯಣಾಸೆಬಿಂದಲೂ ನಿಗ್ರಹಿಸಿ, ಕೊನೆಗೆ ಬೃಂಭ ಣಾಸ್ತ್ರದಿಂದ ರುದ್ರನನ್ನೂ ಮೂರ್ಛಿತನನ್ನಾಗಿ ಮಾಡಿಬಿಟ್ಟನು. ಆಮೇಲೆ ಕತ್ತಿಗಳಿಂದಲೂ, ಗದೆಗಳಿಂದಲೂ, ಬಾಣಗಳಿಂದಲೂ, ಬಾಣಾ ಸುರನ ಸೈನ್ಯವನ್ನೂ ಪ್ರಹರಿಸಿ ಓಡಿಸುತ್ತಿದ್ದನು, ಹೀಗೆಯೇ ಅತ್ತಲಾಗಿ ಷಣ್ಮುಖನೂ, ಪ್ರದ್ಯುಮ್ನ ಬಾಣಗಳಿಂದ ಭಿನ್ನ ಗಾತ್ರನಾಗಿ, ಅಂಗಾಂಗಗ ಇಲ್ಲಿಯೂ ರಕ್ತವು ಸುರಿಯುತ್ತಿರಲು, ರಣರಂಗದಲ್ಲಿ ನಿಲ್ಲಲಾರದೆ, ತನ್ನ ವಾಹನವಾದ ನವಿಲನ್ನೇರಿ ಪಲಾಯನಮಾಡಿಬಿಟ್ಟನು. ಕುಂಭಾಂಡ ಕೂಪಕರ್ಣರಿಬ್ಬರೂ ಬಲರಾಮನ ಮುಸಲಾಯುಧಪ್ರಹಾರದಿಂದ ಸತ್ತು ಬಿದ್ದರು. ಅವರ ಸೈನ್ಯವೆಲ್ಲವೂ ಅನಾಥವಾಗಿ ದಿಕ್ಕುಗೆಟ್ಟು ಪಲಾಯನ ಮಾಡಿದುವು, ಹೀಗೆ ತನ್ನ ಸೈನ್ಯಗಳೆಲ್ಲವೂ ಹತವಾಗುತ್ತಿರುವುದನ್ನು ನೋಡಿ ಬಾಣಾಸುರನು, ತಡೆಯಲಾರದ ಕೋಪದಿಂದ, ತನಗಿದಿರಾಗಿ ನಿಂತಿದ್ದ ಸಾತ್ಯಕಿಯನ್ನು ಬಿಟ್ಟು, ಕೃಷ್ಣನಕಡೆಗೆ ರಥವನ್ನು ನಡೆಸಿಕೊಂಡು ಬಂದನು. ಏಕಕಾಲದಲ್ಲಿ ಐನೂರುಬಿಲ್ಲುಗಳಿಗೆ ನಾಣೇರಿಸಿ, ಒಂದೊಂದು ಬಿಲ್ಲಿನಲ್ಲಿ ಎರಡೆರಡು ಬಾಣಗಳಂತೆ ಸಾವಿರಬಾಣಗಳನ್ನು ಹೂಡಿದನು, ಇಷ್ಟರಲ್ಲಿಯೇ ಕೃಷ್ಣನು, ಅವನ ಕೈಯಲ್ಲಿದ್ದ ಧನುರ್ಬಾಣಗಳೆಲ್ಲವನ್ನೂ ಒಂದೇ ಸಲಕ್ಕೆ