ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೬೩.] ದಶಮಸ್ಕಂಧವು, ೨೧೯೬ ಮರಣಗಳೆಂಬ ಷಡೂಲ್ಕಿಗಳನ್ನೂ ಜಯಿಸಿದವನಾಗಿಯೂ ಇರುವ ನಿನ್ನನ್ನು ನಮಸ್ಕರಿಸುವೆನು. ಓ ಪ್ರಭೂ ! ಕಾಲ, ದೈವ, ಕಮ್ಮ, ಜೀವ, ಸ್ವಭಾವ, ಪೃಥಿವ್ಯಾದಿದ್ರವ್ಯಗಳು, ಅವುಗಳಿಗೆ ಉತ್ಸಸ್ಥಾನವಾದ ಪ್ರಕೃತಿ, ಪಂಚ ಪ್ರಾಣಗಳು, ಬುದ್ಧಿ, ಆವಸ್ಥಾಭೇದಗಳು, ಇವುಗಳ ಸಂಫುಾತರೂಪವಾದ ಶರೀರ, ಈ ಪ್ರಪಂಚದಲ್ಲಿ ಕಾರಕಾರಣರೂಪವಾಗಿ ಮಾರ್ಪಡುವ ವಿಧಾನ ಗಳು, ಇವೆಲ್ಲವೂ ನಿನ್ನ ಸಂಕಲ್ಪರೂಪವಾದ ಮಾಯೆಗೆ ಅಧೀನವಾಗಿ ನಡೆಯತಕ್ಕವುಗಳು, ಈ ಸಮಸ್ಯವಸ್ತುಗಳ ಸ್ವರೂಪದಿಂದಲೂ ಭಿನ್ನ ನಾದ ನಿನಗೆ ನಮಸ್ಕಾರವು, ದೇವಾ ! ಈಗ ನೀನು ಒಬ್ಬ ಯಾದವಕುಮಾರನಂತೆ ತೋರಿದರೂ, ಇದು ನಿನ್ನ ಸೈಜ್ಞೆಯಿಂದ ನೀನಾಗಿ ಪರಿಗ್ರಹಿಸಿದ ರೂಪ ವೇಹೊರತು ಕಾಢೀನವಾದುದಲ್ಲ. ಸಾಧುಗಳಾದ ದೇವತೆಗಳನ್ನು ರಕ್ಷಿಸು ವುದಕ್ಕಾಗಿಯೂ, ಧರಮಾದೆಯನ್ನು ಕಾಪಾಡುವುದಕ್ಕಾಗಿಯೂ ಇದೇ ಏದವಾಗಿ ಹಿಂದೆಸೀನುಮದ್ಯವತಾರಗಳನ್ನೂ ಪರಿಗ್ರಹಿಸಿರುವೆ. ಈ ಆವ ತಾರಗಳೆಲ್ಲವೂ, ಲೋಕಕಂಟಕರಾದ ದುರಾರ್ಗರನ್ನು ನಿಗ್ರಹಿಸಿ, ಭೂಭಾ ರವನ್ನು ಪರಿಹರಿಸುವುದಕ್ಕಾಗಿಯೇ ಹೊರತು ಬೇರೆಯಲ್ಲ ಕೃಷ್ಣಾ ! ಈಗ ನಾನು ನಿನ್ನ ತೇಜೋರೂಪವಾದ ದುಸ್ಸಹವಾದ ಜ್ವರದಿಂದ ದಗ್ಗನಾ ನಾಗುತ್ತಿರುವೆನು, ಈ ನಿನ್ನ ತೇಜಸ್ಸು ಸ್ವಭಾವದಿಂದ ಶಾಂತವಾಗಿದ್ದರೂ, ಇದರಿಸಿದವರಲ್ಲಿ ಮಹೋಗ್ರತೆಯನ್ನು ತೋರಿಸುವುದು, ಆ ನಿನ್ನ ತೇಜಸ್ಸಿ ನಿಂದ ದಹಿಸಲ್ಪಡುತ್ತಿರುವ ನನ್ನನ್ನು ಕಾಪಾಡಬೇಕು, ಪ್ರಾಣಿಗಳು ತಮಗೆ ಬೇರೊಬ್ಬರು ರಕ್ಷಕರಿರುವರೆಂಬ ಭ್ರಾಂತಿಯಿಂದ ನಿನ್ನಲ್ಲಿ ವಿಮುಖ ರಾಗಿರುವವರೆಗೂ,ಹೀಗೆ ನಾನಾವಿಧವಾದ ತಾಪಕ್ಕೆ ಗುರಿಯಾಗುವುದು ಸಹ ಜವು. ಈಗ ನಾನಾದರೋ ಬೇರೆ ರಕ್ಷಿಸಬಲ್ಲವರೊಬ್ಬರನ್ನೂ ಕಾಣದೆ, ನಿನ್ನ ಪಾದಾರವಿಂದದಲ್ಲಿ ಮರೆಹೊಕ್ಕಿರುವೆನು, ನನ್ನನ್ನು ರಕ್ಷಿಸಬೇಕು” ಎಂದಿತು. ಅದನ್ನು ಕೇಳಿ ಭಗವಂತನು ಕೃಪಾವಶನಾಗಿ, ಆ ಜ್ವರವನ್ನು ಕುರಿತು « ಓ ತ್ರಿಶಿರಾ ! ನಿನ್ನ ಭಕ್ತಿಗೆ ನಾನು ಪ್ರಸನ್ನನಾದೆನು, ನನ್ನಿಂದ ಪ್ರೇರಿತವಾದ ನಾರಾಯಣರವು ನಿನ್ನನ್ನು ಬಾಧಿಸದಿರಲಿ ! ನಿನ್ನ ಭಯವು ನೀಗಲಿ! ಇದಲ್ಲದೆ ಈಗ ನಮ್ಮಿಬ್ಬರಿಗೆ ನಡೆದ ಈ ಸಂವಾದವನ್ನು ಯಾವನು