ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೦ ಶ್ರೀಮದ್ಭಾಗವತವು [ಅಧ್ಯಾ ೬೩. ಸ್ಮರಿಸುವನೋ, ಅವನಿಗೆ ನಿನ್ನಿಂದ ಮರಣವಿಲ್ಲದಿರಲಿ ” ಎಂದನು. ಆಮೇಲೆ ಮಾಹೇಶ್ವರಜ್ವರವು ಕೃಷ್ಣನಿಗೆ ನಮಸ್ಕರಿಸಿ ಹೊರಟುಹೋ ಯಿತು. ಇಷ್ಟರಲ್ಲಿ ಅಡ್ಡಲಾಗಿ ಬಾಣಾಸುರನು ಚೇತರಿಸಿಕೊಂಡು, ತಿರುಗಿ ಕೃಷ್ಣನೊಡನೆ ಯುದ್ಧಕ್ಕಾಗಿ ರಥವನ್ನೇರಿ ಹೊರಟನು. ತನ್ನ ಸಹಸ್ರ ಬಾಹುಗಳಲ್ಲಿಯೂ ನಾನಾಬಗೆಯ ಶಸ್ತ್ರಾಸಗಳನ್ನು ಹಿಡಿದು, ಕೃಷ್ಣನಿಗಿದಿರಾಗಿ ನಿಂತು ದೊಡ್ಡ ಪರಿಶುವೊಂದನ್ನು ಕೃಷ್ಣನಮೇಲೆ ಪ್ರಯೋಗಿಸಿದನು. ಒಡನೆಯೇ ಕೃಷ್ಣನು ಆ ಪರಿಭುವನ್ನೂ , ಅದನ್ನು ಪ್ರಯೋಗಿಸಿದ ಬಾಣಾಸುರನ ಭುಜವನ್ನೂ, ತನ್ನ ಬಾಣಗಳಿಂದ ತುಂಡು ಮಾಡಿಕೆಡಹಿದನು. ತಿರುಗಿತಿರುಗಿ ಬಾಣಾಸುರನು, ಬೇರೆಬೇರೆ ಭುಜಗ ಳಿಂದ ಬೇರೆ ಬೇರೆ ಬಾಣಗಳನ್ನು ಪ್ರಯೋಗಿಸುತಿದ್ದ ಹಾಗೆಲ್ಲಾ, ಕೃಷ್ಣನು ತೀಕ್ಷಧಾರೆಯುಳ್ಳ ತನ್ನ ಚಕ್ರಾಯುಧದಿಂದ, ಮರದ ಕೊಂಬೆಗಳನ್ನು ಕಡಿ ಯುವಂತೆ ಆ ಬಾಣಾಸುರನ ತೋಳುಗಳನ್ನು ಕಡಿಯುತ್ತ ಬಂದನು. ಹೀಗೆ ಬಾಣಾಸುರನ ತೋಳುಗಳೆಲ್ಲವೂ ಚಕ್ರಾಯುಧದಿಂದ ಕತ್ತರಿಸಲ್ಪಡುತ್ತಿರು ವುದನ್ನು ನೋಡಿ, ಭಕ್ತವತ್ಸಲನಾದ ರುದ್ರನು, ತನ್ನ ಆಶ್ರಿತನಾದ ಬಾ ಣಾಸುರನನ್ನು ರಕ್ಷಿಸಬೇಕೆಂಬ ಉದ್ದೇಶದಿಂದ, ಕೃಷ್ಣನಬಳಿಗೆ ಬಂದು ಹೀಗೆಂದು ಹೇಳುವನು. “ ಕೃಷ್ಣಾ ! ಶಬ್ದಬ್ರಹ್ಮವೆನಿಸಿಕೊಂಡ ವೇದಗ ಆಂದ ಪ್ರತಿಪಾದ್ಯನಾಗಿ, ಸ್ವಯಂಪ್ರಕಾಶವುಳ್ಳ ಪರಬ್ರಹ್ಮವೇ ನೀನು ! ಆಕಾಶದಂತೆ ನಿರ್ಲಿಪವಾದ ನಿನ್ನ ಸ್ವರೂಪವನ್ನು ಯೋಗಪರಿಶುದ್ಧವಾದ ಮನಸ್ಸುಳ್ಳವರುಮಾತ್ರವೇ' ಕಾಣಬಲ್ಲರು. ನಿನಗೆ ಆಕಾಶವೇ ನಾಭಿ! ಅಗ್ನಿ ಯೇ ಮುಖವು! ಜಲವೇ ರೇತಸ್ಸು!j ದ್ಯಲೋಕವೇ ನಿನ್ನ ಶಿರಸ್ಸು! ದಿಕ್ಕುಗಳೇ ನಿನ್ನ ಕಿವಿಗಳು ಭೂಮಿಯೇ ನಿನ್ನ ಪಾದವು! ಚಂದ್ರನೇ ನಿನ್ನ ಮನಸ್ಸು! ಸೂರನೇ ನಿನ್ನ ದೃಷ್ಟಿ! ನಾನು ನಿನ್ನ ಅಂತಃಕರಣಭೇ ಥವಾದ ಅಹಂಕಾರವೆನಿಸುವೆನು, ಸಮುದ್ರವೇ ನಿನ್ನ ಜಠರವು! ಇಂದ್ರಾದಿ ಗಳು ನಿನ್ನ ಭುಜಗಳು! ಸಸ್ಯವರ್ಗಗಳೆಲ್ಲವೂ ನಿನ್ನ ಮೈ ಕೂದಲುಗಳು! ಮೇಸುಗಳೇ ನಿನ್ನ ಕೇಶಗಳು! ಬ್ರಹ್ಮನೇ ನಿನ್ನ ಬುದ್ಧಿ! ಪ್ರಜಾಧಿಪತಿಯೇ ನಿನ್ನ ಪುರುಷಲಿಂಗವು, ಧಮ್ಮದೇವನೇ ನಿನ್ನ ಹೃದಯವು!ಹೀಗೆ ನಿನ್ನ ಪುರುಷಾ