ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೦೦ ಶ್ರೀಮದ್ಭಾಗವತವು [ಅಧ್ಯಾ ೬೩. ಪಾಕರನಾದ ನೀನು, ಆ ಮಾಯೆಯನ್ನು ದಾಟುವುದಕ್ಕಾಗಿಯೇ ಮನುಷ್ಯ ರಿಗೆ ನಿನ್ನ ಆರಾಧನಕ್ಕೆ ಸಾಧನವಾದ ದೇಹವನ್ನು ಕೊಡುತ್ತಿರುವೆ. ಅಂತಹ ದೇಹವನ್ನು ಹೊಂದಿರುವಾಗಲೂ, ಯಾವನು ಇಂದ್ರಿಯಪರವಶನಾಗಿ, ನಿನ್ನ ಚರಣಾರವಿಂದವನ್ನು ಸೇವಿಸುವುದಿಲ್ಲವೋ,ಅಂತವರ ಸ್ಥಿತಿಯು ಬಹಳ ಶೋ ಚನೀಯವಾದುದು. ಅಂತವನು, ತನ್ನನ್ನು ತಾನೇ ವಂಚಿಸಿಕೊಳ್ಳತಕ್ಕ ಮೂಢನೆನಿಸುವನು. ಯಾವ ಮನುಷ್ಯನು ತಾನು ಮರಣಶೀಲನೆಂಬುದ ನ್ಯೂ, ತನ್ನ ಆತ್ಮಸ್ವರೂಪವನ್ನೂ, ತಿಳಿಯದೆ,ಸತ್ವಲೋಕಪ್ರಿಯನಾದ ನಿನ್ನ ನ್ನು ಬಿಟ್ಟು, ಇಂದ್ರಿಯಪರವಶನಾಗಿ, ಅನರ್ಥಹೇತುಗಳಾದ ಶಬ್ಬಾಡಿವಿಷಯ ಗಳಲ್ಲಿ ಆಸೆಯಿಡುವನೋ,ಆಂತವನ ಸ್ಥಿತಿಗಾಗಿ ಎಷ್ಟು ಪರಿತಪಿಸಿದರೂ ಸಾಲ ದು.ಅಂತವನು ಅಮ್ಮತವನ್ನು ವಿಷವೆಂದು ಭ್ರಮಿಸಿ ನಿರಾಕರಿಸುವ ಮೂಢ ನಂತಲ್ಲದೆ ಬೇರೆಯಲ್ಲ. ಓ ದೇವಾ ! ನಾನು, ಚತುರ್ಮುಖಬ್ರಹ್ಮನು, ಇ೦ ದ್ರಾದಿದೇವತೆಗಳು, ಶುದ್ಧ ಮನಸ್ಕರಾದ ಮುನಿಗಳು, ಎಲ್ಲರೂ ಸಾಂತರಾ ತ್ಮನಾಗಿಯೂ, ಸಲ್ವಲೋಕಪ್ರಿಯನಾಗಿಯೂ, ಸತ್ಯೇಶ್ವರನಾಗಿಯೂ ಇರುವ ನಿನಗೆ ಸತ್ವವಿಧದಿಂದಲೂ ಅಧೀನರಾಗಿರುವೆವು.ನಮ್ಮೆಲ್ಲರಿಗೂ ನೀನೇ ಗತಿಯೆನಿಸಿರುವೆ. ಹೀಗೆ ಈ ಪ್ರಪಂಚದ ಸೃಷ್ಟಿ ಸ್ಥಿತಿ, ಲಯಗಳಿಗೆ ಕಾರಣ ನಾಗಿಯೂ, ಸತ್ವ ಸಮನಾಗಿಯೂ, ಹಸಿವು, ಬಾಯಾರಿಕೆ ಮೊದಲಾದ ಊರ್ಮಿಬಾಥೆಗಳಿಲ್ಲದೆ ಶಾಂತನಾಗಿಯೂ, ಸರೈಸುಹೃತ್ಕಾಗಿಯೂ,ಸ್ವಯಂ ಪ್ರಭುವಾಗಿಯೂ, ಎಣೆಯಿಲ್ಲದವನಾಗಿಯೂ, ನಮ್ಮಂತಹ ಸಮಸ್ತಜೀ ವಿಗಳಿಗೂ ಆಧಾರನಾಗಿಯೂ ಇರುವ ನಿನ್ನನ್ನು , ನಾವೆಲ್ಲರೂ, ಭೋಗ, ಮೋಕ್ಷಗಳೆರಡಕ್ಕಾಗಿಯೂ ಭಜಿಸುತ್ತಿರುವೆವು. ಆ ಸಂಗತಿಯು ಹಾಗಿರಲಿ! ಈ ಬಾಣಾಸುರನು ಆದಿಯಿಂದಲೂ ನನ್ನ ಭಕ್ತನಾಗಿ, ನನ್ನನ್ನೇ ಅರವರ್ತಿ ಸುತ್ತಿದ್ದವನು.ಈತನಿಗೆನಾನು ಅಪಾಯದಿಂದರಕ್ಷಿಸುವುದಾಗಿ ಅಭಯವನ್ನು ಕೊಟ್ಟಿರುವೆನು. ಈಗ ನಿನ್ನಿಂದ ಅವನಿಗೆ ಅಪಾಯವೇನಾದರೂ ಸಂಭವಿಸಿದ ಪಕ್ಷದಲ್ಲಿ ನನ್ನ ಮಾತು ವ್ಯರ್ಥವಾಗುವುದು. ಆದುದರಿಂದ ನೀನು ಇವನಲ್ಲಿ ಅನುಗ್ರಹವನ್ನು ತೋರಿಸಿ, ನಾನು ಕೊಟ್ಟ ಅಭಯವನ್ನು ಸಾರ್ಥಕಗೊಳಿಸ ಬೇಕು. ಇದಲ್ಲದೆ ಹಿಂದೆ ನೀನು ನೃಸಿಹ್ಮಾವತಾರದಲ್ಲಿ ಪ್ರಹ್ಲಾದನನ್ನು