ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೬೭.j , ದಶಮಸ್ಕಂಧವು. ೨೨Oಣ ಕುರಿತು, ಮುಂದೆ ಆತನ ಸಂತಾನಕ್ಕೆ ಸೇರಿದವರನ್ನು ಕೊಲ್ಲುವುದಿಲ್ಲ ವೆಂದು ಅನುಗ್ರಹಿಸಿರುವೆಯಲ್ಲವೆ ? ಇವನೂ ಆ ಸಂತಾನಕ್ಕೆ ಸೇರಿದವ ನಾದುದರಿಂದ ಇವನನ್ನು ನೀನು ಕೊಲ್ಲದೆ ರಕ್ಷಿಸಬೇಕು. ಇದೇ ನನ್ನ ಪ್ರಾರ್ಥನೆ ” ಎಂದನು. ಅದಕ್ಯಾ ಕೃಷ್ಣನು, “ಓ ಶಂಕರಾ ! ನಿನ್ನ ಇಷ್ಟ ದಂತೆ ನಿನ್ನ ಕೋರಿಕೆಯನ್ನು ನಡೆಸುವೆನು, ನಿನ್ನ ಪ್ರಿಯವೇ ನನ್ನ ಪ್ರಿಯವು! ನನಗೂ ಇವನನ್ನು ಕೊಲ್ಲಬೇಕೆಂಬ ಉದ್ದೇಶವಿಲ್ಲ.ಈತನು ನನಗೆ ಪರಮಭಕ್ಕೆ ನಾದ ಬಲಿಚಕ್ರವತಿಬಯ ಮಗನಾದುದರಿಂದ, ನಾನು ಎಂದಿಗೂ ಇವನ ನ್ನು ಕೊಲ್ಲಲಾರೆನು. ಇದಲ್ಲದೆ, ಹಿಂದೆ ನಾನು ಪ್ರಹ್ಲಾದನಿಗೆ, ಆತನ ವಂಶ ದವರನ್ನು ಕೊಲ್ಲುವುದಿಲ್ಲವೆಂದು ಪ್ರತಿಜ್ಞೆ ಮಾಡಿಕೊಟ್ಟಿರುವೆನು. ಆದರೆ ಇವನ ವೀಠ್ಯದ ಕೊಬ್ಬನ್ನು ಮುರಿಯುವುದಕ್ಕಾಗಿ ಇವನ ಭುಜಗಳೆಲ್ಲವನ್ನೂ ಕಡಿದುಹಾಕಿದೆನು. ಭೂಭಾರವನ್ನು ತಗ್ಗಿಸುವುದಕ್ಕಾಗಿ ಇವನ ಸೈನ್ಯವೆಲ್ಲ ವನ್ನೂ ಧ್ವಂಸಮಾಡಿದೆನು. ಇವನಿಗೆ ನಾಲ್ಕು ತೋಳುಗಳನ್ನು ಮಾತ್ರ ಮಿಗಿಸಿರುವೆನು. ಮುಂದೆ ಇವನು ಜರಾಮರಣಗಳಿಲ್ಲದೆ, ಬೇರೆ ಯಾರಿಂದಲೂ ಭಯವಿಲ್ಲದೆ, ನಿನ್ನ ಪಾರ್ಷದಗಣಗಳಲ್ಲಿ ಒಬ್ಬನಾಗಿರಲಿ ” ಎಂದನು. ಹೀಗೆ ಕೃಷ್ಣನು ಅಭಯವನ್ನು ಕೊಟ್ಟ ಮೇಲೆ, ಬಾಣಾಸುರನು ಮುಂದೆ ಬಂದು ಕೃಷ್ಣನಿಗೆ ತಲೆಬಗ್ಗಿ ನಮಸ್ಕರಿಸಿ, ತನ್ನ ಮಗಳಾದ ಉಷೆಯೊಡನೆ ಅನಿ ರುದ್ಯನನ್ನು ರಥದಲ್ಲಿ ಕುಳ್ಳಿರಿಸಿ, 'ಕೃಷ್ಣನಬಳಿಗೆ ಕರೆತಂದು ಬಿಟ್ಟನು. ಆಮೇಲೆ ಕೃಷ್ಣನು ರುದ್ರನ ಅನುಜ್ಞೆಯನ್ನು ಪಡೆದು, ಉತ್ತಮವಾದ ವಸ್ತಭೂಷಣಗಳಿಂದಲಂಕೃತರಾದ ಆ ವಧೂವರರನ್ನು ಮುಂದಿಟ್ಟು ಕೊಂಡು, ಆಕ್ರೋಹಿಣಿ ಸೈನ್ಯದಿಂದ ಪರಿವೃತನಾಗಿ,ತನ್ನ ಪುರಕ್ಕೆ ಹಿಂತಿರುಗಿ ದನು. ಇಷ್ಟರಲ್ಲಿಯೇ ದ್ವಾರಕಾವಾಸಿಗಳೆಲ್ಲರೂ ಈ ಶುಭವೃತ್ತಾಂತವನ್ನು ಕೇಳಿ ಪಟ್ಟಣವನ್ನಲಂಕರಿಸಿಟ್ಟರು. ಎಲ್ಲಿ ನೋಡಿದರೂ ಧ್ವಜಗಳೂ,ತೋರಣ ಗಳೂ ಕಂಗೊಳಿಸುತ್ತಿದ್ದುವು. ರಾಜವೀಧಿಗಳೂ, ಚತುಷ್ಪಥಗಳೂ ಸುಗಂಧ ಜಲದಿಂದ ಸೇಚಿತವಾಗಿದ್ದವು, ಶಂಖ, ದುಂದುಭಿ, ಮೊದಲಾದ ವಾದ್ಯ ಗಳು ಮೊಳಗುತಿದ್ದುವು. ಇಷ್ಟಬಂಧುಗಳೂ, ಪುರವಾಸಿಗಳೂ, ಬ್ರಾಹ್ಮ ಣರೂ ಇದಿರುಗೊಂಡು ಬಂದು, ವಧೂವರರನ್ನು ಸತ್ಕರಿಸಿ ಕರೆದುಕೊಂಡು