ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೬೪ ]. ದಶಮಸ್ಕಂಧವು. ೨೨೦೩ ಕೃಕಲಾಸರೂಪವು ಹೋಗಿ, ಒಂದಾನೊಂದು ದಿವ್ಯಪುರುಷಾಕೃತಿಯುಂ ಟಾಯಿತು. ಆ ಪುರುಷನು ಪಟಹಾಕಿದ ಚಿನ್ನ ದಂತೆ ಹೊಳೆಯುವ ದೇಹ ಚ್ಛಾಯೆಯಿಂದಲೂ, ಮೈಮೇಲೆ ಉತ್ತಮವಸ್ತ್ರಾಭರಣಗಳಿಂದಲೂ, ಕಂಠದಲ್ಲಿ ದಿವ್ಯಪಷ್ಟ ಮಾಲಿಕೆಯಿಂದಲೂ ಶೋಭಿಸುತ್ತಿದ್ದನು. ಸರೂಜ್ಞ ನಾದ ಕೃಷ್ಣನು ಅವನ ಪೂರೋತ್ತರಗಳನ್ನು ಚೆನ್ನಾಗಿ ಬಲ್ಲವನಾ ಗಿದ್ದರೂ, ಅಲ್ಲಿ ತನ್ನ ಸಹಚರರಿಗೂ, ಇತರಲೋಕಕ್ಕೂ ಆತನ ಮಹಿಮೆ ಯನ್ನು ಪ್ರಕಾಶಗೊಳಿಸಬೇಕೆಂಬ ಉದ್ದೇಶದಿಂದ. ಹೀಗೆಂದು ಪ್ರಶ್ನೆ • ಮಾಡುವನು. « ಓ ಮಹಾತ್ಮಾ ? ನೀನು ಯಾರು ? ಆತ್ಯುತ್ತಮವಾದ ನಿನ್ನ ರೂಪವನ್ನು ನೋಡಿದರೆ, ನೀನು ನಿಜವಾಗಿ ಯಾವನೋ ದೇವಶ್ರೇಷ್ಠ ನೆಂದೇ ನನಗೆ ತೋರುವುದು. ಓ ! ಭದ್ರಾ: ಯಾವ ಕಾರಣದಿಂದ ನಿನಗೆ ಯೋಗ್ಯವಲ್ಲದ ಆ ಸೀಚಜನ್ಮವುಂಟಾಗಿತ್ತು. ನಿನ್ನ ಪೂರೈವೃತ್ತಾಂತವನ್ನು ತಿಳಿಯಬೇಕೆಂದು ನಮ್ಮೆಲ್ಲರಿಗೂ ಬಹಳ ಕುತೂಹಲವಿರುವುದು, ಅದನ್ನು ನಮಗೆ ತಿಳಿಸಬಹುದಾಗಿರ್ ಪಕ್ಷದಲ್ಲಿ ತಿಳಿಸಬೇಕೆಂದು ಕೋರುವೆನು " ಎಂದನು. ಓ ಪರೀಕ್ಷೆ ಪ್ರಾಜಾ ! ಕೃಷ್ಣನು ಹೀಗೆಂದು ಪತ್ತೆ ಮಾಡಿದೆ ೧ಡನೆ, ಆ ದಿವ್ಯಪುರುಷನು ಸೂಧ್ಯಪ್ರಭೆಯುಳ್ಳ ತನ್ನ ಕಿರೀಟವನ್ನು ಕೃಷ್ಣನ ಪಾದಗಳಿಗೆ ಸೋಕಿಸಿ ನಮಸ್ಕರಿಸುತ್ತ, ಓ ಸ್ವಾಮಿ : ನಾನು ಇಕ್ಷಾಕು ರಾಜನ ಮಗನು. ನನಗೆ ನೃಗನೆಂದು ಹೆಸರು. ದಾನಶೀಲರ ಹೆಸರನ್ನು ಕೇಳು ವಾಗ, ಅವುಗಳನಡುವೆ ನನ್ನ ಹೆಸರೂ ನಿನ್ನ ಕಿವಿಗೆ ಬಿದ್ದಿದ್ದರೂ ಇರಬಹುದು. ಅಥವಾ ಸರಭೂತಾತ್ಮ ಸಾಕ್ಷಿಯಾದ ನಿನಗೆ ತಿಳಿಯದುದೇನುಂಟು ? ನಿನ್ನ ಜ್ಞಾನಕ್ಕೆ ಕಾಲವಶದಿಂದುಂಟಾಗುವ ಕಂದುಕುಂದುಗಳೊಂದೂ ಇರುವು ದಿಲ್ಲ. ಆದುದರಿಂದ ಭೂತಭವಿಷ್ಯದ್ವರ್ತಮಾನಗಳೆಲ್ಲವೂ ನಿನಗೆ ಕರತಲಾ ಮಲಕವಾಗಿರುವುವು. ಹಾಗಿದ್ದರೂ ನಿನ್ನ ಆಜ್ಞೆಯನ್ನು ಮೀರಲಾರದೆ ನಾನು ನನ್ನ ಬಾಯಿಂದ ತಿಳಿಸುವೆನು. ಓ ದೇವಾ ! ಹಿಂದೆ ನಾನು, ಈ ಭೂಮಿಯಲ್ಲಿ ಎಷ್ಟು ರೇಣುಗಳುಂಟೋ, ಆಕಾಶದಲ್ಲಿ ಎಷ್ಟು ನಕ್ಷತ್ರಗ ಕುಂಟೋ, ಆಕಾಶದಿಂದ ಎಷ್ಟು ಮಳೆಹನಿಗಳು ಬೀಳುವುವೋ, ಅಷ್ಟು ಗೋವುಗಳನ್ನು ದಾನಮಾಡಿರುವೆನು, ನಾನು ದಾನಮಾಡಿದ ಗೋವುಗ