ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೦೪ ಶ್ರೀಮದ್ಭಾಗವತವು [ಅಧ್ಯಾ, ೩೪. ಳಾದರೂ ಸಾಧಾರಣವಾದುವಲ್ಲ! ಯೌವನವಯಸ್ಸುಳ್ಳವುಗಳಾಗಿ, ರೂಪ ದಲ್ಲಿಯೂ, ಸ್ವಭಾವದಲ್ಲಿಯ, ಶುಭಲಕ್ಷಣಗಳಲ್ಲಿಯೂ, ಮೇಲೆನಿಸಿ ಕೊಂಡು, ಸಮೃದ್ಧವಾದ ಹಾಲನ್ನು ಕರೆಯತಕ್ಕವುಗಳು, ಉತ್ತಮವಾದ ಕಪಿಲವರ್ಣದಿಂದ ಕೂಡಿದವುಗಳು ! ಇಂತಹ ಗೋವುಗಳನ್ನೇ ಆರಿಸಿ, ಅವು ಗಳ ಕೊಂಬುಗಳನ್ನು ಸುವರ್ಣಕಲಶಗಳಿಂದಲೂ, ಕಾಲುಗಳನ್ನು ಬೆಳ್ಳಿಯ ಗೊರಸಲುಗಳಿಂದಲೂ, ವಸ್ತ್ರಾಭರಣಗಳಿಂದ ಅಲಂಕರಿಸಿ, ಕರುಗಳೊ ಡನೆ ದಾನಮಾಡಿರುವೆನು. ನಾನು ನನ್ನ ರಾಜ್ಯಾಧಿಕಾರಬಲದಿಂದ ಒಬ್ಬರಲ್ಲಿದ್ದುದನ್ನು ಕಿತ್ತು ಮತ್ತೊಬ್ಬರಿಗೆ ದಾನಮಾಡಿದುದಲ್ಲ, ನ್ಯಾಯ ವಾದ ಬೆಲೆಯನ್ನು ಕೊಟ್ಟು ತೆಗೆದು, ಅದನ್ನು ಬ್ರಾಹ್ಮಣರಿಗೆ ದಾನಮಾಡು ತಿದ್ದೆನು, ನಾನು ಆ ಗೋವಾನಗಳಿಗೆ ಪಾತ್ರೀಕರಿಸಿದ ಬ್ರಾಹ್ಮಣರಾದರೂ ಸಾಮಾನ್ಯರಲ್ಲ! ಗುಣಶೀಲಸಂಪನ್ನರಾಗಿ, ವ್ರತನಿಷ್ಠರಾಗಿ, ತಪಸ್ಸಿನಲ್ಲಿಯೂ, ಶಾಸ್ತ್ರಜ್ಞಾನದಲ್ಲಿಯೂ, ವೇದಾಧ್ಯಯನದಲ್ಲಿಯೂ ನಿಪುಣರಾಗಿ, ಸಾಧುಗೆ ಳಾಗಿ, ಬಡವರಾಗಿಯೂ ಇದ್ದ ಬ್ರಾಹ್ಮಣರನ್ನೆ ಹುಡುಕಿ, ಅವರಿಗೆ ವಸ್ಸಾ "ಲಂಕಾಗಳೊಡನೆ ದಾನಮಾಡುತಿದ್ದೆನು, ನಾನು ಮಾಡಿದುದು ಗೋವು ಗಳುಮಾತ್ರವೇ ಅಲ್ಲ! ನನ್ನ ಕ್ಲಿ ಆರ್ಥಿಗಳಾಗಿ ಬಂದವರು, ಭೂಮಿಯನ್ನಾಗಲಿ, ಮನೆಯನ್ನಾಗಲಿ, ಆನೆಕುದುರೆಗಳನ್ನಾಗಲಿ, ಕನೈಯರನ್ನಾಗಲಿ, ದಾಸಿಯ ರನ್ನಾಗಲಿ, ಯಾವುದನ್ನ ಪೇಕ್ಷಿಸಿದರೂ, ಅವರವರ ಇಷ್ಟಾನುಸಾರವಾಗಿ ಕೊಡುತ್ತಿದ್ದೆನು, ಮತ್ತು ತಿಲದಾನ, ರೂಪೈದಾನ, ಶಯಾದಾನ, ವಸ್ತ್ರ ದಾನ, ರತೃ ದಾವ, ಮುಂತಾದ ಸಮಸ್ಯಾನಗಳನ್ನೂ ನಡೆಸಿರುವೆನು. ಅವೆ ರವರಿಗೆ ಬೇಕಾದ ಗೃಹೋಪಕರಣಗಳನ್ನೂ ದಾನಮಾಡಿರುವೆನು ಹೀಗೆ ದಾನಮಾಡುವುದೊಂದೇ ಅಲ್ಲದೆ, ಅನೇಕಯಗಳನ್ನೂ ನಡೆಸಿದೆನು. ಕೆರೆಬಾವಿ, ಸತ್ರ, ಮುಂತಾದ ಧರ್ಮಗಳನ್ನೂ ನಡೆಸಿರುವೆನು ಹೀಗೆ ನಾನು ದಾನಧರ್ಮಗಳಲ್ಲಿ ನಿರತನಾಗಿರುವಾಗ, ಯಾವನೋ ಒಬ್ಬ ಬ್ರಾಹ್ಮಣೋ ತಮನಿಗೆ ನಾನು ಮೊದಲು ಕೊಟ್ಟಿದ್ದ ಗೋವು ತಪ್ಪಿಸಿಕೊಂಡು ಬಂದು, ತಿರುಗಿ ನನ್ನ ಮಂದೆಯಲ್ಲಿ ಸೇರಿಬಿಟ್ಟಿತು. ಆ ಸಂಗತಿಯು ನನಗೆ ತಿಳಿದಿರಲಿಲ್ಲ. ಇನ್ನೊಮ್ಮೆ ನಾನು ದಾನಮಾಡುವಕಾಲದಲ್ಲಿ, ಅದನ್ನೂ ನ ನ್ನ ಸ್ವಂತ ವೆ೦ ದೆ