ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೬೪.] ದಶಮಸ್ಕಂಧವು. ೨೨೦೫ ತಿಳಿದು ಮತ್ತೊಬ್ಬ ಬ್ರಾಹ್ಮಣನಿಗೆ ದಾನಮಾಡಿಬಿಟ್ಟೆನು, ಆ ಬ್ರಾಹ್ಮ ಣನು ಅದನ್ನು ತನ್ನ ಮನೆಗೆ ಕರೆದುಕೊಂಡು ಹೋಗುತ್ತಿರುವಾಗ, ಮೊದಲು ಅದನ್ನು ನನ್ನಿ೦ದಪಡೆದು, ನ್ಯಾಯವಾಗಿ ಅದಕ್ಕೆ ಸ್ವಂತಗಾರನಾಗಿದ್ದ ಬ್ರಾ ಹ್ಮಣನು, ಆಕಸ್ಮಾತ್ತಾಗಿ ಕಂಡು, ಆ ಗೋವು ತನ್ನ ದೆಂದು ನಡುದಾರಿ ಯಲ್ಲಿ ತಡೆದು ನಿಲ್ಲಿಸಿಬಿಟ್ಟನು. ಎರಡನೆಯಸಾರಿ ನನ್ನಿಂದ ದಾನವನ್ನು ಪಡೆದ ಬ್ರಾಹ್ಮಣನು, ಅದು ತನ್ನ ದೆಂದೂ, ಈಗಲೇ ನಗಚಕ್ರವರ್ತಿಯು ತನಗೆ ಕೊಟ್ಟಿರುವನೆಂದೂ ವಾದಿಸಿದನು. ಇಬ್ಬರೂ (• ನನ್ನ ದು ತನ್ನ ದು” ಎಂದು ವಿವಾದಮಾಡುತ್ತ ನನ್ನಲ್ಲಿಗೆ ಬಂದರು. ಇಬ್ಬರೂ ಮುಷ್ಕರದಿಂದ ತಮ್ಮ ಹಟವನ್ನೇ ಸಾಧಿಸುತ್ತ, ನನ್ನನ್ನು ನೋಡಿ (ಕೊಟ್ಟ ದಾನವನ್ನು ಹಿಂ ತಿರುಗಿ ಕಿತ್ತುಕೊಂಡ ದತ್ತಾಪಹಾರಿ ” ಯೆಂದು ನನ್ನ ನ್ನು ಮೂದಲಿಸ ತೊಡಗಿದರು. ಅವರ ತಿರಸ್ಕಾರವಾಕ್ಯವನ್ನು ಕೇಳಿ ನನಗೆ ದಿಗೃಮೆಹಿಡಿ ದಂತಾಯಿತು. ಅವರಿಬ್ಬರಿಗೂ ನಾನೇ ಆ ಗೋವನ್ನು ದಾನಮಾಡಿದವನು. ಅವರಲ್ಲಿ ಯಾರಾದರೂ ಒಬ್ಬರಿಗೆ ಅದನ್ನು ಕೊಟ್ಟು, ಮತ್ತೊಬ್ಬರನ್ನು ಬೇ ರೆವಿಧವಾಗಿ ತೃಪ್ತಿ ಪಡಿಸಿ, ಈ ಧರ್ಮಸಂಕಟದಿಂದ ಬಿಡುಗಡೆಹೊಂದಬೇ ಕೆಂದು ತೋರಿತು. ಇಬ್ಬರಿಗೂ ಎಷ್ಟೆಷ್ಟೋ ವಿಧದಿಂದ ಸಮಾಧಾನಹೇಳಿ ದೆನು. ಅವೊಂದು ಗೋಪಿಗಾಗಿ ಅವರಲ್ಲಿ ಯಾವನಾದರೂ ಒಬ್ಬನಿಗೆ ಲಕ್ಷಗೋವುಗಳನ್ನು ಕೊಡುವುದಾಗಿ ಹೇಳಿದೆನು. ಇಬ್ಬರೂ ತಮ್ಮ ಮುಷ್ಕ ರವನ್ನು ಬಿಡದೆ, ಆ ಹಸುವೇ ತಮಗೆ ಬೇಕೆಂದು ನಿರ್ಬಂಧಿಸಿದರು.ಆಗ ನಾ ನು ಆವರಮುಂದೆ ಕೈಮುಗಿದು, ( ಎಲೈ ಬ್ರಾಹ್ಮಣೋ ಮರೆ ! ತಿಳಿಯ ದೆ ಮಾಡಿದ ನನ್ನ ತಪ್ಪನ್ನು ಮನ್ನಿಸಿ, ನನ್ನನ್ನು ನರಕದಿಂದ ಉದ್ಧರಿಸಬೇಕು. ನೀವು ಕೇಳಿದ ದ್ರವ್ಯವನ್ನು ಕೊಡುವುದಕ್ಕೆ ಸಿದ್ಧನಾಗಿರುವೆನು'ಎಂದು ಬೇಡಿ ದೆನು, ಇಷ್ಟಾದರೂ ಅದರ ಮೊದಲಿನ ಸ್ವಂತಗಾರನು, “ ನಿನ್ನ ಲಕ್ಷಗೋ ವುಗಳನ್ನೂ ನಾನೊಲ್ಲೆನು” ಎಂದು ಹೇಳಿ ಕೋಪದಿಂದ ಹೊರಟುಹೋ ದನು. ಹಾಗೆಯೇ ಮತ್ತೊಬ್ಬನು, “ನೀನು ಹತ್ತುಲಕ್ಷಗೋವುಗಳನ್ನು ಕೊ ಟ್ಟರೂ ನಾನೊಲ್ಲೆ” ನೆಂದು ಹೇಳಿಹೋದನು, ನಾನು ದಾನಮಾಡಿದ ಥೇನುವು ನನ್ನಲ್ಲಿಯೇ ನಿಂತುಹೋಯಿತು. ಓ ದೇವಾ ! ಕೊನೆಗೆ ನಿನ್ನ ಸಂ