ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೦೬ ಶ್ರೀಮ ವ್ಯಾಗವತವು [ಅಧ್ಯಾ. ೬೪. ಕಲ್ಪರೂಪವಾದ ಕಾಲವಶದಿಂದ ನಾನು ಮೃತನಾದಮೇಲೆ, ನನಗೆ ಯಾ ವ ಗತಿಯುಂಟಾಯಿತೆಂಬುದನ್ನೂ ತಿಳಿಸುವೆನು ಕೇಳು, ನನ್ನ ದೇಹಾವಸಾನ ದಲ್ಲಿ ಯಮದೂತರು ಬಂದು, ನನ್ನನ್ನು ಯಮಲೋಕಕ್ಕೆ ಕರೆದುಕೊಂಡು ಹೊದರು, ಅಲ್ಲಿ ಯಮಧರ್ಮರಾಯನು ನನ್ನನ್ನು ನೋಡಿ (4 ಓ ರಾಜಾ ! ನೀನು ಪಾಪಪುಣ್ಯಗಳೆರಡನ್ನೂ ನಡೆಸಿರುವೆ ! ಆದುದರಿಂದ ಮೊದಲು ನೀ ನು ಪಾಪಫಲವನ್ನನುಭವಿಸುವೆಯಾ ? ಅಥವಾ ಪುಣ್ಯಫಲವನ್ನನ್ನು ಭವಿಸು ವೆಯಾ ? ನಿನ್ನ ಇಷ್ಯವನ್ನು ಹೇಳು ! ನೀನು ಎಷ್ಟೋ ದಾನಗಳನ್ನು ಮಾಡಿ ರುವೆ. ಅದಕ್ಕಾಗಿ ನೀನು ಅನುಭವಿಸಬೇಕಾದ ಪುಣ್ಯಫಲವು ಅಪಾರವಾಗಿರು ವುದು. ಆದರೆ ದತ್ತಾಪಹಾರರೂಪವಾದ ನಿನ್ನ ಪಾಪಕ್ಕೂ ಫಲವನ್ನನು ಭವಿಸದೆ ತೀರದು, ಅವುಗಳಲ್ಲಿ ನೀನು ಮೊದಲು ಯಾವುದನ್ನ ನುಭವಿಸುವೆ ” ಎಂದು ಕೇಳಿದನು. ಆಗ ನಾನು, ಮೊದಲು ಪಾಪಫಲವನ್ನೆ ಅನುಭವಿ ಸುವೆನೆಂದು ಒಪ್ಪಿಕೊಂಡರು, ಯಮನು ” “ಹಾಗೆಯೇ ಆಗಲಿ! ಹೋಗು" ಎಂದು ಹೇಳಿದನು. ಯಮನ ಬಾಯಿಂದ ಆ ಮಾತು ಹೊರಳೊಡನೆ, ನಾನು ಅಲ್ಲಿಂದ ಕೆಳಗೆ ಬಿದ್ದನು. ನಾನು ಬಿಳುತ್ತಿರುವಾಗಲೇ ನನಗೆ ಈ ಕೃಕಲಾಸ ದ ಹೆಂಟೆಗೊದ್ಯದ) ಆಕಾರವು ಪ್ರಾಪ್ತವಾಗಿರುವುದನ್ನು ನೋಡಿದೆನು ಓ! ಪ್ರಭೂ! ನಾನು ಹಿಂದೆ ಬ್ರಾಹ್ಮಣಪ್ರಿಯನಾಗಿಯೂ,ದಾನಶೀಲನಾಗಿಯೂ ನಿನ್ನ ಭಕ್ತನಾಗಿಯೂ ಇದ್ದುದರಿಂದ, ನಿನ್ನ ಸ್ಮತಿಯುಮಾತ್ರ ಆಗಲೂ ತಪ್ಪಿಹೋಗಿರಲಿಲ್ಲ. ನಿನ್ನ ಸಂದರ್ಶನವು ಯಾವಾಗ ಲಭಿಸುವುದೋ ಎಂದು ಅನವರತವೂ ತವಕಿಸುತಿದ್ದೆನು, ನನ್ನ ಪುಣ್ಯಫಲದಿಂದ ಈಗ ನಿನ್ನ ದರ್ಶನವು ಲಭಿಸಿತು. ಓ! ಸರೈಶ್ವರಾ! ನೀನು ಮಹಾಯೋಗಿಗಳ ಕಣ್ಣಿಗೂ ಗೋಚರಿ ಸತಕ್ಕವನಲ್ಲ. ಉಪನಿಷತ್ತುಗಳ ಮೂಲಕವಾಗಿ ಕೇವಲಜ್ಞಾನದೃಷ್ಟಿಗೆ ಮಾ ತ್ರವೇ ಗೋಚರಿಸತಕ್ಕ ಪರಮಾತ್ಮನು! ಭಕ್ತರಲ್ಲದವರ ಇಂದ್ರಿಯಗಳಿಗೆ ಅ ಗೋಚರನು. ಇಂತಹ ನೀನು ಮಾಂಸದೃಷ್ಟಿಯುಳ್ಳ ಈ ನನ್ನ ಕಣ್ಣಿಗೆ ಗೋಚರಿಸಿದೆ? ಯಾವನು ಸಂಸಾರಪಾಶದಿಂದ ಮುಕ್ತನಾಗಬೇಕೋ ಅವನಿಗೆ ಬುದ್ದಿಯು ಎಷ್ಮೆ ವ್ಯಸನದಿಂದ ಮಂದವಾಗಿದ್ದರೂ, ಶಾಂತವಾದ ಆತನ ಹೃದಯದಲ್ಲಿ ನೀನು ಕಾಣಿಸಿಕೊಳ್ಳುವೆಯೆಂಬುದಕ್ಕೆ ಈಗ ನನ್ನ ಸ್ಥಿ ತಿಯೇ ನಿದರ್ಶನವು.