ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದಾಗವತವು ದಶಮಸ್ಕಂಧದ ಉತ್ತರಾರ್ಧವು. w+ ಜರಾಸಂಧಪರಾಜಯವು, •m ಕಂಸನಿಗೆ ಅಸ್ತಿಪಾಸ್ತಿಗಳೆಂಬ ಇಬ್ಬರು ಭಾರೆಯರಿದ್ದರು. ಕೃಷ್ಣನಿಂದ ತಮ್ಮ ಪತಿಯು ಹತನಾದಮೇಲೆ, ಅವರಿಬ್ಬರೂ ದುಃಖದಿಂದ ತಂದೆಯಾದ ಜರಾಸಂಧನ ಮನೆಗೆ ಹೋಗಿ ಸೇರಿದರು.ಅಲ್ಲಿ ಅವರು ಮಗಧ ರಾಜನಾದ ಜರಾಸಂಧನಿಗೆ ತಮ್ಮ ದುಃಖವನ್ನು ವಿವರಿಸಿ, ತಮಗೆ ವೈಧವ್ಯ ವುಂಟಾದ ಕಾರಣಗಳೆಲ್ಲವನ್ನೂ ತಿಳಿಸಿದರು.ಅದನ್ನು ಕೇಳಿದೊಡನೆ ಜರಾಸಂ ಧನು ದುಃಖದಿಂದಲೂ, ಕೋಪದಿಂದಲೂ ಪೀಡಿತನಾಗಿ, ಭೂಮಿಯಲ್ಲಿ ಯಾದವರ ಹುಟ್ಟೇ ಇಲ್ಲದಂತೆ ಮಾಡುವೆನೆಂದು ದೃಢಸಂಕಲ್ಪವನ್ನು ಹಿಡಿ ದನು, ಒಡನೆಯೇ ಇಪ್ಪತ್ತು ಮೂರು ಅಕ್ಷೆಹಿಣೀಸೈನ್ಯವನ್ನು ಸೇರಿಸಿಕೊಂ ಡು, ಯಾದವರಾಜ ಧಾನಿಯಾದ ಮಧುರಾಪುರಿಯಮೇಲೆ ದಂಡೆತ್ತಿ ಬಂದು, ನಾಲ್ಕು ದಿಕ್ಕುಗಳಿಂದಲೂ ಅದಕ್ಕೆ ಮುತ್ತಿಗೆಹಾಕಿದನು. ಇಷ್ಟರಲ್ಲಿ ಶ್ರೀ ಕೃಷ್ಣನು, ಮೇರೆಮೀರಿ ಬರುವ ಸಮುದ್ರದಂತೆ ಜರಾಸಂಧನ ಸೈನ್ಯವು ತನ್ನ ಪಟ್ಟಣದ ಸುತ್ತುಮುತ್ತಲೂ ಬಂದು ಸೇರಿ ಮುತ್ತಿಗೆಹಾಕಿರುವುದನ್ನೂ, ದರಿಂದ ಆ ಪುರವಾಸಿಗಳೆಲ್ಲರೂ ಭಯದಿಂದ ತತ್ತಳಿಸುತ್ತಿರುವುದನ್ನೂ ನೋ ಡಿದನು, ಆದರೇನು ? ಓಪರೀಕ್ಷಿದ್ರಾಜಾ ! ಆ ಶ್ರೀಕೃಷ್ಣನೇ ಸಾಲೋಕ ಕಾರಣನಾದುದರಿಂದ, ಆತನಿಗೆ ಈ ಜರಾಸಂಧನ ಮುತ್ತಿಗೆಯಿಂದ ಯಾವ ವಿಧವಾದ ಆಪತ್ತೂ ಸಂಭವಿಸಲಾರದು. ಆ ಸೈನ್ಯಗಳನ್ನಡಗಿಸುವುದೂ 132 8,