ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨O೯ ಅಧ್ಯಾ, ೬೫.] ದಶಮಸ್ಕಂಧವು. ನೋಡಿರಿ!” ಎಂದನು. ಕೃಷ್ಣನು ಹೀಗೆಂದು ದ್ವಾರಕಾವಾಸಿಗಳಾದ ಅಲ್ಲಿನ ಜನರಿಗೆ ಬೋಧಿಸಿ, ತನ್ನ ಮನೆಗೆ ಹಿಂತಿರುಗಿ ಬಂದನು. ಇದು ಅರುವತ್ತು ನಾಲ್ಕನೆಯ ಅಧ್ಯಾಯವು. ( ಬಲರಾಮನು ತಿರುಗಿ ನಂದಗೋಕುಲಕ್ಕೆ ಬಂದುದು ) ಯಮುನಾನದಿಯನ್ನು ಆಕರ್ಷಿಸಿದುದು. ಓ ಪರೀಕ್ಷಿದ್ರಾಜಾ ! ಒಮ್ಮೆ ಬಲರಾಮನು, ತನ್ನ ಬಂಧುಮಿತ್ರರನ್ನು ನೋಡಿ ಬರಬೇಕೆಂಬ ಆತುರದಿಂದ, ರಥವನ್ನೇರಿ ನಂದಗೋಕುಲಕ್ಕೆ ಹೋದನು, ಅಲ್ಲಿನ ಗೋಪಗೋಪಿಯರೆಲ್ಲರೂ ಇವನನ್ನು ಬಹುಕಾಲದಿಂದ ಕಾಣದೆ, ಇವನನ್ನು ನೋಡಬೇಕೆಂದು ಕುತೂಹಲವುಳ್ಳವರಾಗಿದ್ದುದರಿಂದ, ಬಲರಾಮನು ಊರಿಗೆ ಬಂದೊಡನೆ, ಎಲ್ಲರೂ ಬಂದು, ಪ್ರೀತಿಯಿಂದ ಅವ ನನ್ನಾಲಿಂಗಿಸಿ ಸತ್ಕರಿಸಿದರು. ಬಲರಾಮನು ತನ್ನ ತಾಯ್ತಂದೆಗಳಾದ ನಂದ ಯಶೋದೆಯರ ಬಳಿಗೆ ಬಂದು ನಮಸ್ಕರಿಸಿದಾಗ, ಅವರು ಶುಭಾಶೀರ್ವಾದ ಗಳನ್ನು ಮಾಡಿ ವತ್ವಾ ! ನೀನೂ, ನಿನ್ನ ತಮ್ಮನಾದ ಕೃನ್ಮನೂ ಯಾದ ವಕುಮಾರರಾಗಿ ಜನಿಸಿದ್ದರೂ, ನಿಮ್ಮ ಅದ್ಭುತಕಾರಗಳಿಂದ ನಿಮ್ಮನ್ನು ನಾವು ಜಗದೀಶ್ವರರೆಂದೇ ಎಣಿಸಬೇಕಾಗಿದೆ. ನೀವಿಬ್ಬರೂ ನಮ್ಮನ್ನು ಬಹು ಕಾಲದವರೆಗೆ ಸುಖದಿಂದ ರಕ್ಷಿಸುತ್ತಿರಬೇಕು.” ಎಂದು ಆತನನ್ನು ಸಮೀಪಕ್ಕೆ ಕರೆದು ಪ್ರೀತಿಯಿಂದಾಲಿಂಗಿಸಿ, ತೊಡೆಯಮೇಲೆ ಕುಳ್ಳಿರಿಸಿ ಕೊಂಡು, ಆನಂದಬಾಷ್ಟ್ರವನ್ನು ಸುರಿಸಿದರು ಆಮೇಲೆ ರಾಮನು, ಇತರ ಗೋಪವೃದ್ಧರನ್ನೂ ವಿಧ್ಯುಕ್ತವಾಗಿ ಅಭಿವಾದನಮಾಡಿದನು. ತನಗಿಂ ತಲೂ ಚಿಕ್ಕ ವಯಸ್ಸಿನವರು ಬಂದು ನಮಸ್ಕರಿಸಿದಾಗ, ಅವರಿಗೆ ಆಶೀರ್ವಾ ದಗಳನ್ನು ಮಾಡುವುದು, ಸಮಾನಸ್ಕಂಧರಾದ ಕೆಲವರನ್ನು ಆಲಿಂಗನಾದಿ ಗಳಿಂದ ನನ್ನಿ ಸುವುದು, ಕೆಲವರಿಗೆ ಕೈಹಿಡಿದು ಕುಶಲಪ್ರಶ್ನೆ ಮಾಡುವುದು, ಕೆಲವರೊಡನೆ ಮಕ್ಕಳಾಟವಾಡುವುದು, ಹೀಗೆ ಅವರವರಲ್ಲಿ ತನಗಿರುವ ಸಂಬಂಧಕ್ಕೂ, ಸ್ನೇಹಕ್ಕೂ, ಸಲಿಗೆಗೂ, ಅವರವರ ವಯಸ್ಸಿಗೂ ತಕ್ಕಂತೆ