ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೧೦ ಶ್ರೀಮದ್ಭಾಗವತವು [ಅಧ್ಯಾ, ೬೫, ಪ್ರೀತಿಗೌರವಗಳನ್ನು ತೋರಿಸಿದನು. ಹೀಗೆ ಪರಸ್ಪರಕುಶಲಪ್ರಶ್ನಾಡಿಗ ಳೆಲ್ಲವೂ ನಡೆದಮೇಲೆ, ಸುಖಾಸೀನನಾದ ಬಲರಾಮನನ್ನು ನೋಡಿ, ಕೆಲವು ಗೋಪಿಯರು ಅವನ ಸುತ್ತಲೂ ಕುಳಿತು, ಕೃಷ್ಣನನ್ನು ಮನಸ್ಸಿನಲ್ಲಿ ದೃಢ ಧ್ಯಾನದಿಂದ ಚಿಂತಿಸುತ್ತ, ಅವನಲ್ಲಿ ತಮಗಿರತಕ್ಕ ಅಸಾಧಾರಣಪ್ರೇಮ ದಿಂದ ಗದ್ದಸ್ವರವುಳ್ಳವರಾಗಿ ಹೀಗೆಂದು ಪ್ರಶ್ನೆ ಮಾಡುವರು. ರಾಮಾ! ದ್ವಾರಕೆಯಲ್ಲಿ ನಮ್ಮ ಮಿತ್ರರಾದ ಯಾದವರೆಲ್ಲರೂ ಕ್ಷೇಮದಿಂದಿರುವ ರಷ್ಯ ? ನೀನೂ, ನಿನ್ನ ತಮ್ಮ ನಾದ ಕೃಷ್ಣನೂ, ನಿಮ್ಮ ಪತ್ರ ಕಳತ್ರಾದಿ ಬಂಧುಜನಗಳೂ, ಇನ್ನೂ ನಮ್ಮನ್ನು ಮರೆತಿಲ್ಲವಷ್ಟೆ? ಮುಖ್ಯ ವಾಗಿ ನಿಮ್ಮಿಂದ ಆ ದುರಾತು ನಾದ ಕಂಸನು ಹತನಾಗಿ,ನಮಗೂ ಸಾಧು ಗಳಿಗೂ, ಅವನಿಂದುಂಟಾಗುವ ಕಷ್ಟವು ನೀಗಿದುದು ನಮ್ಮ ಭಾಗ್ಯವು ! ಮತ್ತು ನೀವು ಶತ್ರುಗಳಲ್ಲಿ ಕೆಲವರನ್ನು ಕೊಂದೂ, ಕೆಲವರನ್ನು ಜಯಿ ಸಿಯೂ, ಕೊನೆಗೆ ಬಲವಾದ ದರ್ಗಸ್ಥಾನವನ್ನು ಸೇರಿರುವುದು ನಮ್ಮ ಭಾಗ್ಯವೇ!” ಎಂದರು. ಕೆಲವು ಗೋಪಿಯರು ಮನೋಭಾವಸೂಚಕ ವಾದ ಮುಗುಳುನಗೆಯೊಡನೆ ರಾಮನನ್ನು ನೋಡಿ - ಓ ಪೂಜಾ: ಪುರ ಸ್ತ್ರೀಯರಿಗೆ ವಲ್ಲಭನಾದ ಕೃಷ್ಣನು ಸುಖದಿಂದಿರುವನಷ್ಮೆ ? ಅವನು ಈ ಹಳ್ಳಿಯಲ್ಲಿರತಕ್ಕ ತನ್ನ ಹಳೇಸ್ನೇಹಿತರನ್ನೂ, ತನ್ನ ತಂದೆ ತಾಯಿಗ ಇನ್ನೂ , ಆಗಾಗ ಜ್ಞಾಪಿಸಿಕೊಳ್ಳುತ್ತಿರುವನೇ ! ಹಿಂದೆ ಇಲ್ಲಿ ನಾವು ಮಾ ಡಿದ ಸೇವೆಯನ್ನು ಆಮಹಾಭುಜುನು ಸ್ಮರಿಸುತ್ತಿರುವನೆ: ಓ ಯದುಕುಲೋ ತಮಾ ! ನಾವು ಯಾವನಿಗಾಗಿಯೇ ನಮ್ಮ ತಂದೆತಾಯಿಗಳನ್ನೂ , ಸಹೋದರರನ್ನೂ, ಕೈಹಿಡಿದ ಗಂಡಂದಿರನ್ನೂ, ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳನ್ನೂ ,ಒಡಹುಟ್ಟಿದ ಅಕ್ಕತಂಗಿಯರನ್ನೂ ಬಿಟ್ಟು ಬಂದೆವೋ, ಅಂತಹ ನಮ್ಮನ್ನೂ ಅನಾದರಿಸಿ, ಕೃಷ್ಣನು ಇದ್ದಕ್ಕಿದ್ದಹಾಗೆ ನಮ್ಮ ಸ್ನೇಹ ಪಾಶವನ್ನು ಕಿತ್ತುಬಿಟ್ಟನು. ಹಾಗಿದ್ದರೆ ನೀವು ಅವನನ್ನು ಬಲಾತ್ಕಾರ ದಿಂದ ತಡೆದು ನಿಲ್ಲಿಸಬಹುದಾಗಿತ್ತಲ್ಲವೇ” ಎಂದು ಕೇಳುವೆಯಾ ? ರಾಮಾ! ಆವನು ಶೀಘ್ರದಲ್ಲಿಯೇ ಹಿಂತಿರುಗಿ ನಮ್ಮಲ್ಲಿಗೆ ಬರುವುದಾಗಿ ಹೇಳಿಹೋದ ನು. ಅವನ ಮಾತನ್ನು ನಿಜವೆಂದು ನಂಬಿ ಮೋಸಹೋದೆವು. ಆ ಕೃಷ್ಣನು