ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೧೨ ಶ್ರೀಮದ್ಭಾಗವತವು - [ಅಧ್ಯಾ ೩೫. ದ್ಯದ ವಾಸನೆಯು ಆ ವನವನ್ನೆಲ್ಲಾ ಫುಮಸುಮಿಸುವಂತೆ ಮಾಡುತಿತ್ತು ಆ ಮದ್ಯಗಂಧವು, ಮೇಲೆಮೇಲೆ ಉತ್ಸಾಹವನ್ನು ಹುಟ್ಟಿಸುತ್ತಿರಲು,ಬಲರಾ ಮನು, ಸ್ತ್ರೀಯರೊಡನೆ ಯಥೇಷ್ಟವಾಗಿ ಮದ್ಯಪಾನವನ್ನು ಮಾಡುತ್ತ ವಿ ಹರಿಸುತಿದ್ದನು. ಗೋಪಿಯರು ಮಂಡಲಾಕಾರವಾಗಿ ಸುತ್ತಿನಿಂತು ಗಾನಮಾಡುತ್ತಿರಲು, ಹೆಣ್ಣಾನೆಗಳ ನಡುವೆ ಆಡುತ್ತಿರುವ ಐರಾವ ತದಂತೆ, ಅವರನಡುವೆ ನಿಂತು, ತಾನೂ ಗಾನಮಾಡುತಿದ್ದನು. ಆಗ ಆಕಾಶದಲ್ಲಿ ದೇವದುಂದುಭಿಗಳು ಮೊಳಗಿದುವು. ದೇವತೆಗಳು ಪುಷ್ಪ ವರ್ಷವನ್ನು ಕರೆದರು. ಗಂಥಲ್ವರು ಗಾನಮಾಡಿದರು.ದೇವರ್ಷಿಗಳು ಸಂತೋ ಷದಿಂದ ಆ ಬಲರಾಮನ ಗುಣವೀತ್ಯಾದಿಗಳನ್ನು ಕೊಂಡಾಡಿ ಕೀರ್ತಿಸಿದರು. ಹೀಗೆ ಬಲರಾಮನು ಗೋಪಿಯರ ಕೊಂಡಾಟಗಳನ್ನು ಕೇಳುತ್ತ, ಮದ್ಯಮ ದದಿಂದ ಮತ್ತೇರಿದ ಕಣ್ಣುಗಳುಳ್ಳವನಾಗಿ,ಆ ಯಮುನಾತೀರದ ವನಗಳಲ್ಲಿ ಸಂತೋಷದಿಂದಸುತ್ತುತಿದ್ದಾಗ,ಪುಷ್ಪಹಾರಗಳಿಂದಲೂ, ವೈಜಯಂತೀಮಾ ಲಿಕೆಯಿಂದಲೂ, ಒಂದು ಕಿವಿಯಲ್ಲಿ ಕುಂಡಲದಿಂದಲೂ, ಬೆವರಿನ ಹನಿ ಗಳನ್ನು ತುಳುಕಿಸುತ್ತಿರುವ ನಗುಮುಖದಿಂದಲೂ ಆಪೂತ್ವಶೋಭೆಯನ್ನು ಬೀರುತ್ತಿದ್ದನು. ಹೀಗೆ ಆವನದಲ್ಲಿ ಸುತ್ತುತ್ತಿರುವಾಗ, ಅವನಿಗೆ ಯಮುನಾನದಿಯಲ್ಲಿ ಜಲಕ್ರೀಡೆಯನ್ನಾ ಡಬೇಕೆಂಬ ಕುತೂಹಲವು ಹುಟ್ಟಿತು. ತಾನಾಗಿ ಆನದಿ ಯ ಸಮೀಪಕ್ಕೆ ಹೋಗಲು ಬೇಸರದಿಂದ, ಆ ನದಿಯನ್ನೇ ತಾನಿದ್ದ ಸ್ಥಳಕ್ಕೆ ಕರೆದನು, ಆಗ ಯಮುನಾನದಿಯು, ಅವನ ಮಹಿಮೆಯನ್ನು ತಿಳಿಯದೆ,ಅವನು ಮದಮತ್ತನಾಗಿರುವುದನ್ನು ನೋಡಿ ಅಲಕ್ಷದಿಂದಿದ್ದಿತು. ಆಗ ಬಲರಾಮ ನು ಕೋಪಗೊಂಡು,ತನ್ನ ನೇಗಿಲಿನಿಂದ ಅದನ್ನು ತನ್ನ ಕಡೆಗೆ ಎಳೆದು ನಿಲ್ಲಿಸಿ ಕೊಂಡು” ಎಲೆ ಪಾಪಿನಿ! ನಾನು ಕರೆಯುತಿದ್ದರೂ ಲಕ್ಷವಿಲ್ಲದಿದ್ದೆಯಲ್ಲವೆ? ಈಗ ಇದೇ ನೇಗಿಲಿನಿಂದ ನಿನ್ನನ್ನು ನೂರಾರುಭಾಗವಾಗಿ ಸೀಳಿಬಿಡುವೆನು ನೋಡು!” ಎಂದನು.ಆಗ ಯಮುನೆಯ ಬಲರಾಮನ ಕೋಪಕ್ಕೆ ಹೆದರಿ,ಸೀ ರೂಪದಿಂದ ಬಂದು, ಅವನ ಕಾಲುಗಳಿಗೆಬಿದ್ದು ಹೀಗೆಂದು ಪ್ರಾರ್ಥಿಸುವಳು. (ರಾಮಾ ! ರಾಮಾ ! ಓ ಮಹಾಬಾಹೂ! ನಿನ್ನ ಪರಾಕ್ರಮವನ್ನು ನಾನು