ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೧೩ ಅಧ್ಯಾ. ೬೩ ] ದಶಮಸ್ಕಂಧವು. ತಿಳಿಯದೆಹೋದೆನು. ಓ ಜಗತ್ಪತೇ ! ನಿನ್ನ ಏಕಾಂಶಮಾತ್ರದಿಂದಲೇ ನೀ ನು ಈ ಜಗತ್ತನ್ನು ಧರಿಸಿರತಕ್ಕವನೆಂಬುದು ಈಗ ನನಗೆ ಸ್ಪಷ್ಟವಾಯಿತು. ಓ ಮಹಾತ್ಮಾ ! ಸಾಕ್ಷಾದ್ಭಗವದಂಶಭೂತನಾದ ನಿನ್ನ ಪರಸ್ವಭಾವವನ್ನು ತಿಳಿಯದೆ ನಾನು ಮಾಡಿದ ಅಪರಾಧವನ್ನು ಮನ್ನಿಸಿ, ನನ್ನನ್ನು ಬಿಟ್ಟುಬಿಡ ಬೇಕು ! ನಾನು ನಿನ್ನಲ್ಲಿ ಮರೆಹೊಕ್ಕಿರುವೆನು.” ಎಂದು ಪ್ರಾರ್ಥಿಸಿದಳು. ಆಗ ಬಲರಾಮನು ಆಕೆಯಲ್ಲಿ ಪ್ರಸನ್ನ ನಾಗಿ, ಅವಳ ಕೊರಳಿಗೆ ಹಾಕಿದ ನೇಗಿಲನ್ನು ತೆಗೆದು, ಹೆಣ್ಣಾನೆಗಳೊಡನೆ ನೀರಿಗಿಳಿಯುವ ಮದದಾನೆಯಂತೆ ಜಲಕ್ರೀಡೆಗಾಗಿ ಸ್ತ್ರೀಯರೊಡನೆ ಅದರಲ್ಲಿಳಿದನು. ಅವನು ಯಥೇಷವಾಗಿ ವಿಕರಿಸಿ ಮೇಲಕ್ಕೆದ್ದು ಬಂದಮೇಲೆ, ಯಮುನೆಯು ಅವನಿಗಾಗಿ ಉತ್ತಮ ವಾದ ಎರಡು ಬಿಳೀದುಕೂಲಗಳನ್ನೂ , ಅಮೂಲ್ಯಾಭರಣಗಳನ್ನೂ , ಒಂದು ದಿವ್ಯಪಷ್ಟ ಮಾಲಿಕೆಯನ್ನೂ ಕಾಣಿಕೆಯಾಗಿ ತಂದೊಪ್ಪಿಸಿದಳು, ಬಲರಾ ಮನು ಅವೆಲ್ಲವನ್ನೂ ಪ್ರೀತಿಯಿಂದ ಸ್ವೀಕರಿಸಿ, ಆದೇ ವಸ್ತ್ರಾಭರಣಗಂಧ ಪುಷ್ಪಾದಿಗಳಿಂದ ದೇಹವನ್ನಲಂಕರಿಸಿಕೊಂಡು, ಅಲಂಕೃತವಾದ ಐರಾವತ ದಂತೆ ಶೋಭಿಸಿದನು. ಓ ಪರೀಕ್ಷಿದ್ರಾಜಾ ! ಬಲರಾಮನು ಯಮುನಾನದಿ ಯನ್ನು ನೇಗಿಲಿನಿಂದೆಳೆದು ತನ್ನ ಕಡೆಗೆ ಒತ್ತರಿಸಿಕೊಂಡ ದಾರಿಯಲ್ಲಿಯೇ, ಈಗಲೂ ಅನದಿಯು ವಕ್ರವಾಗಿ ಪ್ರವಹಿಸುತ್ಯ, ಅತನ ಅಪ್ರಮೇಯಪ್ಪ ಭಾವವನ್ನು ಈಗಲೂ ಜನರಿಗೆ ಸೂಚಿಸುತ್ತಿರುವುದು, ಹೀಗೆ ಗೋಪಸ್ತಿ ಯರಿಗೆ ಆ ಬಲರಾಮನೊಡನೆ ವಿಹರಿಸಿದ ಅನೇಕರಾತ್ರಿಗಳೂ ಒಂದುರಾತ್ರಿ ಯಂತೆ ಸಂತೋಷದಿಂದ ಕಳೆದುಹೋದುವು. ಇದು ಆರುವತ್ತೈದನೆಯ ಆಥ್ಯಾಯವು - ಕೃಷ್ಣನು ಪೌಂಡ್ರಕ ಕಾಶೀರಾಜಾದಿಗಳನ್ನು

  • ವಧಿಸಿದ ವೃತ್ತಾಂತವು. - ಓ ಪಂಕ್ಷಿದ್ರಾಜಾ ! ಬಲರಾಮನು ಅತ್ತಲಾಗಿ ನಂದಗೋಕುಲಕ್ಕೆ ಹೋಗಿದ್ದಾಗ,ಇತ್ತಲಾ 1 ಕೃಷ್ಣನು ನಡೆಸಿದ ಇನ್ನೊಂದು ಕಾರವನ್ನು ಹೇ ಳುವೆನು ಕೇಳು! ಕರೂಶದೇಶಕ್ಕೆ ಅಧಿಪತಿಯಾದ ಪೌಂಡ್ರಕನೆಂಬ ಒಬ್ಬ ರಾಜ